ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಖಾತೆ ಹೊಂದಿದ್ದ ಪಾಕ್‌ ಗೂಢಚಾರ

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಜೈಸಲ್ಮೇರ್‌ (ಪಿಟಿಐ): ಐಎಸ್‌ ಏಜೆಂಟ್‌ ಎಂಬ ಆರೋಪದಡಿ ಬಂಧಿತನಾದ ನಂದ್‌ ಲಾಲ್‌ ಮಹಾರಾಜ್‌, ಗಡಿ ಜಿಲ್ಲೆಗಳಾದ ಬಾರ್ಮೇರ್‌ ಮತ್ತು ಜೈಸಲ್ಮೇರ್‌ನ ಜನರಿಂದ ಆಯಕಟ್ಟು ಪ್ರದೇಶಗಳ ಮಾಹಿತಿ ಪಡೆಯಲು ಎರಡು ಫೇಸ್‌ಬುಕ್‌ ಖಾತೆಗಳನ್ನು ಹೊಂದಿದ್ದ ಎಂದು ಶನಿವಾರ ಪೊಲೀಸರು ತಿಳಿಸಿದರು.

ನಂದ್‌ ಲಾಲ್‌ ಗರ್ಗ್‌ ಎಂದೂ ಈ ಗೂಢಚಾರನಿಗೆ ಹೆಸರಿತ್ತು. ಗಡಿ ಜಿಲ್ಲೆಗಳಲ್ಲಿ ತನ್ನ ಮೂಲಗಳ ಜತೆ ಸಂವಾದ ನಡೆಸಲು ಆತ ಫೇಸ್‌ಬುಕ್‌ ಖಾತೆ ಬಳಸಿಕೊಳ್ಳುತ್ತಿದ್ದ.ಜೈಸಲ್ಮೇರ್‌ನ ಹಲವೆಡೆ ತೆಗೆದ ಫೋಟೊಗಳನ್ನು ಆತ ಒಂದು ಖಾತೆಯಲ್ಲಿ ಪ್ರಕಟಿಸಿದ್ದ. ಆ ಖಾತೆಯಲ್ಲಿ ಪಾಕಿಸ್ತಾನದ ಕೆಲವು ಕಡೆ ಸೆರೆಹಿಡಿದ ಫೋಟೋಗಳು ಇದ್ದವು.

ಸಾಮಾಜಿಕ ಮಾಧ್ಯಮಗಳಲ್ಲಿ ಅಪರಿಚಿತರ ಜೊತೆಗೆ ಸಂವಾದ ಮಾಡಬೇಡಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್ಪಿ) ಗೌರವ್‌ ಯಾದವ್‌ ಅವರು ಎಚ್ಚರಿಸಿದರು.ಸಂಶಯಿತ ವ್ಯಕ್ತಿಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಕೋರಿದರು. ಪಾಕಿಸ್ತಾನದ ಸಂಗದ್‌ ಜಿಲ್ಲೆಯವನಾದ ಆತನನ್ನು ಭಾರತ– ಪಾಕಿಸ್ತಾನದ ಗಡಿ ಪ್ರದೇಶವಾದ ಜೈಸಲ್ಮೇರ್‌ನಲ್ಲಿ ಆಗಸ್ಟ್ ಮೊದಲ ವಾರ ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT