ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಗೆ ಸಾಯ್‌, ರೋವರ್ಸ್‌

ರಾಜ್ಯ ಬ್ಯಾಸ್ಕೆಟ್‌ಬಾಲ್‌ ಲೀಗ್‌ನ ವಲಯ ಮಟ್ಟದ ಟೂರ್ನಿ
Last Updated 27 ಆಗಸ್ಟ್ 2016, 19:51 IST
ಅಕ್ಷರ ಗಾತ್ರ

ವಿಜಯಪುರ: ಭಾರತ ಕ್ರೀಡಾ ಪ್ರಾಧಿಕಾರದ ಧಾರವಾಡ ಕೇಂದ್ರ (ಸಾಯ್‌) ಮತ್ತು ಕಲಬುರ್ಗಿಯ ಬಾಗವಾನ್ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡಗಳು ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಲೀಗ್‌ನ ವಲಯ ಮಟ್ಟದ ಟೂರ್ನಿಯ ಸೆಮಿಫೈನಲ್‌ ಹಂತ ಪ್ರವೇಶಿಸಿದವು.

ನಗರದ ಬಿ.ಎಲ್‌.ಡಿ.ಇ ಕಾಲೇಜು ಮೈದಾನದಲ್ಲಿ ಶನಿವಾರ ಹೊನಲು ಬೆಳಕಿನಲ್ಲಿ ನಡೆದ ಪಂದ್ಯಗಳಲ್ಲಿ ಧಾರವಾಡದ ರೋವರ್ಸ್‌ ಹಾಗೂ ಸ್ಥಳೀಯ ಬ್ರದರ್ಸ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡಗಳು ಕೂಡ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದವು.

ಕೊನೆಯ ಲೀಗ್‌ ಪಂದ್ಯದಲ್ಲಿ ಧಾರವಾಡದ ಸಾಯ್‌ ತಂಡ, ಬ್ರದರ್ಸ್‌ ಬ್ಯಾಸ್ಕೆಟ್‌ಬಾಲ್‌ ತಂಡದ ವಿರುದ್ಧ 60–29 ಅಂತರದ ಗೆಲುವು ಸಾಧಿಸಿತು. ಪಂದ್ಯದ ಮೊದಲಾರ್ಧದಲ್ಲಿ 31–9 ರಿಂದ ಮೇಲುಗೈ ಸಾಧಿಸಿದ್ದ ಸಾಯ್‌ ತಂಡ ದ್ವಿತೀಯಾರ್ಧದಲ್ಲಿ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿತು. ಸತೀಶ 22 ಮತ್ತು ವಾಗೀಶ 16 ಪಾಯಿಂಟ್‌ ಗಳಿಸಿ ಮಿಂಚಿದರು.

ಈ ಪಂದ್ಯದಲ್ಲಿ ಸೋತರೂ ಉಳಿದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ ಕಾರಣ ಬ್ರದರ್ಸ್‌ ತಂಡಕ್ಕೆ ಸೆಮಿಫೈನಲ್‌ ಹಾದಿ ನಿರಾತಂಕವಾಯಿತು. ಬೆಳಿಗ್ಗೆ ನಡೆದ ಪಂದ್ಯದಲ್ಲಿ ಈ ತಂಡ ಬಳ್ಳಾರಿಯ ಯಂಗ್ ಚಾಲೆಂಜರ್ಸ್ ವಿರುದ್ಧ 39–17 ರ ಗೆಲುವು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT