ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಾಂಶ ಸೋರಿಕೆ: ತನಿಖೆ ಆರಂಭ

Last Updated 27 ಆಗಸ್ಟ್ 2016, 20:01 IST
ಅಕ್ಷರ ಗಾತ್ರ

ಪ್ಯಾರಿಸ್‌ (ರಾಯಿಟರ್ಸ್‌): ಭಾರತದ ನೌಕಾಪಡೆಯ ಸ್ಕಾರ್ಪೀನ್‌ ಶ್ರೇಣಿಯ ಜಲಾಂತರ್ಗಾಮಿಯ ದತ್ತಾಂಶ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ಯಾರಿಸ್‌ನ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

ಫ್ರಾನ್ಸ್‌ನ  ಹಡಗು ನಿರ್ಮಾಣ ಸಂಸ್ಥೆ ಡಿಸಿಎನ್‌ಎಸ್‌ ನೀಡಿದ ದೂರನ್ನು ಆಧರಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ನ್ಯಾಯಾಂಗದ ಮೂಲಗಳು ತಿಳಿಸಿವೆ.

‘ನಾವು ಅಪರಿಚಿತ ವ್ಯಕ್ತಿಗಳ ವಿರುದ್ಧ ಒಪ್ಪಂದ ಉಲ್ಲಂಘನೆ ಮತ್ತು ನಂಬಿಕೆ ದ್ರೋಹದ ದೂರು ಸಲ್ಲಿಸಿದ್ದೇವೆ’ ಎಂದು  ಡಿಸಿಎನ್‌ಎಸ್‌ ಕಂಪೆನಿಯ ವಕ್ತಾರರು ಶುಕ್ರವಾರ ಹೇಳಿದ್ದಾರೆ. ಭಾರತದಲ್ಲಿ ನಿರ್ಮಾಣವಾಗುತ್ತಿರುವ ಸ್ಕಾರ್ಪೀನ್‌ ಶ್ರೇಣಿಯ ಆರು ಜಲಾಂತರ್ಗಾಮಿ ನಿರ್ಮಾಣ ಯೋಜನೆಯ ತಾಂತ್ರಿಕ ಮತ್ತು ರಹಸ್ಯ ಸಾಮರ್ಥ್ಯದ ಬಗೆಗಿನ ಮಾಹಿತಿ ಸೋರಿಕೆಯಾಗಿದೆ ಎಂದು ‘ದಿ ಆಸ್ಟ್ರೇಲಿಯನ್‌’ ಪತ್ರಿಕೆ ವರದಿ ಮಾಡಿತ್ತು. 

ಜಲಾಂತರ್ಗಾಮಿಗೆ ಸಂಬಂಧಿಸಿದ 22,000 ಪುಟಗಳಷ್ಟು ರಹಸ್ಯ ಮಾಹಿತಿ ಸೋರಿಕೆಯಾಗಿದೆ ಎಂದು ವರದಿಯಲ್ಲಿ ಪತ್ರಿಕೆ ಹೇಳಿತ್ತು. 
‘ದತ್ತಾಂಶ ಸೋರಿಕೆಯಾಗಲು ಸಾಧ್ಯವಿಲ್ಲ. ಕಂಪೆನಿಯ ರಹಸ್ಯ ಮಾಹಿತಿಗಳನ್ನು ಯಾರೋ ಕಳವು ಮಾಡಿರುವ ಸಾಧ್ಯತೆಯಿದೆ’ ಎಂದು ಫ್ರಾನ್ಸ್‌ ಸರ್ಕಾರದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT