ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಸಿಪ್‌ಗೆ ಸೋನಾಕ್ಷಿ ಗರಂ

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ಸಿನಿಮಾ ಮಂದಿಗೂ ಗಾಸಿಪ್‌ಗೂ ಬಿಡದ ನಂಟು. ಸುಖಾಸುಮ್ಮನೆ ಏನೇನೊ  ಗಾಸಿಪ್‌ ಮಾಡುತ್ತಲೇ ಇರುತ್ತಾರೆ. ಇಂತಹ ಗಾಸಿಪ್‌ಗಳೆಲ್ಲಾ ನಮ್ಮ ಮೇಲೆ ಪರಿಣಾಮ ಬೀರದೆ ಇರಬಹುದು. ಆದರೆ ಮಗಳ ಬಗ್ಗೆ ಇಲ್ಲಸಲ್ಲದ ಆರೋಪ ಕೇಳಿದಾಗ ನನ್ನ ಅಮ್ಮ ಗಾಸಿಗೊಳ್ಳಗಾಗುತ್ತಾರೆ’.

ಹೀಗೆಂದು ಅಳಲು ತೋಡಿಕೊಂಡವರು ನಟಿ ಸೋನಾಕ್ಷಿ ಸಿನ್ಹಾ.
ಅಕಿರಾ ಸಿನಿಮಾದ ಪ್ರಚಾರದಲ್ಲಿ ಬಿಝಿಯಾಗಿರುವ ಸೋನಾಕ್ಷಿ ತಮ್ಮ ಮದುವೆಯ ಕುರಿತು ಹರಿದಾಡುತ್ತಿರುವ ಸುದ್ದಿಗಳ ಕುರಿತು ಗರಂ ಆಗಿದ್ದಾರೆ.

‘ಮದುವೆ ಗಿದ್ವೆ ಏನೂ ಇಲ್ಲ. ನನ್ನ ನಿಶ್ಚಿತಾರ್ಥವೂ ಆಗಿಲ್ಲ. ಇದೆಲ್ಲಾ ಸುಳ್ಳು ಸುದ್ದಿ’ ಎಂದು ತಿರುಗೇಟು ನೀಡಿದ್ದಾರೆ.

‘ಇಂತಹ ಗಾಸಿಪ್‌ಗಳಿಂದ ನನಗೇನೂ ಬೇಸರ ಆಗುವುದಿಲ್ಲ. ಇದೆಲ್ಲಾ ನಮ್ಮ ವೃತ್ತಿ ಜೀವನದಲ್ಲಿ ಮಾಮೂಲು. ಆದರೆ ನನ್ನ ಅಮ್ಮ ನನ್ನ ಬಗ್ಗೆ ಹೀಗೆಲ್ಲಾ ಸುದ್ದಿ ಕೇಳಿದಾಗ ಚಿಂತೆಮಾಡುತ್ತಾರೆ’  ಎನ್ನುವುದು ಸೋನಾಕ್ಷಿ ಬೇಸರಕ್ಕೆ ಕಾರಣ.

‘ನನ್ನ ಅಪ್ಪ ಗಾಸಿಪ್‌ಗಳಿಗೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಕುರಿತು ಇಂತಹ ಹಲವು ಗಾಸಿಪ್‌ ಸುದ್ದಿಗಳು ಹರಿದಾಡಿದಾಗ ಅವರು ಅದನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡವರಲ್ಲ. ಹಾಗೆಯೇ ನನ್ನ ವಿಷಯದಲ್ಲಿಯೂ ಅವರು ನನಗೆ ಚಿಂತಿಸಬೇಡ. ಇಂಥವು ಸಹಜ ಎಂದು ಧೈರ್ಯ ತುಂಬುತ್ತಾರೆ. ಆದರೆ ಅಮ್ಮ ಹಾಗಲ್ಲ. ಅವರಿಗೆ ನನ್ನ ಬಗ್ಗೆ ಚಿಂತೆಯಾಗುತ್ತದೆ’ ಎನ್ನುತ್ತಾರೆ ಅವರು.

‘ಇಂತಹ ಸುದ್ದಿಗಳು ಹರಿದಾಡಿದಾಗಲೆಲ್ಲ ನಾನು ಅಮ್ಮನನ್ನು ಸಮಾಧಾನ ಮಾಡಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಆಕೆಗೆ ಇವೆಲ್ಲಾ ಅರ್ಥ ಆಗಲು ಸಮಯ ತೆಗೆದುಕೊಳ್ಳುತ್ತದೆ. ನಿಧಾನವಾಗಿ ನಾನು ವಿವರಿಸಿದಾಗ ಅರ್ಥ ಮಾಡಿಕೊಳ್ಳುತ್ತಾಳೆ’ ಎಂದಿದ್ದಾರೆ.

‘ಈ ಗಾಸಿಪ್‌ಗಳು ಕೇವಲ ನನ್ನ ಬಗ್ಗೆ ಆಗಿದ್ದರೆ ಪರ್‍ವಾಗಿಲ್ಲ, ನಾನು ಹೇಗೊ ಸಹಿಸಿಕೊಂಡು ಸುಮ್ಮನಾಗುತ್ತೇನೆ. ಆದರೆ ನನ್ನ ಕುಟುಂಬದವರನ್ನು ಮತ್ತು ಸ್ನೇಹಿತರನ್ನು ಇದರೊಳಗೆ ಸೇರಿಸಿದರೆ ಸಹಿಸುವುದು ಸಾಧ್ಯವಿಲ್ಲ’ ಎಂದು ಗಾಸಿಪ್‌ ಮಾಡುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT