ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಟ್‌ಕೇಸ್‌ನಲ್ಲಿ ಯುವತಿಯ ಶವ

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉಲ್ಲಾಳ ಉಪನಗರ ಬಳಿಯ ಆಕ್ಸ್‌ಫರ್ಡ್‌ ಕಾಲೇಜಿನ ಆವರಣದಲ್ಲಿ ಭಾನುವಾರ ಸಂಜೆ ಸೂಟ್‌ಕೇಸ್‌ನಲ್ಲಿ ಯುವತಿಯೊಬ್ಬರ
ಶವ ಪತ್ತೆಯಾಗಿದೆ.
‘ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಕೆಲ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಸೂಟ್‌ಕೇಸ್‌ನಲ್ಲಿ ಶವವಿರುವುದು ಗೊತ್ತಾಯಿತು. ಬಳಿಕ ಶವವನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ’ ಎಂದು ಬ್ಯಾಡರಹಳ್ಳಿ ಪೊಲೀಸರು ತಿಳಿಸಿದರು.

ಎಲ್ಲಿಂದಲೋ ತಂದು ಎಸೆದ ಶವ?: ಯುವತಿಗೆ 23ರಿಂದ 25 ವರ್ಷ ವಯಸ್ಸಾಗಿರಬಹುದು. ಕೆಲ ದಿನಗಳ ಹಿಂದೆಯೇ ಯಾರೋ ದುಷ್ಕರ್ಮಿಗಳು ಯುವತಿಯನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿ ಹಾಕಿ ಎಸೆದು ಹೋಗಿರಬಹುದು ಎಂಬ ಅನುಮಾನವಿದೆ.

ಕಾಲೇಜು ಆವರಣ ಪಕ್ಕವೇ ಕಾಲುವೆ ಇದ್ದು,  ಅದಕ್ಕೆ ಹೊಂದಿಕೊಂಡ ಸ್ಥಳದಲ್ಲೇ ಈ ಸೂಟ್‌ಕೇಸ್‌ ಬಿದ್ದಿತ್ತು ಎಂದು ವಿವರಿಸಿದರು. ದುರ್ವಾಸನೆ ಎಲ್ಲಿಂದ ಬರುತ್ತಿದೆ ಎಂದು ಪತ್ತೆಹಚ್ಚಲು ಹೋದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಒಡೆದು ಪರಿಶೀಲನೆ: ಪರಿಶೀಲನೆ ವೇಳೆ ಅನುಮಾನಾಸ್ಪದ ಸೂಟ್‌ಕೇಸ್‌ ಗಮನಕ್ಕೆ ಬಂದಿತ್ತು. ಆದರೆ ಅದನ್ನು ಲಾಕ್‌ ಮಾಡಲಾಗಿತ್ತು. 
‘ಮೇಲೆತ್ತಿಕೊಂಡು ಬಂದು ಎಷ್ಟೇ ಪ್ರಯತ್ನಿಸಿದರೂ ತೆರೆಯಲು ಆಗಲಿಲ್ಲ.  ಅದನ್ನು ಒಡೆದು ಶವ ಹೊರತೆಗೆಯಲಾಯಿತು’  ಎಂದು ಪೊಲೀಸರು ವಿವರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT