ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂಳು ಹಿಡಿದ ‘ಹೈಟೆಕ್’ ಭದ್ರತೆ ಪ್ರಸ್ತಾವ

Last Updated 29 ಆಗಸ್ಟ್ 2016, 4:12 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ಹಾಗೂ ವಿಕಾಸಸೌಧದ ಭದ್ರತಾ ಸಲಕರಣೆಗಳನ್ನು ಅಳವಡಿಸಿ 2017ಕ್ಕೆ 10 ವರ್ಷ ತುಂಬಲಿದೆ.  ಅವುಗಳನ್ನು ತೆಗೆದು ಹಾಕಿ ಭದ್ರತಾ ವ್ಯವಸ್ಥೆ ಆಧುನೀಕರಣ ಮಾಡ ಬೇಕೆಂದು ಪೊಲೀಸ್ ಅಧಿಕಾರಿಗಳು ಗೃಹ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವ ಒಂದೂವರೆ ವರ್ಷದಿಂದ ದೂಳು ತಿನ್ನುತ್ತಿದೆ.

ವಿಧಾನಸೌಧ ಹಾಗೂ ವಿಕಾಸಸೌಧ ದಲ್ಲಿ ಸದ್ಯ 141 ಸಿ.ಸಿ ಟಿ.ವಿ ಕ್ಯಾಮೆರಾಗಳು, ಪ್ರವೇಶದ್ವಾರಗಳಲ್ಲಿ 12 ಲೋಹ ಶೋಧಕಗಳು ಹಾಗೂ 50 ಹ್ಯಾಂಡ್ ಹೋಲ್ಡ್ ಶೋಧಕಗಳಿವೆ. ಅವುಗಳಲ್ಲಿ ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈಗಿರುವ ಉಪಕರಣಗಳೆಲ್ಲ 2007ರಲ್ಲಿ ಅಳವಡಿಸಿದವು. ಆ ನಂತರ ಏಳು ಬ್ಯಾಗೇಜ್ ಸ್ಕ್ಯಾನರ್‌ ಹೊರತುಪಡಿಸಿದರೆ, ಬೇರ್‌್ಯಾವ ಸಲಕರಣೆಗಳೂ ಬಂದಿಲ್ಲ. 

‘ಉಗ್ರರ ಟಾರ್ಗೆಟ್ ಪಟ್ಟಿಯಲ್ಲಿರುವ ಈ ಸೌಧಗಳಿಗೆ ಶಸ್ತ್ರಸಜ್ಜಿತ ಸಿಬ್ಬಂದಿಯ ಸರ್ಪಗಾವಲು ಬೇಕಿದೆ. ನಿತ್ಯ ಬಂದು ಹೋಗುವವರ ಮೇಲೆ ನಿಗಾ ಇಡಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕಿದೆ. ಹೀಗಾಗಿ, ಅಗತ್ಯ ಸಲಕರಣೆಗಳ ಬಗ್ಗೆ ಪಟ್ಟಿ ಸಿದ್ಧಪಡಿಸಿ 2015ರಲ್ಲೇ ಗೃಹ ಇಲಾಖೆಗೆ ವರದಿ ಸಲ್ಲಿಸಲಾಗಿದೆ’ ಎನ್ನುತ್ತಾರೆ  ಅಧಿಕಾರಿಗಳು.

ಯಾವ್ಯಾವ ಅಂಶಗಳಿದ್ದವು: ‘ವಿಧಾನ ಸೌಧ ಹಾಗೂ ವಿಕಾಸಸೌಧಕ್ಕೆ ಕನಿಷ್ಠ ಎಂದರೂ ನಿತ್ಯ 1 ಲಕ್ಷ ಜನ ಬಂದು ಹೋಗುತ್ತಾರೆ. ಇರುವ 150 ಪೊಲೀಸರು, ಅಷ್ಟೂ ಜನರ ಮೇಲೆ ನಿಗಾ ಇಡಲು ಸಾಧ್ಯವಿಲ್ಲ. ಹೀಗಾಗಿ, ಆವರಣದ ಸುತ್ತಲೂ 12 ವೀಕ್ಷಣಾ ಗೋಪುರಗಳನ್ನು ನಿರ್ಮಿಸಬೇಕು’ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿತ್ತು.

‘ಸುತ್ತಲೂ ಪೆಟ್ರೋಲಿಂಗ್ ಫುಟ್‌ ಪಾತ್ ನಿರ್ಮಿಸಬೇಕು. ಸಿಬ್ಬಂದಿ ಶಸ್ತ್ರ ಹಿಡಿದು 24 ತಾಸೂ ಅಲ್ಲಿ ಗಸ್ತು ತಿರುಗುತ್ತಿರಬೇಕು.’
‘ನಿತ್ಯ 2,500  ವಾಹನಗಳು ವಿಧಾನ ಸೌಧದ ಆವರಣಕ್ಕೆ ಬಂದು ಹೋಗುತ್ತವೆ. ಅವುಗಳನ್ನೆಲ್ಲ ತಪಾಸಣೆ ನಡೆಸಿ ಒಳಗೆ ಬಿಡುವುದು ಸಿಬ್ಬಂದಿಯ ಶ್ರಮ ಹೆಚ್ಚಿಸುತ್ತದೆ. ಹೀಗಾಗಿ, ಆ ವಾಹನಗಳಿಗೆ ಬಾರ್‌ ಕೋಡ್ ನೀಡಬೇಕು. ಆಗ ವಾಹನ ಬರುತ್ತಿದ್ದಂತೆಯೇ ಗೇಟ್  ತಾನಾಗೇ ತೆರೆದುಕೊಳ್ಳುತ್ತದೆ.’
‘ವ್ಯಕ್ತಿಗಳ ಚಹರೆ ಗುರುತಿಸುವಂಥ (ಫೇಸ್‌ ರೆಕಗ್ನಿಷನ್)  ಡಿಜಿಟಲ್ ಕ್ಯಾಮೆರಾ ಅಳವಡಿಸಬೇಕು. ಶಂಕಿತ ಉಗ್ರರು ಹಾಗೂ ಅಪರಾಧ ಹಿನ್ನೆಲೆಯ ವ್ಯಕ್ತಿಗಳ ಭಾವಚಿತ್ರಗಳನ್ನು ನಾವು ಕಂಪ್ಯೂಟರ್‌ಗಳಲ್ಲಿ ಹಾಕಿರುತ್ತೇವೆ. ವಿಧಾನಸೌಧದ ಆವರಣದಲ್ಲಿ ಅಳವಡಿಸ ಲಾಗುವ ಕ್ಯಾಮೆರಾಗಳು, ಈ ಕಂಪ್ಯೂ
ಟರ್‌ಗಳ ಜತೆ ಸಂಪರ್ಕ ಹೊಂದಿರುತ್ತವೆ. ಅದೇ ಚಹರೆ ಹೋಲುವ ವ್ಯಕ್ತಿ ವಿಧಾನಸೌಧ ಸುತ್ತಮುತ್ತ ಕಾಣಿಸಿಕೊಂಡರೆ, ನಿಯಂತ್ರಣ ಕೊಠಡಿಯಲ್ಲಿ
ರುವ ಅಲಾರಂ ಕೂಗಿಕೊಳ್ಳುತ್ತದೆ.’

‘ವಿಶೇಷ ಕಮಾಂಡೊ ಪಡೆಯನ್ನು ಸನ್ನದ್ಧಗೊಳಿಸಿ, ದಿನವಿಡೀ ಗಸ್ತಿಗೆ ನಿಯೋಜಿಸಬೇಕು. ಜತೆಗೆ ಈಗಿರುವ ಲೋಹಶೋಧಕ, ಬ್ಯಾಗೇಜ್ ಸ್ಕ್ಯಾನರ್, ಅಂಡರ್ ವೆಹಿಕಲ್ ಸರ್ಚ್‌ ಮಿರರ್ ಉಪಕರಣಗಳ ಸಂಖ್ಯೆ ಹೆಚ್ಚಿಸಬೇಕು ಎಂಬುದು ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಪ್ರಸ್ತಾವವನ್ನು 2015ರ ಜನವರಿಯಲ್ಲಿ ಗೃಹ ಇಲಾಖೆಗೆ ಸಲ್ಲಿಸಲಾಗಿತ್ತು. ಈ ವ್ಯವಸ್ಥೆಗೆ ಅಂದಾಜು ₹ 10 ಕೋಟಿ ವೆಚ್ಚ ತಗಲುವುದಾಗಿ ಹೇಳಲಾಗಿತ್ತು.’


‘ಪ್ರಸ್ತಾವ ಪರಿಶೀಲಿಸಿದ್ದ ಹಿಂದಿನ ಗೃಹಸಚಿವ ಕೆ.ಜೆ.ಜಾರ್ಜ್, ಜಾರಿಗೆ ತರುವುದಾಗಿ ಹೇಳಿದ್ದರು.  ಈಗಿನ ಗೃಹಸಚಿವ ಜಿ.ಪರಮೇಶ್ವರ ಅವರೂ, ₹ 5 ಕೋಟಿ ವೆಚ್ಚದಲ್ಲಿ ವಿಧಾನಸೌಧದ ಭದ್ರತೆಯನ್ನು ಆಧುನೀಕರಣಗೊಳಿಸುವ ಭರವಸೆ ಕೊಟ್ಟಿದ್ದರು. ಆದರೆ, ಇನ್ನೂ ಯಾವ ಕಾರ್ಯಗಳೂ ಆಗದೆ ಪ್ರಸ್ತಾವ ಮೂಲೆ ಸೇರಿದೆ’ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ಖಾಸಗಿ ಏಜೆನ್ಸಿಯಿಂದ ನಿರ್ವಹಣೆ
‘ವಿಧಾನಸೌಧದ ಭದ್ರತಾ ಸಲಕರಣೆಗಳ ನಿರ್ವಹಣೆಯನ್ನು ಮೊದಲು ಡಿಪಿಎಆರ್‌ ಹಾಗೂ ಪೊಲೀಸ್ ಇಲಾಖೆಗಳೇ ನೋಡಿಕೊಳ್ಳುತ್ತಿದ್ದವು. ಇದೇ ಫೆಬ್ರುವರಿಯಿಂದ ನಿರ್ವಹಣೆಯ ಹೊಣೆಯನ್ನು ‘ಎಎಂಸಿ’ ಎಂಬ ಖಾಸಗಿ ಏಜೆನ್ಸಿಗೆ ವಹಿಸಲಾಗಿದೆ.’

‘ಉಪಕರಣಗಳ ನಿರ್ವಹಣೆ ಮೊದಲಿ ನಿಂದಲೂ ಸರಿಯಾಗಿಯೇ ನಡೆಯುತ್ತಿದೆ. ಆದರೆ,  ಈಗಿನ ತಂತ್ರಜ್ಞಾನಕ್ಕೆ ತಕ್ಕಂತೆ ಉಪಕರಣ
ಗಳನ್ನು ಬದಲಾಯಿಸಬೇಕಿದೆ’ ಎಂದು ವಿಧಾನಸೌಧ ಭದ್ರತಾ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT