ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಲ್‌ಪೋಳ್ದ್‌ ಹಬ್ಬಕ್ಕೆ ನಾಲ್ಕುನಾಡು ಸಜ್ಜು

ಆಯುಧಗಳಿಗೆ ಪೂಜೆ; ಕೋವಿಯನ್ನು ಪೂಜಿಸಲು ತೋಕುಪೂ ಬಳಕೆ
Last Updated 29 ಆಗಸ್ಟ್ 2016, 11:20 IST
ಅಕ್ಷರ ಗಾತ್ರ

ನಾಪೋಕ್ಲು: ನಾಲ್ಕು ನಾಡು ವ್ಯಾಪ್ತಿಯಲ್ಲಿ ಆ. 28ರಂದು ಆಚರಿಸುವ ಕೈಲ್‌ಪೋಳ್ದ್‌ ಹಬ್ಬಕ್ಕೆ ಸಂಪೂರ್ಣವಾಗಿ ಸಜ್ಜುಗೊಂಡಿದೆ. ಜಿಲ್ಲೆಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ಸೆ. 3ರಂದು ಸಂಭ್ರಮದಿಂದ ಆಚರಿಸಲಾಗುತ್ತದೆ.

ಕೈಲ್ ಪೊಳ್ದ್ ಒಟ್ಟಾರೆಯಾಗಿ ಮನರಂಜನಾ ಹಬ್ಬ. ಕೈಲ್ ಎಂದರೆ ಆಯುಧ. ಪೊಳ್ದ್ ಎಂದರೆ ಪೂಜೆ ಎಂದರ್ಥ. ಅಂತೆಯೇ ಕೈಲ್ ಪೊಳ್ದ್ ಯನ್ನು ಆಯಧ ಪೂಜೆ ಎಂದು ಕರೆಯುತ್ತಾರೆ.

ಈ ಹಿಂದೆ ಪ್ರಾಣಿಗಳ ಬೇಟೆಗೆ ಕೋವಿ ಕತ್ತಿಗಳನ್ನು ಬಳಸುತ್ತಿದ್ದರು. ಆದರೆ ವ್ಯವಸಾಯದ ಸಂದರ್ಭದಲ್ಲಿ ಅಂದರೆ ಸಿಂಹ ಮಾಸದಲ್ಲಿ ಆಯುಧಗಳನ್ನು ಮುಟ್ಟದೆ ತಮ್ಮ ಮನೆಯ ಕನ್ನಿಕೋಂಬರೆಯಲ್ಲಿ ಇಡುತ್ತಾರೆ. ಕೃಷಿ ಕಾರ್ಯ ಮುಗಿದ ನಂತರ ಆಯುಧಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಅವುಗಳನ್ನು ಹೊರಗೆ ತೆಗೆಯಲಾಗುತ್ತದೆ. ಈ ಆಯುಧಗಳನ್ನು ಕನ್ನಿಕೋಂಬರೆಯಿಂದ ಹೊರ ತೆಗೆದು ಭಕ್ತಿಯಿಂದ ಪೂಜಿಸಲಾಗುತ್ತದೆ. ಕೋವಿಯನ್ನು ಪೂಜಿಸಲು ತೋಕುಪೂ (ಕೋವಿ ಹೂ)ವನ್ನು ಬಳಸುತ್ತಾರೆ.

ಕಾಡುಗಳಲ್ಲಿ ಬೆಳೆಯುವ ವರ್ಣ ರಂಜಿತ ಹೂ ಇದು. ಕೈಲ್‌ ಮುಹೂರ್ತ ಹಬ್ಬದ ನಂತರ ಕತ್ತಿ ಕೋವಿಗಳು ಬಳಕೆಯಾದರೆ. ಕೃಷಿ ಕೆಲಸದಲ್ಲಿ ಬಳಸುವ ನೇಗಿಲು, ನೊಗ, ಗುದ್ದಲಿ ಇತ್ಯಾದಿ ವ್ಯವಸಾಯ ಉಪಕರಣಗಳಿಗೆ ವಿರಾಮ.

ಅಂತೆಯೇ ಈ ಎಲ್ಲಾ ಉಪಕರಣ ಗಳನ್ನು ತೊಳೆದು ಪೂಜೆ ಸಲ್ಲಿಸಲಾ ಗುತ್ತದೆ. ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಕುಂಕುಮ ಗಂಧ ಹಚ್ಚಿ ಪೂಜಿಸುತ್ತಾರೆ. ಅಕ್ಕಿ ಬೆಲ್ಲದಿಂದ ಮಾಡಿದ ಪಾಯಸವನ್ನು ಅವು ಗಳಿಗೆ ತಿನ್ನಿಸಲಾ ಗುತ್ತದೆ.

ಕಡಂಬಿಟ್ಟು ಹಾಗೂ ಹಂದಿ ಮಾಂಸದ ಊಟ ಕೈಲ್ ಮುಹೂರ್ತ ಹಬ್ಬದ ವಿಶೇಷ.ಬಳಿಕ ಎಲ್ಲರೂ ಮಂದ್‌ನಲ್ಲಿ ಸೇರುತ್ತಾರೆ. ಕೋವಿಯ ಮೂಲಕ ಗುಂಡು ಹಾರಿಸಿ ಹಬ್ಬದ ಆಚರಣೆಯನ್ನು ಸಾರುತ್ತಾರೆ.

ಮಕ್ಕಳಾದಿಯಾಗಿ ಹಿರಿಯರವರೆಗೆ ಎಲ್ಲರಿಗೂ ಅಲ್ಲಿ ಶೌರ್ಯ ಪ್ರದರ್ಶನದ ವಿವಿಧ ಸ್ಪರ್ಧೆಗಳು ನಡೆಯುತ್ತವೆ. ಮರದ ತುದಿಗೆ ತೆಂಗಿನಕಾಯಿ ಕಟ್ಟಿ ಅದಕ್ಕೆ ಗುಂಡು ಹೊಡೆಯಲಾಗುತ್ತದೆ. ಇಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಬೇಟೆಯಾಡುವ ಸಮಯವನ್ನು ನಿರ್ಧರಿಸುತ್ತಾರೆ. ಈಚೆಗೆ ಬಹುತೇಕ ಆಚರಣೆಗಳು ಮರೆಯಾಗಿವೆ.ಗ್ರಾಮೀಣ ಕ್ರೀಡಾ ಕೂಟಗಳು ಜನಪ್ರಿಯವಾಗುತ್ತಿದೆ.

ಹಬ್ಬದ ಅಂಗವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ವಿವಿಧ ಯುವಕಸಂಘಗಳು ಮನರಂಜನಾ ಕ್ರೀಡಾಕೂಟವನ್ನು ನಡೆಸುತ್ತವೆ. ನಾಪೋಕ್ಲುವಿನ ಭಗವತಿ ಯುವಕಸಂಘ, ಬಲ್ಲಮಾವ ಟಿಯ ಅಪೋಲೋ ಯುವಕಸಂಘ, ಕಬಡಕೇರಿಯ ಕಬಡಕೇರಿ ಯುವಕಸಂಘ, ನೆಲಜಿ ಗ್ರಾಮದ ಕೈಲು ಮುಹೂರ್ತ ಕ್ರೀಡಾ ಸಮಿತಿ, ಬೇತು ಗ್ರಾಮದ ಮಕ್ಕಿ ಶಾಸ್ತಾವು ಯುವಕ ಸಂಘ ಸೇರಿದಂತೆ ಹಲವು ಸಂಘಗಳು ಗ್ರಾಮೀಣ ಕ್ರೀಡಾಕೂಟ ನಡೆಸಿ ಹಬ್ಬದ ಮಹತ್ವವನ್ನು ಸಾರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT