ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ–ರಾಧೆ ವೇಷದಲ್ಲಿ ರಂಜಿಸಿದ ಚಿಣ್ಣರು

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಿದ್ದ ಈ ಕಾರ್ಯಕ್ರಮ
Last Updated 29 ಆಗಸ್ಟ್ 2016, 11:23 IST
ಅಕ್ಷರ ಗಾತ್ರ

ಕುಶಾಲನಗರ: ಸ್ಥಳೀಯ ಕಾವೇರಿ ಕಲಾ ಪರಿಷತ್ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಭಾನುವಾರ ಸರ್ಕಾರಿ ಮಾದರಿ ಪ್ರಾಥಮಿ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ 4ನೇ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪುಟಾಣಿಗಳು ಕೃಷ್ಣ ಮತ್ತು ರಾಧೆ ವೇಷ ಧರಿಸಿ ಎಲ್ಲರ ಗಮನ ಸೆಳೆದರು.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಮಕ್ಕಳು ಕೃಷ್ಣ ರಾಧೆಯರ ವೇಷ ಭೂಷಣದೊಂದಿಗೆ  ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಇದೇ ಸಂದರ್ಭ ಪುರುಷರಿಗೆ ಕಬಡ್ಡಿ, ಹಗ್ಗಜಗ್ಗಾಟ ಹಾಗೂ ಕಣ್ಣಿಗೆ ಬಟ್ಟೆ ಕಟ್ಟಿ ಮೊಸರು ಕುಡಿಕೆ ಪಡೆಯುವ ಸ್ಪರ್ಧೆಗಳನ್ನು ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ , ಮೊಸರು ಕುಡಿಕೆ ಒಡೆ ಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕೃಷ್ಣ ಛದ್ಮವೇಷ ಸ್ಪರ್ಧೆ : 0–3 ವರ್ಷದ ಒಳಗಿನ ಮಕ್ಕಳಲ್ಲಿ  ಲೀಶನ್ ಪ್ರಥಮ, ವೈಷ್ಣವಿ ದ್ವಿತೀಯ, ಸಾಧನಾ ತೃತೀಯ, 3 ರಿಂದ 6 ವರ್ಷದೊಳಗಿನ ಮಕ್ಕಳಲ್ಲಿ ತೇಜಸ್ ಪ್ರಥಮ, ಅಂಕಿತಾ ದ್ವಿತೀಯ, ಲಕ್ಸ್ ಜೇನ್ ತೃತೀಯ, 6 ರಿಂದ 12  ವರ್ಷದೊಳಗಿನ ಮಕ್ಕಳಲ್ಲಿ ಸಿಂಚನಾ ಪ್ರಥಮ, ಅಮನ್ ದೀಪ್ ದ್ವಿತೀಯ ಹಾಗೂ ಶ್ರೇಯಾಂಕ ತೃತೀಯರಾದರು

ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಶೈಜಾಲ್ ಪ್ರಥಮ, ರೇಖಾಕುಮಾರಿ ದ್ವಿತೀಯ, ಹಗ್ಗ ಜಗ್ಗಾಟದಲ್ಲಿ ಭವ್ಯ ತಂಡ ಪ್ರಥಮ ಹಾಗೂ ದಿವ್ಯ ತಂಡ ದ್ವಿತೀಯ ಸ್ಥಾನಗಳಿಸಿದರು. 

ಕಾರ್ಯಕ್ರಮವನ್ನು ಕಾವೇರಿ ಕಲಾ ಪರಿಷತ್ ಅಧ್ಯಕ್ಷ  ಕೆ.ಜೆ.ಸತೀಶ್ ಉದ್ಘಾಟಿ ಸಿದರು. ಪರಿಷತ್ ಕಾರ್ಯದರ್ಶಿ ಆಶಾ ಅಶೋಕ್, ನಿರ್ದೇಶಕರಾದ ಜನಾ ರ್ಧನ್, ಇಂದಿರಾತಿಮ್ಮಪ್ಪ, ಕೆ.ಕೆ. ದಿನೇಶ್, ಕೆ.ಪಿ. ಚಂದ್ರಶೇಖರ್, ಅನೀಶ್, ವಿಶ್ವನಾಥ್ ರೈ, ಯಶೋಧ, ಕೆ.ಎಸ್.ರಾಜಶೇಖರ್, ಉಮಾ ಪ್ರಭಾಕರ್ ಇದ್ದರು.ತೀರ್ಪುಗಾರರಾಗಿ ಧನಲಕ್ಷ್ಮಿ, ಚಿತ್ರಾಜನಾರ್ಧನ್, ಭಾವನಾ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT