ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಮನ್‌ನಲ್ಲಿ ಬಾಂಬ್‌ ದಾಳಿ: 71 ಸಾವು

ಸೇನಾ ನೇಮಕಾತಿ ಕೇಂದ್ರದ ಮೇಲೆ ಗುರಿ, ಹೊಣೆ ಹೊತ್ತ ಐಎಸ್‌
Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಏಡನ್‌ (ಎಎಫ್‌ಪಿ): ಇಲ್ಲಿನ ಸೇನಾ ನೇಮಕಾತಿ ಕೇಂದ್ರದ ಮೇಲೆ ಸೋಮವಾರ ನಡೆದ ಆತ್ಮಹತ್ಯಾ ಬಾಂಬ್‌ ದಾಳಿಯಲ್ಲಿ  71 ಮಂದಿ ಸಾವಿಗೀಡಾಗಿದ್ದಾರೆ.
ಸ್ಫೋಟಕಗಳಿದ್ದ ಕಾರನ್ನು ನುಗ್ಗಿಸುವ  ಮೂಲಕ ದಾಳಿ ನಡೆಸಿದ್ದು, ಐಎಸ್‌ ಸಂಘಟನೆ ಇದರ ಹೊಣೆ ಹೊತ್ತುಕೊಂಡಿದೆ. ಈ ಘಟನೆಯಲ್ಲಿ 29ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಏಡನ್‌ ನಗರದ ಶಾಲೆಯೊಂದರಲ್ಲಿ ಈ ನೇಮಕಾತಿ ಕೇಂದ್ರವನ್ನು ಆರಂಭಿಸಲಾಗಿತ್ತು. ವಾಹನ ಸಂಚಾರಕ್ಕೆ ಗೇಟುಗಳನ್ನು ತೆರೆದ ಸಂದರ್ಭದಲ್ಲಿ ಕಾರು ನುಗ್ಗಿಸಿ ಈ ದಾಳಿ ನಡಸಲಾಗಿದೆ.

ಸ್ಫೋಟದಿಂದ ಕಟ್ಟಡದ ಚಾವಣಿ ಕುಸಿದಿದ್ದರಿಂದ ಹಲವು ಯುವಕರು ಸಾವಿಗೀಡಾಗಿದ್ದಾರೆ. ಬಂದರು ನಗರ ಏಡನ್‌ನಲ್ಲಿ ಪದೇ ಪದೇ ಬಾಂಬ್‌ ದಾಳಿಗಳು ನಡೆಯುತ್ತಿವೆ. ಜತೆಗೆ ಅಧಿಕಾರಿಗಳು ಹಾಗೂ ಭದ್ರತಾ ಪಡೆ ಸಿಬ್ಬಂದಿಯನ್ನು ಹತ್ಯೆಗೈಯುವ ಪ್ರಕರಣಗಳು ಹೆಚ್ಚುತ್ತಿವೆ. ಈ ದಾಳಿಗಳ ಹೊಣೆಯನ್ನು ಬಹುತೇಕ ಅಲ್‌ಖೈದಾ ಅಥವಾ ಐಎಸ್‌ ಸಂಘಟನೆ ಹೊತ್ತುಕೊಂಡಿವೆ.

ಉಗ್ರರ ವಶದಲ್ಲಿರುವ ದಕ್ಷಿಣ ಪ್ರಾಂತ್ಯವನ್ನು ಮತ್ತೆ ಪಡೆಯುವ ನಿಟ್ಟಿನಲ್ಲಿ ಯೆಮನ್‌ ಅಧಿಕಾರಿಗಳು ಏಡನ್‌ನಲ್ಲಿ ಕಳೆದ ಎರಡು ತಿಂಗಳ ಕಾಲ ನೂರಾರು ಸೈನಿಕರಿಗೆ ತರಬೇತಿ ನೀಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸೌದಿ ನೇತೃತ್ವದ ಮಿತ್ರಪಡೆಗಳ ನೆರವಿನೊಂದಿಗೆ ಯೆಮನ್‌ನ ಸೇನಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಬ್ಯಾನ್‌ ನಗರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದವು. ಕಾರ್ಯಾಚರಣೆ ಸಂದರ್ಭದಲ್ಲಿ ಅಲ್‌ಖೈದಾ ಸಂಘಟನೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರುವಶಪಡಿಸಿಕೊಂಡಿರುವ ನಗರಗಳ ಸುತ್ತ ಇನ್ನೂ ಉಗ್ರರು ನೆಲೆಸಿದ್ದು, ಶಾಬ್ವಾ ಪ್ರಾಂತ್ಯದ ಬಹುತೇಕ ಪ್ರದೇಶ ಅವರ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.
ಇರಾನ್‌ನ ಬೆಂಬಲ ಪಡೆದಿರುವ  ಬಂಡುಕೋರರು ಮತ್ತು ಉಗ್ರರ ವಿರುದ್ಧ ಯೆಮನ್‌ ಪಡೆಗಳು ಕಳೆದ ಒಂದು ವರ್ಷದಿಂದ ಕಾರ್ಯಾಚರಣೆ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT