ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಗೆಲ್ಲಲಿ: ಐಎಸ್‌

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌(ಪಿಟಿಐ): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌  ಆಯ್ಕೆಯಾಗಬೇಕು ಎಂದು ಐಎಸ್‌ ಸಂಘಟನೆ ಹೇಳುವ ಮೂಲಕ ಅಚ್ಚರಿ ಮೂಡಿಸಿದೆ.

ಟ್ರಂಪ್‌ ನೇತೃತ್ವದಲ್ಲಿ ಅಮೆರಿಕ ಸ್ವಯಂ ನಾಶವಾಗುವ ಮಾರ್ಗವನ್ನು ಕಂಡುಕೊಳ್ಳುತ್ತದೆ.   ಹೀಗಾಗಿ ಟ್ರಂಪ್‌ ಅವರೇ ಆಯ್ಕೆಯಾಗಬೇಕೆಂದು ಬಯಸುತ್ತೇವೆ ಎನ್ನುವ ಅಭಿಪ್ರಾಯವನ್ನು  ಐಎಸ್‌ ಮುಖಂಡರು ವ್ಯಕ್ತಪಡಿಸಿದ್ದಾರೆ.

ಐಎಸ್‌ ಸಂಘಟನೆಯನ್ನು ನಿರ್ಮೂಲನೆ ಮಾಡುವುದಾಗಿ ಟ್ರಂಪ್‌ ಹಲವು ಬಾರಿ ಹೇಳಿಕೆ ನೀಡಿದ್ದಾರೆ. ಆದರೂ, ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದ  ಐಎಸ್‌, ಟ್ರಂಪ್‌ ಗೆಲ್ಲಲೇಬೇಕು ಎನ್ನುವ ಆಶಯ ವ್ಯಕ್ತಪಡಿಸಿದೆ. ಟ್ರಂಪ್‌ ಅವರಿಂದಲೇ ಐಎಸ್‌ ಶಕ್ತಿ ಮತ್ತಷ್ಟು ಹೆಚ್ಚಲಿದೆ ಎಂಬ ಮುಖಂಡರ ಹೇಳಿಕೆ ಯನ್ನು ಮಾಧ್ಯಮ ವರದಿ ಮಾಡಿವೆ.

‘ಅಮೆರಿಕದಲ್ಲಿ ಟ್ರಂಪ್‌ ಗೆಲ್ಲಬೇಕು ಎಂದು ಅಲ್ಲಾಹುನಲ್ಲಿ ಕೋರುತ್ತೇನೆ’ ಎಂದು  ಐಎಸ್ ವಕ್ತಾರ ಕಳೆದ ತಿಂಗಳು ‘ನಶೀರ್‌’ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದ.

‘ಶ್ವೇತಭವನಕ್ಕೆ ಟ್ರಂಪ್‌ ಪ್ರವೇಶಿಸಲೇಬೇಕು ಎನ್ನುವುದು ಆದ್ಯತೆಯ ವಿಷಯವಾಗಿದೆ’ ಎಂದು ಐಎಸ್‌ ಬೆಂಬಲಿಗರು ಉಗ್ರರ ಪರವಾಗಿರುವ ಚಾನೆಲ್‌ಗಳಿಗೆ ಸಂದೇಶಗಳನ್ನು ಕಳುಹಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ  ಐಎಸ್‌ ಬೆಂಬಲಿಗರು ನಡೆಸಿದ ಚರ್ಚೆಯನ್ನು ವಿಶ್ಲೇಷಿಸಿದಾಗ, ಡೆಮಾಕ್ರಟಿಕ್‌ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಬದಲು ಟ್ರಂಪ್‌ ಅವರೇ  ಅಮೆರಿಕ ಅಧ್ಯಕ್ಷರಾಗಬೇಕು ಎನ್ನುವ  ಆಶಯವನ್ನು ಐಎಸ್‌ ಹೊಂದಿದೆ ಎಂದು ಮಾಧ್ಯಮ ತಿಳಿಸಿವೆ.

ಸ್ಥಿರವಾದ ನಾಯಕತ್ವ ನೀಡುವಲ್ಲಿ ಟ್ರಂಪ್‌ ವಿಫಲರಾಗುತ್ತಾರೆ. ಅವರು ಕೈಗೊಳ್ಳುವ ದಿಢೀರ್‌ ನಿರ್ಧಾರಗಳಿಂದ ಅಮೆರಿಕ ದುರ್ಬಲ ರಾಷ್ಟ್ರವಾಗುತ್ತದೆ ಎನ್ನುವ ಅಭಿಪ್ರಾಯವನ್ನು ಐಎಸ್‌ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT