ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಲಕ್ಷ ಎಕರೆ ಅರಣ್ಯ ಪ್ರದೇಶ ಒತ್ತುವರಿ

ಅರಣ್ಯ ಒತ್ತುವರಿ
Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 5 ಲಕ್ಷ ಎಕರೆಗೂ ಹೆಚ್ಚಿನ ಪ್ರಮಾಣದ ಅರಣ್ಯ ಭೂಮಿ ಒತ್ತುವರಿಗೆ ಒಳಗಾಗಿದೆ. ಜಿಲ್ಲಾವಾರು ಹಾಗೂ ಅರಣ್ಯವೃತ್ತವಾರು ಸಂಗ್ರಹಿಸಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿದ್ಧಪಡಿಸಿದ್ದ ವರದಿ ಇದನ್ನು ಬಹಿರಂಗಪಡಿಸಿದೆ. ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ಈವರೆಗೆ 1,10,626  ಪ್ರಕರಣಗಳನ್ನು ದಾಖಲಿಸಿಕೊಂಡಿದೆ. 
ಸಾರ್ವಜನಿಕ ಭೂಮಿ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷರಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ವಿ. ಬಾಲಸುಬ್ರಮಣಿಯನ್‌ 2011ರಲ್ಲಿ ನೀಡಿದ್ದ ವರದಿಯಲ್ಲಿ 1,65,796 ಎಕರೆ ಅರಣ್ಯ ಒತ್ತುವರಿಯಾಗಿದೆ ಎಂದು ಉಲ್ಲೇಖಿಸಿದ್ದರು.
ಇದಕ್ಕಿಂತ ಮೂರು ಪಟ್ಟು ಹೆಚ್ಚು ಪ್ರಮಾಣದ ಅರಣ್ಯ ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆ ವರದಿ ಹೇಳಿದೆ.

ವನ್ಯಜೀವಿಧಾಮವೂ ಒತ್ತುವರಿ: ಕೃಷಿಗೆ ಒಳಪಟ್ಟ ಭೂಮಿಯ ಅಂಚಿನ ಅರಣ್ಯ ಮಾತ್ರ ಒತ್ತುವರಿಗೆ ಒಳಗಾಗಿಲ್ಲ. ವನ್ಯ ಜೀವಿಧಾಮ, ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿಯೂ ಒತ್ತುವರಿ ಮಾಡ ಲಾಗಿದೆ ಎಂಬುದನ್ನು ವರದಿ ಹೇಳಿದೆ.

ಶಿವಮೊಗ್ಗ ವನ್ಯಜೀವಿ ಧಾಮದಲ್ಲಿ ಅತಿ ಹೆಚ್ಚು ಅಂದರೆ 10,870 ಎಕರೆ ಒತ್ತುವರಿಯಾಗಿದ್ದು, ಈ ಸಂಬಂಧ 1675 ಪ್ರಕರಣಗಳು ದಾಖಲಾಗಿವೆ.
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾರಣ್ಯದಲ್ಲಿ 866 ಎಕರೆ, ಬಿಳಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದಲ್ಲಿ 85 ಎಕರೆ, ದಾಂಡೇಲಿ ಸಂರಕ್ಷಿತಾರಣ್ಯದಲ್ಲಿ  588 ಎಕರೆ ಅರಣ್ಯ ಒತ್ತುವರಿಯಾಗಿದೆ.

ನಾಗರಹೊಳೆಯ ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನ 69 ಎಕರೆ ಒತ್ತುವರಿಯಾಗಿದೆ.
ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾ ನಕ್ಕೆ ಸೇರಿದ 5,399 ಎಕರೆ ಒತ್ತುವರಿ ಯಾಗಿದ್ದು,749 ಪ್ರಕರಣಗಳು ದಾಖಲಾಗಿವೆ.
ಕಾವೇರಿ ವನ್ಯಜೀವಿಧಾಮದಲ್ಲಿ 2,069 ಪ್ರಕರಣದ ದಾಖಲಾಗಿದ್ದು, 9,024 ಎಕರೆ ಒತ್ತುವರಿಯಾಗಿದೆ. ಕುದುರೆಮುಖ ವನ್ಯಜೀವಿ ಪ್ರದೇಶದಲ್ಲಿ 894 ಎಕರೆ ಒತ್ತುವರಿಗೆ ಒಳಗಾಗಿದೆ.

ಅರಣ್ಯ ಹಕ್ಕು :ಶೇ 50 ರಷ್ಟು ಅರ್ಜಿ ತಿರಸ್ಕೃತ: ತಲತಲಾಂತರದಿಂದ ಅರಣ್ಯ ಉತ್ಪನ್ನ ಗಳನ್ನು ಸಂಗ್ರಹಿಸುವ ಸಮುದಾಯಗಳಿಗೆ ಅರಣ್ಯ ಹಕ್ಕು ಕಾಯ್ದೆ ಅಡಿ ಹಕ್ಕು ಪತ್ರ ಕೋರಿ ಸಲ್ಲಿಕೆಯಾಗಿದ್ದ ಶೇ 50ರಷ್ಟು ಅರ್ಜಿಗಳು ತಿರಸ್ಕೃತವಾಗಿವೆ.
ಪರಿಶಿಷ್ಟ ಪಂಗಡ (ಬುಡಕಟ್ಟು) ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳು ಒಟ್ಟು 3,11,185 ಅರ್ಜಿ ಸಲ್ಲಿಸಿದ್ದರು. ಈ ಪೈಕಿ 2,49,180 ಇತರೆ ಸಮುದಾಯಕ್ಕೆ ಸೇರಿದ್ದರೆ 46,641 ಪರಿಶಿಷ್ಟ ಪಂಗಡದವರಿದ್ದರು.  ಒಟ್ಟು 1,61,876 ಅರ್ಜಿಗಳು ತಿರಸ್ಕೃತವಾಗಿದ್ದು, 1,27,244 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.

ಪರಿಶಿಷ್ಟ ಪಂಗಡದ 31,174 ಅರ್ಜಿ ತಿರಸ್ಕೃತವಾಗಿದ್ದು, 10,702 ಅರ್ಜಿದಾರರಿಗೆ ಹಕ್ಕುಪತ್ರ ವಿತರಿಸಲಾಗಿದೆ.
ಇತರೆ ಪಾರಂಪರಿಕ ಸಮುದಾಯದ 1,28,941 ಅರ್ಜಿಗಳು ತಿರಸ್ಕೃತವಾ ಗಿದ್ದರೆ, 1,168 ಮಂದಿಗೆ ಹಕ್ಕುಪತ್ರ ನೀಡಲಾಗಿದೆ. 1,19,071 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.

ಅರಣ್ಯ ಪ್ರದೇಶ–ಒತ್ತುವರಿ ವಿವರ ( ಎಕರೆಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT