ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯ ಆಸ್ತಿ ವಿವರಕ್ಕೆ ಆಕ್ಷೇಪ

Last Updated 29 ಆಗಸ್ಟ್ 2016, 20:26 IST
ಅಕ್ಷರ ಗಾತ್ರ

ನವದೆಹಲಿ: ‘ಉದ್ಯಮಿ  ವಿಜಯ ಮಲ್ಯ ಅವರು ಬ್ರಿಟಿಷ್ ಕಂಪೆನಿಯಿಂದ ಫೆಬ್ರುವರಿಯಲ್ಲಿ ಪಡೆದ  ನಾಲ್ಕು ಕೋಟಿ ಡಾಲರ್ (ಸುಮಾರು ₹280 ಕೋಟಿ) ಸೇರಿದಂತೆ ತಮ್ಮ ಆಸ್ತಿಯ ಪೂರ್ತಿ ವಿವರ ಬಹಿರಂಗ ಮಾಡದಿರುವುದು ಉದ್ದೇಶಪೂರ್ವಕ’ ಎಂದು  ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಮಾರ್ಚ್‌ನಲ್ಲಿ ಮಲ್ಯ ಅವರು ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯೆ ಸಲ್ಲಿಸಿದಾಗ ಫೆಬ್ರುವರಿಯಲ್ಲಿ ಬ್ರಿಟಿಷ್ ಕಂಪೆನಿಯಿಂದ ಬಂದ ಹಣದ ವಿವರಗಳನ್ನು ನೀಡಲಿಲ್ಲ ಎಂದು ಬ್ಯಾಂಕುಗಳ ಒಕ್ಕೂಟದ ಪರ ವಕೀಲ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಮತ್ತು ಆರ್. ಎಫ್. ನಾರಿಮನ್ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು.

ನ್ಯಾಯಾಲಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಮಲ್ಯ ಅವರು ನ್ಯಾಯಾಲಯದಲ್ಲಿ ಹಾಜರಿರಬೇಕು. ಅವರಿಗೆ ನ್ಯಾಯಾಲಯವು ವೈಯಕ್ತಿಕ ಹಾಜರಾತಿಯಿಂದ ವಿನಾಯ್ತಿ ನೀಡಿಲ್ಲ. ಆದರೂ ಅವರು ಖುದ್ದಾಗಿ ಹಾಜರಾಗಿಲ್ಲ. ಹಾಗಾಗಿ ಇನ್ನೂ ಮುಂದೆ ಪ್ರಕರಣದ ವಿಚಾರಣೆ ನಡೆಸದೆ ಮುಂದಿನ ಕ್ರಮ ಜರುಗಿಸಬೇಕು ಎಂದು ರೋಹಟಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT