ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದಿಂದ ಬಿದ್ದ ಇಂಧನ ಟ್ಯಾಂಕ್‌

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ : ನೌಕಾ ಪಡೆಗೆ ಸೇರಿದ ಮಿಗ್‌–29ಕೆ ಯುದ್ಧ ವಿಮಾನ ದೈನಂದಿನ ತರಬೇತಿ ಹಾರಾಟ ನಡೆಸುವ ಸಂದರ್ಭ ಅದರ ಎರಡೂ ಇಂಧನ ಟ್ಯಾಂಕ್‌ಗಳು ಪ್ರತ್ಯೇಕ ಸ್ಥಳಗಳಲ್ಲಿ ಕಳಚಿಬಿದ್ದ ಘಟನೆ ಸೋಮವಾರ ನಡೆದಿದೆ.

ಒಂದು ಟ್ಯಾಂಕ್‌ ದೆಗಾ ನೌಕಾನೆಲೆ  ಮತ್ತು ಇನ್ನೊಂದು ಟ್ಯಾಂಕ್‌ ಸಿಐಎಸ್‌ಎಫ್‌ ವಸತಿ ಪ್ರದೇಶದಲ್ಲಿ ಬಿದ್ದಿದೆ. ಪೈಲಟ್‌ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ಟ್ಯಾಂಕ್‌ಗಳು ಬಿದ್ದ ನಂತರ ಐಎನ್‌ಎಸ್‌ ದೆಗಾ ರನ್‌ವೇಯಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯ ತನಿಖೆಗೆ ತಂಡ ರಚನೆ ಮಾಡಲಾಗಿದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ.

ಸ್ಥಳದಲ್ಲಿ ಹಾಜರಿದ್ದ ತುರ್ತು ಕಾರ್ಯಾಚರಣೆ ದಳ ಬೆಂಕಿ ನಂದಿಸಿದೆ. ಘಟನೆಯಲ್ಲಿ ಯುದ್ಧ ವಿಮಾನಕ್ಕೆ ಯಾವುದೇ ರೀತಿಯ ಹಾನಿ ಆಗಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT