ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಂಕ್‌, ಗಂಭೀರ್‌ ಅರ್ಧಶತಕ

ದುಲೀಪ್‌ ಟ್ರೋಫಿ; ಮೊದಲ ದಿನದಾಟಕ್ಕೆ ಮಳೆ ಅಡ್ಡಿ
Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಗ್ರೇಟರ್‌ ನೊಯ್ಡಾ: ಆರಂಭಿಕ ಆಟಗಾರ ರಾದ ಐ (ಬ್ಯಾಟಿಂಗ್‌ 53; 102ಎ, 6ಬೌಂ) ಮತ್ತು ನಾಯಕ ಗೌತಮ್‌ ಗಂಭೀರ್‌ (ಬ್ಯಾಟಿಂಗ್‌ 51; 105ಎ, 5ಬೌಂ) ಅವರ ಅರ್ಧಶತಕಗಳ ಬಲದಿಂದ ಇಂಡಿಯಾ ಬ್ಲೂ ತಂಡ ಸೋಮವಾರ ಇಲ್ಲಿ ಆರಂಭವಾದ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಮುನ್ನಡೆದಿದೆ.

ಗ್ರೇಟರ್‌ ನೊಯ್ಡಾ ಕ್ರೀಡಾ ಸಂಕೀರ್ಣದ ಮೈದಾನದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಿದ ಇಂಡಿಯಾ ಬ್ಲೂ ತಂಡ ಮೊದಲ ಇನಿಂಗ್ಸ್‌ನಲ್ಲಿ 34.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 105ರನ್‌ ಗಳಿಸಿದೆ.

35ನೇ ಓವರ್‌ನ ಆರಂಭಕ್ಕೆ ಮೊದಲು ಧಾರಾಕಾರ ಮಳೆ ಸುರಿಯಿತು. ಆ ಬಳಿಕವೂ ‘ವರುಣನ ಆಟ’ ಮುಂದುವರಿದಿದ್ದರಿಂದ   ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ದಿಟ್ಟ ಆಟ:  ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕದ ಮಯಂಕ್‌ ಮತ್ತು ಗಂಭೀರ್‌ ಆರಂಭದಿಂದಲೇ ಎಚ್ಚರಿಕೆ ಯ ಇನಿಂಗ್ಸ್‌ ಕಟ್ಟಿದರು.

ದೆಹಲಿಯ ಎಡಗೈ ಬ್ಯಾಟ್ಸ್‌ಮನ್‌ ಗಂಭೀರ್‌, ನಾಥು ಸಿಂಗ್‌ ಬೌಲ್‌ ಮಾಡಿದ ದಿನದ ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿ  ವೈಯಕ್ತಿಕ ರನ್‌ ಖಾತೆ ತೆರೆದರು.

ಶುರುವಿನಿಂದಲೇ ಒಂದೊಂದು ರನ್‌ ಗಳಿಸುತ್ತಾ ಸಾಗಿದ ಈ ಜೋಡಿ ಅವಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಮರೆಯಲಿಲ್ಲ. ರಣಜಿ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಮಯಂಕ್‌, ಕುಲದೀಪ್‌ ಯಾದವ್‌ ಬೌಲ್‌ ಮಾಡಿದ 32ನೇ ಓವರ್‌ನ ನಾಲ್ಕನೇ ಎಸೆತವನ್ನು ಬೌಂಡರಿಗಟ್ಟಿ ಅರ್ಧಶತಕ ಪೂರೈಸಿದರು.

ಪ್ರದೀಪ್‌ ಸಂಗ್ವಾನ್‌ ಬೌಲ್‌ ಮಾಡಿದ ಮರು ಓವರ್‌ನಲ್ಲಿ ಗಂಭೀರ್‌ ಸತತ ಎರಡು ಬೌಂಡರಿ ಗಳಿಸಿ ಅರ್ಧಶತಕದ ಸಂಭ್ರಮ ಆಚರಿಸಿದರು.
ಇವರಿಬ್ಬರ ಜೊತೆಯಾಟವನ್ನು ಮುರಿಯಲು ರೆಡ್‌ ತಂಡದ ನಾಯಕ ಯುವರಾಜ್‌ ಸಿಂಗ್‌ ಬೌಲಿಂಗ್‌ನಲ್ಲಿ ಹಲವು ಬಾರಿ ಬದಲಾವಣೆ ಮಾಡಿ ದರೂ ಪ್ರಯೋಜನವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌:
ಇಂಡಿಯಾ ಬ್ಲೂ : ಮೊದಲ ಇನಿಂಗ್ಸ್‌: 34.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 105 (ಮಯಂಕ್‌ ಅಗರವಾಲ್‌ ಬ್ಯಾಟಿಂಗ್‌ 53, ಗೌತಮ್‌ ಗಂಭೀರ್‌ ಬ್ಯಾಟಿಂಗ್‌ 51).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT