ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಸಂಭಾವನೆ ಮಾಡಿದ ಭಾರಿ ಸುದ್ದಿ

Last Updated 9 ಸೆಪ್ಟೆಂಬರ್ 2016, 2:08 IST
ಅಕ್ಷರ ಗಾತ್ರ

ರಾಮ್ ಲೀಲಾ’, ‘ಬಾಜೀರಾವ್ ಮಸ್ತಾನಿ’ ಚಿತ್ರದ ಮೂಲಕ ಸುಂದರ ಜೋಡಿ ಎನಿಸಿಕೊಂಡಿರುವ ರಣವೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಕೋಣೆ ಮತ್ತೆ ‘ಪದ್ಮಾವತಿ’ ಎಂಬ  ಚಿತ್ರದ ಮೂಲಕ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಆದರೆ ವಿಷಯ ಏನೆಂದರೆ, ಈ ಚಿತ್ರದಲ್ಲಿ ರಣವೀರ್‌್‌ಗಿಂತ ದೀಪಿಕಾಗೆ ಸಂಭಾವನೆ ಹೆಚ್ಚಂತೆ. ಅದೀಗ ಬಿ–ಟೌನ್‌ನಲ್ಲಿ ಭಾರಿ ಸುದ್ದಿ ಮಾಡಿದೆ. ಯಾವುದೇ ಚಿತ್ರ ಹಿಟ್‌ ಆಗಬೇಕಿದ್ದರೆ ಅದರಲ್ಲಿ ನಾಯಕ–ನಾಯಕಿ ಇಬ್ಬರದ್ದೂ ಸಮಪಾಲು ಇರುವುದು ನಿಜವಾದರೂ ಸಂಭಾವನೆ ವಿಷಯ ಬಂದಾಗ ನಾಯಕನಿಗೇ ಹೆಚ್ಚಿನ ದುಡ್ಡು ನೀಡುವುದು ಬಹುತೇಕ ಎಲ್ಲಾ ಭಾಷೆಗಳ ಚಿತ್ರಗಳಲ್ಲೂ ನಡೆದೇ ಬಂದಿದೆ. ಇದೇ ವಿಷಯಕ್ಕೆ ಹಲವು ನಟಿಯರು ಈಗಾಗಲೇ ಬೀದಿಗಿಳಿದು ಹೋರಾಟ ಮಾಡಿದ್ದೂ ಇದೆ ಬಿಡಿ. ಆದರೆ ಈ ಚಿತ್ರದಲ್ಲಿ ನಟಿಗೆ ಹೆಚ್ಚಿನ ಸಂಭಾವನೆ ಸಿಕ್ಕಿರುವುದೇ ಈಗ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ದೀಪಿಕಾ ಬಾಲಿವುಡ್‌ ಮಾತ್ರವಲ್ಲದೇ ಹಾಲಿವುಡ್‌ನಲ್ಲೂ ಗುರುತಿಸಿಕೊಂಡಾಕೆ. ಹಾಲಿವುಡ್ ಸಿನಿಮಾ ‘XXX’ ನಂತರ ಅವರ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ. ಆದ್ದರಿಂದ ದೀಪಿಕಾ ಕೇಳಿದಷ್ಟು ಸಂಭಾವನೆ ನೀಡಲು ನಿರ್ದೇಶಕರು ಒಪ್ಪುತ್ತಿದ್ದಾರೆ. ಆದ್ದರಿಂದಲೇ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು  ‘ಪದ್ಮಾವತಿ’ ಚಿತ್ರಕ್ಕಾಗಿ ದೀಪಿಕಾಗೆ 11 ಕೋಟಿ ರೂಪಾಯಿ ಸಂಭಾವನೆ ನೀಡುತ್ತಿದ್ದರೆ ರಣವೀರ್ ಅವರಿಗೆ ಏಳು ಕೋಟಿ ರೂಪಾಯಿ ನೀಡುತ್ತಿದ್ದಾರೆ ಎಂಬ ಸುದ್ದಿ ಇದೆ.

ಇಬ್ಬರು ನಾಯಕರನ್ನು ಒಳಗೊಂಡಿರುವ ಈ ಚಿತ್ರದಲ್ಲಿ ರಣವೀರ್‌ ಸಿಂಗ್ ಅವರ ಜೊತೆಯಾಗಿ ನಟ ಶಾಹೀದ್ ಕಪೂರ್ ನಟಿಸಲಿದ್ದಾರೆ. ಅಂದಹಾಗೆ ಈ ಚಿತ್ರ ರಾಜಸ್ತಾನದ ಚಿತ್ತೋರಿನ ರಾಣಿ ಪದ್ಮಾವತಿ ಅವರ ಜೀವನ ಚರಿತ್ರೆಯನ್ನು ಆಧರಿಸಿದೆ. ಆದ್ದರಿಂದ ಚಿತ್ರ ನಾಯಕಿ ಪ್ರಧಾನ ಎನಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT