ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮೋಟಾರ್ಸ್‌ 5000 ಬಸ್‌ಗೆ ಬೇಡಿಕೆ

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಣಿಜ್ಯ ವಾಹನ ತಯಾರಿಸುವ ದೇಶದ ಅತಿದೊಡ್ಡ ಸಂಸ್ಥೆ ಟಾಟಾ ಮೋಟಾರ್ಸ್‌ಗೆ ದೇಶದ ವಿವಿಧ ರಾಜ್ಯಗಳ ನಗರ ಸಾರಿಗೆ ಸಂಸ್ಥೆಗಳಿಂದ 5000 ಕ್ಕೂ ಹೆಚ್ಚು ಬಸ್‌ಗಳ ಬೇಡಿಕೆ ವ್ಯಕ್ತವಾಗಿದೆ. 

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬೇಡಿಕೆ ಪ್ರಮಾಣ ಶೇ 80 ರಷ್ಟು ಹೆಚ್ಚಳವಾಗಿದೆ. ಜಿಪಿಎಸ್‌ ತಂತ್ರಜ್ಞಾನ, ಸಿಸಿಟಿವಿ ಕ್ಯಾಮೆರಾ, ವೈಫೈ  ಸೌಲಭ್ಯ ಮತ್ತು ತುರ್ತು ಸಂದರ್ಭದಲ್ಲಿ ಚಿಕಿತ್ಸಾ ವ್ಯವಸ್ಥೆ  ಈ ಬಸ್‌ಗಳಲ್ಲಿ ಇರಲಿವೆ.

ಯುರೊಕಿಡ್ಸ್‌ ಒಪ್ಪಂದ
ಬೆಂಗಳೂರು:
ಫ್ರಾಂಚೈಸಿ ಉದ್ಯಮಗಳ ಪ್ರಗತಿಗೆ  ಉತ್ತೇಜನ ನೀಡಲು ಯುರೊಕಿಡ್ಸ್ ಇಂಟರ್‌ ನ್ಯಾಷನಲ್, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಜತೆಗೆ ಒಪ್ಪಂದ  ಮಾಡಿಕೊಂಡಿದೆ.

ಒಪ್ಪಂದದ ಅನ್ವಯ, ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ಎಸ್‌ಬಿಐ ಜತೆಗಿನ ಈ ಸಹಭಾಗಿತ್ವವು ಸಣ್ಣ ಪಟ್ಟಣಗಳಲ್ಲಿ ಉದ್ಯಮಶೀಲತೆ ಬೆಳೆಯಲು ಪ್ರೋತ್ಸಾಹ ನೀಡಲಿದೆ ಎಂದು ಯುರೊಕಿಡ್ಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT