ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇನ್ಸಾಟ್‌ 3ಡಿಆರ್‌’ ನಿಂದ ಹವಾಮಾನ ಮಾಹಿತಿ

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಚೆನ್ನೈ: ಹವಾಮಾನ ಮಾಹಿತಿ ನೀಡುವ ಅತ್ಯಾಧುನಿಕ ಉಪಗ್ರಹ ‘ಇನ್ಸಾಟ್‌–3ಡಿಆರ್‌’ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‌ವಿ–ಎಫ್‌ 05 ರಾಕೆಟ್‌ ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಬುಧವಾರ ಸಂಜೆ 4.50ಕ್ಕೆ ನಭಕ್ಕೆ ಚಿಮ್ಮಿತು. ನಂತರ 17 ನಿಮಿಷಗಳಿಗೆ ಉಪಗ್ರಹವನ್ನು ನಿಗದಿತ ಭೂಸ್ಥಿರ ಕಕ್ಷೆಗೆ (ಜಿಟಿಒ) ಸೇರಿಸಿತು.

ಮೊದಲ ಪ್ರಯತ್ನ: ಅತೀ ಹೆಚ್ಚು ಭಾರ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಈ ರಾಕೆಟ್‌ನ ಮೇಲ್ಭಾಗದಲ್ಲಿ ಕ್ರಯೋಜೆನಿಕ್‌ ಎಂಜಿನ್‌  (ಕಡಿಮೆ ತಾಪಮಾನದಲ್ಲಿ ಶೇಖರಿಸಿರುವ ಇಂಧನ ಅಂದರೆ ದ್ರವರೂಪದ ಜಲಜನಕ ಮತ್ತು ಆಮ್ಲಜನಕ ಬಳಸುವ ಎಂಜಿನ್‌) ಅಳವಡಿಸಲಾಗಿತ್ತು. ರಾಕೆಟ್‌ನ ಮೇಲಿನ ಹಂತದಲ್ಲೂ ಕ್ರಯೋಜೆನಿಕ್‌ ತಂತ್ರಜ್ಞಾನ ಬಳಕೆ ಇದೇ ಮೊದಲು. ಈ ಯತ್ನದಲ್ಲೂ ಇಸ್ರೊ ಯಶಸ್ವಿಯಾಗಿದೆ.

ಕಾಡಿದ ಆತಂಕ: ಬುಧವಾರ ಸಂಜೆ 4.10ಕ್ಕೆ ಉಪಗ್ರಹ ಉಡಾವಣೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ಕ್ರಯೋಜೆನಿಕ್‌ ಹಂತದಲ್ಲಿ ಇಂಧನ ತುಂಬಿಸುವಿಕೆ ವಿಳಂಬ ಆದ್ದರಿಂದ ನಿಗದಿತ ಸಮಯಕ್ಕೆ ಉಡಾವಣೆ ಸಾಧ್ಯವಾಗಲಿಲ್ಲ. ಉಡಾವಣೆಯನ್ನು 40 ನಿಮಿಷಗಳ ಕಾಲ ಮುಂದೂಡಲಾಗಿತ್ತು. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು.

ಈ ಉಪಗ್ರಹ ಕೂಡ ಈ ಹಿಂದಿನ ಇನ್ಸಾಟ್‌ 3ಡಿ ಉಪಗ್ರಹದಂತೆ ಹವಾಮಾನಕ್ಕೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಒದಗಿಸಲಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ. ಸಾಗರದ ಮೇಲ್ಮೈ ಉಷ್ಣಾಂಶವನ್ನು (ಎಸ್‌ಎಸ್‌ಟಿ) ಇದು ಅಂದಾಜು ಮಾಡಲಿದೆ.

ಉಪಗ್ರಹದಲ್ಲಿ ಏನೇನಿದೆ?: ದತ್ತಾಂಶ ಮರುಪ್ರಸಾರ ಮಾಡುವ ಉಪಕರಣದ ಜತೆ ಶೋಧನೆ ಮತ್ತು ರಕ್ಷಣಾ ಉಪಕರಣಗಳನ್ನೂ ಉಪಗ್ರಹ ಹೊತ್ತೊ
ಯ್ದಿದೆ. ಈ ಸೇವೆಗಳನ್ನು ಇದು ಒದಗಿಸಲಿದೆ.

*
ಇಂದು ನಾವು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದೇವೆ. ಇನ್ಸಾಟ್‌–3ಡಿಆರ್‌ ಅನ್ನು ನಿಗದಿತ ಕಕ್ಷೆಗೆ ಸೇರಿಸಿದ್ದೇವೆ. ಉಡಾವಣೆ ಅಂದುಕೊಂಡಂತೆ ನಡೆದಿದೆ
-ಕಿರಣ್‌ ಕುಮಾರ್‌, ಇಸ್ರೊ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT