ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕೆಲಸಕ್ಕೆ ಐಡೊ ರೋಬೊ

Last Updated 13 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಅತ್ಯಾಧುನಿಕ ಮತ್ತು ಸಂವಹನ ನಡೆಸುವ ಸಾಮರ್ಥ್ಯ ಹೊಂದಿರುವ ಐಡೊ ರೋಬೊ ಬಳಕೆಗೆ ಬಂದಿದೆ. ಮನೆ ಕೆಲಸ, ಮನರಂಜನೆ, ಭದ್ರತೆ ಮತ್ತಿತರರ ವಿಷಯಗಳಿಗೆ ಸಂಬಂಧಿಸಿದಂತೆ  ನೆರವು ನೀಡುತ್ತದೆ.

ಇದು ಗೃಹ ಬಳಕೆಗೆ ಸೀಮಿತವಾದ ರೋಬೊ ಆಗಿದ್ದು, ಮನರಂಜನಾ ವ್ಯವಸ್ಥೆಯಾಗಿ, ಸ್ಮಾರ್ಟ್‌ ಹೋಂ ನಿಯಂತ್ರಕವಾಗಿ, ಭದ್ರತಾ ಪಡೆಯಾಗಿ ಕೆಲಸ ಮಾಡುತ್ತದೆ. ಅಲ್ಲದೆ ಅಡುಗೆ ಮನೆಯಲ್ಲಿ ಸಹಾಯ ಮಾಡುತ್ತದೆ. ಒಟ್ಟಾರೆ ಈವರೆಗೆ ಬಳಕೆಗೆ ಬಂದಿರುವ ರೋಬೊಗಳಲ್ಲೇ ಐಡೊ ರೋಬೊ ಅತ್ಯಂತ ಆಪ್ತವಾದ ಸಹಾಯಕ.

2016ನೇ ಸಾಲಿನ ಗೇಮ್‌ ಚೇಂಜರ್‌ ಉತ್ಪನ್ನ ಎಂದು ಟಿ3 ಹೆಸರಿನ ತಂತ್ರಜ್ಞಾನ ಮತ್ತು ಗ್ಯಾಜೆಟ್‌ ವಿಷಯಗಳ ಪ್ರಕಟಣ  ನಿಯತಕಾಲಿಕವೊಂದು ವಿಶ್ಲೇಷಣೆ ಮಾಡಿದೆ. ‘ಭವಿಷ್ಯದ ಗೃಹ ರೋಬೊಟಿಕ್ಸ್‌’ ಎಂದು ಬಣ್ಣಿಸಿದೆ. ಐಡೊ ರೋಬೊಗೆ ಈಗಾಗಲೇ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಬೇಡಿಕೆ ಸಲ್ಲಿಸಿದವರಿಗೆ ಈ ವರ್ಷದ ಅಕ್ಟೋಬರ್‌ನಲ್ಲಿ ಅವು ದೊರೆಯಲಿವೆ. ಇದರಿಂದ ರೋಬೊ ಸಿದ್ಧಪಡಿಸಿದ ತಂಡದ ಖುಷಿ ಮೇರೆ ಮೀರಿದೆ.

ವಿಶ್ವದ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ರೋಬೊಗಳಿಗೆ ಬೇಡಿಕೆಯಂತೂ ಇದ್ದೇ ಇದೆ. ಈಗ ಈ ಪಟ್ಟಿಗೆ ಐಡೊ ರೋಬೊ ಹೊಸ ಸೇರ್ಪಡೆಯಾಗಿದೆ. ಕಡಿಮೆ ದರದ, ಅತ್ಯಾಧುನಿಕ ಅದರಲ್ಲೂ ಮನೆ ಕೆಲಸಕ್ಕೆ ನೆರವಾಗುವ ಕಾರಣಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಿದೆ.

ಏನೆಲ್ಲ ಇದೆ: ಐಡೊ ರೋಬೊದಲ್ಲಿ ಪ್ರಾಜೆಕ್ಟರ್‌ ವ್ಯವಸ್ಥೆ, ಅತ್ಯಾಧುನಿಕವಾದ ಮಾತು ಗುರುತಿಸುವ ಶಕ್ತಿ, ಮುಖ ಗುರುತಿಸುವ ಸಾಮರ್ಥ್ಯ, ಸೆನ್ಸರ್‌ಗಳು ಮತ್ತು ಆ್ಯಪ್‌ ಒಳಗೊಂಡಿದೆ. ಮೂರು ಅಡಿ ಎತ್ತರದ ಇದು 8 ಕೆ.ಜಿ.ತೂಕವಿದೆ. ನಾಲ್ಕು ಡಿಗ್ರಿಯಲ್ಲಿ ಸುತ್ತಬಲ್ಲದು.

ಐಡೊದಲ್ಲಿರುವ ಅಂತರ್‌ ಸಂವಹನದ ಪ್ರಾಜೆಕ್ಟರ್‌ ಮನುಷ್ಯರು ನೀಡುವ ಸೂಚನೆಗಳನ್ನು ಕರಾರುವಾಕ್ಕು  ಪಾಲಿಸುತ್ತದೆ. ಇದು ವೈಫೈ, ಬ್ಲೂಟೂತ್‌ಗಳಿಗೆ ಸ್ಪಂದಿಸುತ್ತದೆ. ಮನೆಯಲ್ಲಿನ ಕೊಠಡಿಯನ್ನು ಲಾಕ್ ಮಾಡುವಂತೆ, ಉಷ್ಣಾಂಶವನ್ನು ಹೊಂದಿಸುವಂತೆ, ಸ್ವಿಚ್‌ಗಳನ್ನು ಆಫ್ ಮಾಡುವಂತೆ ಪ್ರೋಗ್ರಾಮಿಂಗ್‌ ಸಿದ್ಧಪಡಿಸಿ ಇಟ್ಟುಕೊಳ್ಳಬಹುದು. ವಾಯ್ಸ್ ಕಮಾಂಡ್‌ಗಳನ್ನು ಕೊಡಬಹುದು.

ಮಕ್ಕಳ ಜತೆಗಾರ: ಐಡೊ ರೋಬೊ ಮಕ್ಕಳ ಮೆಚ್ಚಿನ ಜತೆಗಾರನಾಗಬಲ್ಲದು. ಏಕೆಂದರೆ ವಿಶ್ವದ ಕಥೆಗಳನ್ನು ಇದರಲ್ಲಿ ಸಂಗ್ರಹಿಸಿ ಮಕ್ಕಳಿಗೆ ಹೇಳಿಸಬಹುದು. ಅಲ್ಲದೆ ಆಟಗಳನ್ನು ಆಡಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT