ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಗಡಿಯ ಕಥೆಯಲ್ಲ, ನಮ್ಮ ನಡುವಿನ ಕದನ!

Last Updated 15 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ಗಡಿ ಕಾಯುವವನಿಗೆ ಸಿಪಾಯಿ ಅನ್ನುತ್ತಾರೆ. ನಮ್ಮ ಸಿಪಾಯಿ ಸಮಾಜದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂಥವನು’ ಎಂದು ಸ್ಪಷ್ಟನೆ ಕೊಟ್ಟರು ನಿರ್ದೇಶಕ ರಜತ್‌ಮಯಿ.
ಚಿತ್ರಕಥೆ ರಚಿಸಲೆಂದೇ ಒಂದೂವರೆ ವರ್ಷ ತೆಗೆದುಕೊಂಡಿರುವ ರಜತ್‌ಮಯಿ ಅವರಿಗೆ ‘ಸಿಪಾಯಿ’ ಸುಮಾರು ಮೂರು ವರ್ಷಗಳ ಕನಸು.

ಆ ಕನಸು ಮುಂದಿನ ವಾರ ಚಿತ್ರ ತೆರೆ ಕಾಣುವುದರೊಂದಿಗೆ ನನಸಾಗುತ್ತಿದೆ. ಆ ಕುರಿತು ವಿವರ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ನಿರ್ದೇಶಕ ಸೇರಿದಂತೆ ಎಲ್ಲ ತಂತ್ರಜ್ಞ ಹಾಗೂ ಕಲಾವಿದರಲ್ಲೂ ಸಿನಿಮಾ ಯಶಸ್ವಿಯಾಗುವ ಭರವಸೆ ಎದ್ದು ಕಾಣುತ್ತಿತ್ತು.

ವಿದೇಶಗಳಲ್ಲಿ ಕಾರ್ಯನಿರ್ವಹಿಸುವ ಮಾಫಿಯಾದ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡ ರಜತ್‌ಮಯಿ, ಅದರ ಆಧಾರದ ಮೇಲೆ ಕಥೆ ಬರೆದಿದ್ದಾರೆ. ‘ನಮ್ಮ ಸಿಪಾಯಿ ಸಮಾಜದ ಒಳಗಡೆಯೇ ಇದ್ದು, ಇಲ್ಲಿ ನಡೆಯುತ್ತಿರುವ ವ್ಯವಸ್ಥೆಯನ್ನು ಸರಿಪಡಿಸುತ್ತಾನೆ.

ಆತ ಟೀವಿ ವರದಿಗಾರನಾಗಿದ್ದು, ಆ ಹಿನ್ನೆಲೆಯಲ್ಲಿಯೇ ಆಸಕ್ತಿಕರ ಕಥೆ ಇದರಲ್ಲಿದೆ’ ಎಂಬ ವಿವರ ನೀಡಿದ ಅವರು, ಇಷ್ಟು ವರ್ಷದ ಕಹಿನೆನಪುಗಳು ಸಿನಿಮಾ ಬಿಡುಗಡೆ ನಂತರ ಸಿಹಿ ನೆನಪಾಗಿ ಬದಲಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಂದೊಮ್ಮೆ ‘ಸಂಚಾರಿ’ ವಿಜಯ್ ಅವರು ಅವಕಾಶಕ್ಕಾಗಿ ಅಲೆದಾಡುತ್ತಿದ್ದಾಗ ಸಿಕ್ಕ ಪಾತ್ರ ಇದಂತೆ. ‘ನಾನು ಅವನಲ್ಲ, ಅವಳು’ ಚಿತ್ರಕ್ಕೆ ಅವಕಾಶ ಪಡೆದು, ಅದರಲ್ಲಿನ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಈ ಚಿತ್ರದಿಂದ ಎಂದು ಅವರು ಹೆಮ್ಮೆಯಿಂದ ನುಡಿದರು. ‘ಬಹುತೇಕ ರಂಗಭೂಮಿ ಕಲಾವಿದರೇ ಇದರಲ್ಲಿ ಅಭಿನಯಿಸಿರುವುದು ವಿಶೇಷ’ ಎಂದರು.

ನಾಯಕ ನಟನಾಗಿ ಕಾಣಿಸಿಕೊಳ್ಳುವುದರ ಜತೆಗೆ ನಿರ್ಮಾಪನೂ ಆಗಿರುವ ಸಿದ್ಧಾರ್ಥ್ ಮಹೇಶ ಅವರಿಗೆ ಇದರಲ್ಲಿ ಪತ್ರಕರ್ತನ ಪಾತ್ರ. ‘ಯೋಗರಾಜ ಭಟ್ ಅವರು ಸಿನಿಮಾ ನೋಡಿ, ಜನರಿಗೆ ತೋರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರು

ವುದು ನನ್ನ ಖುಷಿಯನ್ನು ಡಬಲ್ ಮಾಡಿದೆ’ ಎಂದು ಸಿದ್ಧಾರ್ಥ್ ಹೇಳಿದರು. ಗೌರೀಶ್ ಅಕ್ಕಿ ಅವರದು ನಾಯಕನಿಗೆ ಬೆಂಬಲವಾಗಿ ನಿಲ್ಲುವ ಪಾತ್ರ. 

‘ಲೂಸಿಯಾ’ದಲ್ಲಿ ತಾವು ರಜತ್‌ಮಯಿ ಅವರ ಜತೆ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ನಾಯಕಿ ಶ್ರುತಿ ಹರಿಹರನ್, ಚಿತ್ರಕಥೆ ಪ್ರೇಕ್ಷಕರನ್ನು ಖಂಡಿತ ಸೆಳೆಯುತ್ತದೆ ಎಂದರು.

ಖಳನಟ ಮಂಜುನಾಥಗೌಡ, ಕೃಷ್ಣ, ಭರತ್‌ಸಿಂಗ್, ಸಂಕಲನಕಾರ ಅಕ್ಷಯ್, ಛಾಯಾಗ್ರಾಹಕ ಪರಮೇಶ್ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT