ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ. ಬೆಂಗಳೂರು ಸಿಟಿ ಕೋ–ಆಪರೇಟಿವ್‌ ಬ್ಯಾಂಕಿಗೆ 110ರ ಸಂಭ್ರಮ

Last Updated 20 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ರಾಜ್ಯದ ಅತ್ಯಂತ ಹಳೆಯ  ಹಾಗೂ ದೇಶ ಪ್ರಥಮ ಪಟ್ಟಣ ಸಹಕಾರಿ ಬ್ಯಾಂಕ್‌ ಆಗಿರುವ ದಿ. ಬೆಂಗಳೂರು ಸಿಟಿ ಕೋ–ಅಪರೇಟಿವ್‌ ಬ್ಯಾಂಕ್‌, ಶತಮಾನದ ಉದ್ದಕ್ಕೂ   ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದು, ಈಗ 110ನೇ ವರ್ಷಕ್ಕೆ ಕಾಲಿಟ್ಟಿದೆ. 1905 ರಲ್ಲಿ ಪತ್ತಿನ ಸಹಕಾರಿ ಸಂಘವಾಗಿ ಜನ್ಮತಾಳಿ  1907ರ ಏಪ್ರಿಲ್‌ 6ರಂದು  ಪಟ್ಟಣ ಸಹಕಾರಿ ಬ್ಯಾಂಕ್‌ ಆಗಿ ಪರಿವರ್ತನೆ ಗೊಂಡಿತ್ತು.

ಈ   ಸಂಭ್ರಮದಲ್ಲಿ   ಬ್ಯಾಂಕಿನ ಸ್ಥಾಪಕರಾದ ಅಂದಿನ ಹಿರಿಯ ಸಹಕಾರಿ ಧುರೀಣರಾಗಿದ್ದ ದಿವಂಗತ ಕೆ. ರಾಮಸ್ವಾಮಯ್ಯ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ.   ಕೇವಲ 150 ಸದಸ್ಯರು, ₹ 2,265 ಠೇವಣಿ, ₹ 2,727 ಷೇರು ಬಂಡವಾಳ ಹಾಗೂ ₹ 4, 036 ಸಾಲ ಮತ್ತು ಮುಂಗಡದಿಂದ ಸ್ಥಾಪನಗೊಂಡಿದ್ದ  ಸಂಸ್ಥೆಯ ಇಂದಿನ ಒಟ್ಟು ವಹಿವಾಟು  ₹ 2,766 ಕೋಟಿಗಳಷ್ಟು ದಾಟಿದೆ.

ಬ್ಯಾಂಕ್‌ ತನ್ನ ಆರಂಭದ ದಿನಗಳಿಂದಲೂ ಅತ್ಯುತ್ತಮವಾಗಿ ಗ್ರಾಹಕ ಸೇವೆ ಒದಗಿಸುತ್ತ, ಹಲವಾರು ಪ್ರಶಸ್ತಿಗಳಿಗೆ ಭಾಜನವಾಗುತ್ತ  ಇಂದು ಬೃಹದಾಕಾರವಾಗಿ ಬೆಳೆದುನಿಂತಿದೆ.

ಸಹಕಾರಿ ಬ್ಯಾಂಕ್‌ನ ಒಟ್ಟು ವ್ಯವಹಾರ ₹ 2,765 ಕೋಟಿ ದಾಟಿರುವುದರಿಂದ ರಾಜ್ಯದಲ್ಲಿನ 266 ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಪೈಕಿ  ಒಟ್ಟು ವ್ಯವಹಾರದ ಆಧಾರದ ಮೇಲೆ ಪ್ರಥಮ ಸ್ಥಾನದಲ್ಲಿದೆ.

ಉತ್ತಮ  ವಹಿವಾಟಿನ ಕಾರಣಕ್ಕೆ 1926, 1927 ಮತ್ತು 1928 ರಲ್ಲಿ ಸತತ ಮೂರು ವರ್ಷಗಳ ಕಾಲ ಮೈಸೂರು ಸಂಸ್ಥಾನದ ‘ಅತ್ಯುತ್ತಮ ಪಟ್ಟಣ ಸಹಕಾರ ಬ್ಯಾಂಕ್‌’ ಪ್ರಶಸ್ತಿಗೆ ಪಾತ್ರವಾಗಿತ್ತು.

ಕರ್ನಾಟಕ ರಾಜ್ಯ ಸರ್ಕಾರವು 2002 ರಲ್ಲಿ, 2004 ರಲ್ಲಿ ಮತ್ತು 2008 ರಲ್ಲಿ  ‘ಅತ್ಯುತ್ತಮ ಪಟ್ಟಣ ಸಹಕಾರ ಬ್ಯಾಂಕ್‌’  ಎಂದು ಗುರುತಿಸಿದೆ. ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರಿ ಪಟ್ಟಣ ಬ್ಯಾಂಕುಗಳ ಮಹಾಮಂಡಳ, ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳಗಳಿಂದ,  ಶತಮಾನೋತ್ಸವ ಪೂರೈಸಿದ ಕರ್ನಾಟಕ ರಾಜ್ಯದ ಅತ್ಯುತ್ತಮ ಪಟ್ಟಣ ಸಹಕಾರ ಬ್ಯಾಂಕ್‌ ಪ್ರಶಸ್ತಿಗೆ ಪಾತ್ರವಾಗಿರುವುದು ಇದರ ಹೆಗ್ಗಳಿಕೆಯಾಗಿದೆ.

ಈ ವರ್ಷಾಂತ್ಯಕ್ಕೆ 25 ಶಾಖೆ, ₹2000 ಕೋಟಿ ಠೇವಣಿ, ಹಾಗೂ ₹1500 ಕೋಟಿ ಸಾಲ ಹಾಗೂ ಮುಂಗಡ ನೀಡುವ ಗುರಿ ಹಾಕಿಕೊಂಡಿರುವ ನಿರ್ದೇಶಕ ಮಂಡಳಿಯು, ಅಧ್ಯಕ್ಷ ಚಂದ್ರಪ್ಪ ಅವರ ಸಮರ್ಥ ನಾಯಕತ್ವದಲ್ಲಿ ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟಿದೆ.

ನೂರಕ್ಕೂ ಹೆಚ್ಚು ವರ್ಷಗಳಲ್ಲಿ ಬ್ಯಾಂಕ್‌ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಸತತವಾಗಿ ಲಾಭಗಳಿಸುತ್ತ, ಸದಸ್ಯರಿಗೆ  ತಪ್ಪದೆ ಲಾಭಾಂಶ ಹಂಚುತ್ತ, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿ ಬೆಳೆಯುತ್ತಲೇ ಇದೆ.

2005ರ ತನಕ ಸಾಮಾನ್ಯ ಗತಿಯಲ್ಲಿ ಬೆಳೆದು ಬಂದಿದ್ದ ಸಹಕಾರಿ ಬ್ಯಾಂಕ್‌ 2005ರ ನಂತರ  ಬ್ಯಾಂಕಿನ ಚುಕ್ಕಾಣಿ ಹಿಡಿದು ಅಂದಿನಿಂದ ಇಂದಿನವರೆಗೂ ಅಧ್ಯಕ್ಷರಾಗಿರುವ   ಆವಲಹಳ್ಳಿ ಚಂದ್ರಪ್ಪ ಅವರ ದಕ್ಷ ಆಡಳಿತ, ಹೊಸ ಚಿಂತನೆಗಳ ಅಳವಡಿಕೆ, ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಹಕ ಸ್ನೇಹಿ ಚಟುವಟಿಕೆಗಳು ಇಂದು ನಾವು ಕಾಣುತ್ತಿರುವ ಬ್ಯಾಂಕಿನ ಶರವೇಗದ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡಿವೆ.

ಪ್ರಗತಿಗೆ ಕಾರಣವಾದ ಸಂಗತಿಗಳು
* ಶಾಖೆಗಳ ಒಳಾಂಗಣ ನವೀಕರಣ:   ಗ್ರಾಹಕರು ಸಹಕಾರಿ ಬ್ಯಾಂಕುಗಳನ್ನೂ ವಿದೇಶಿ ಹಾಗೂ ಖಾಸಗಿ ಬ್ಯಾಂಕುಗಳಿಗೆ ಹೋಲಿಸುವುದು ಸಹಜ. ಇದನ್ನು ಮನಗಂಡ ಅಧ್ಯಕ್ಷರು ಬ್ಯಾಂಕಿನ ಎಲ್ಲಾ ಶಾಖೆಗಳನ್ನು ಹವಾ ನಿಯಂತ್ರಣಗೊಳಿಸಿ, ಒಳಾಂಗಣ ನವೀಕರಿಸಿ, ಹೊಸ ಪೀಠೋಪಕರಣಗಳನ್ನು ಅಳವಡಿಸಿದರು.

* 2007 ರಿಂದ, ಪ್ರತಿ  ವರ್ಷ  ರಾಷ್ಟ್ರೀಯ ಹಬ್ಬಗಳಾದ  ಆಗಸ್ಟ್‌ 15 ಮತ್ತು ಜನವರಿ 26ಕ್ಕೆ ಉತ್ತಮ ಗ್ರಾಹಕರಿಗೆ (ಠೇವಣಿದಾರರು ಹಾಗೂ ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿದ ಗ್ರಾಹಕರು ಸೇರಿ) ಸನ್ಮಾನ ಸಮಾರಂಭ ಏರ್ಪಡಿಸುತ್ತ ಬರಲಾಗಿದೆ.

* ಗ್ರಾಹಕ, ಸದಸ್ಯ ಮತ್ತು ಸಿಬ್ಬಂದಿಯ ಪ್ರತಿಭಾವಂತ ಮಕ್ಕಳಿಗೆ ಸರ್ವ ಸದಸ್ಯರ ಮಹಾ ಸಭೆಯ ಮುಂಚಿನ ದಿವಸ  ₹1000 ನಗದು  ನೀಡಿ  ಸನ್ಮಾನಿಸಲಾಗುತ್ತಿದೆ.
 
* ಮುಖ್ಯ ಕಚೇರಿ ಹಾಗೂ ಎಲ್ಲಾ ಶಾಖೆಗಳು ಗಣಕೀಕೃತವಾಗಿದ್ದು, ಆಧುನಿಕಕ್ಕೆ ತಕ್ಕಂತೆ ರೂಪೆ ಎ.ಟಿ.ಎಂ. ಕಾರ್ಡ್‌, ಕೋರ್‌ ಬ್ಯಾಂಕಿಂಗ್‌, ಎಸ್‌.ಎಂ.ಎಸ್‌. ಸೌಲಭ್ಯ, ಟೆಲ್ಲರ್‌ ಸೇವೆ, ಆರ್‌ಟಿಜಿಎಸ್‌, ನೆಫ್ಟ್‌ ಇದೇ ಮೊದಲಾದ ಸೇವೆಗಳನ್ನು ಆರಂಭಿಸಲಾಗಿದೆ.

* ಹಿರಿಯ ನಾಗರಿಕರಿಗೆ ಪೇ–ಆರ್ಡ್‌ರ್‌, ಚೆಕ್‌ಬುಕ್‌ಗಳನ್ನು ಸೇವಾ ಶುಲ್ಕವಿಲ್ಲದೇ ವಿತರಿಸಲಾಗುವುದು.

* ಸಾಲ ಮರುಪಾವತಿಸಿದ ಉತ್ತಮ ಗ್ರಾಹಕರಿಗೆ,  ಶೇ 1 ಬಡ್ಡಿ ರಿಯಾಯ್ತಿ ನೀಡಲಾಗುವುದು. ಈ ಉದ್ದೇಶಕ್ಕೆ ಪ್ರತಿ ವರ್ಷ  ₹ 2 ಕೋಟಿ  ಮೀಸಲು ಇಡಲಾಗಿದೆ.

* ಗ್ರಾಹಕರು ಅವಧಿ ಠೇವಣಿ ಇರಿಸಿದಾಗ ತುರ್ತು ಸಂದರ್ಭದಲ್ಲಿ ಅವಧಿಗೆ ಮುನ್ನ ಹಣ ಪಡೆಯುವಲ್ಲಿ ಶೇ  1–2 ರಷ್ಟು ಬಡ್ಡಿ ಕಡಿತ ಮಾಡುವ ಪದ್ಧತಿ ಇದ್ದರೂ, ಇಲ್ಲಿ ಯಾವುದೇ ಕಡಿತವಿಲ್ಲದೇ ಹಣ ಹಿಂತಿರುಗಿಸಲಾಗುವುದು.

* ಠೇವಣಿ ಮೇಲಿನ ಸಾಲಕ್ಕೆ ನಿಗದಿತ ಬಡ್ಡಿಗಿಂತ ಶೇ 2 ಹೆಚ್ಚಿನ ಬಡ್ಡಿ ವಿಧಿಸುವ ಪದ್ಧತಿ ಇದ್ದರೂ  ಇಲ್ಲಿ  ಶೇ 1 ರಷ್ಟು ಮಾತ್ರ  ಬಡ್ಡಿ ವಿಧಿಸಲಾಗುವುದು.

* ಸದಸ್ಯರಿಗೆ ‘ಯಶಸ್ವಿನಿ’ ಆರೋಗ್ಯ ವಿಮೆ ಯೋಜನೆ ಮಾಡಲು ಅವಕಾಶವಿದೆ. ಇದರಿಂದ ₹2.50 ಲಕ್ಷಗಳ ತನಕ ಶಸ್ತ್ರ ಚಿಕಿತ್ಸೆ ಸೌಲಭ್ಯವನ್ನು ಪಡೆಯಬಹುದು.

* ಭಾರತೀಯ ಜೀವ ವಿಮಾ ನಿಗಮ  ಮತ್ತು ಕೋಟಕ್‌ ಜೀವ ವಿಮಾ ನಿಗಮಗಳ ಜೀವ ವಿಮೆ ಸೌಲಭ್ಯ  ಹಾಗೂ ಇಫ್ಕೊ ಟೋಕಿಯಾ ಜನರಲ್‌ ಇನ್ಸುರೆನ್‌್ಸ ಇವುಗಳಿಂದ ವಾಹನ, ಕಟ್ಟಡ ವಿಮೆ ಸೌಲಭ್ಯ ಒದಗಿಸಲಾಗಿದೆ.

* ಸದಸ್ಯರು ಮರಣ ಹೊಂದಿದಲ್ಲಿ ₹ 9,000 ಪರಿಹಾರ ತಕ್ಷಣ ನೀಡಲಾಗುವುದು. ಅದೇ ರೀತಿ ಒಂದು ಬಾರಿ ₹200  ಪಾವತಿಸಿದ್ದರೆ (ಮರಣ ಪರಿಹಾರ ಹೊರತುಪಡಿಸಿ) ಸದಸ್ಯರು ತೀವ್ರ ಕಾಯಿಲೆಗೆ ತುತ್ತಾದಾಗ ₹ 5,000 ಧನ ಸಹಾಯ ಮಾಡಲಾಗುವುದು.

* ಎಂ.ಐ.ಎಸ್‌. ( month*y income scheme) ಠೇವಣಿದಾರರು ಠೇವಣಿ ಮೇಲೆ ಪ್ರತಿ ತಿಂಗಳೂ ಬಡ್ಡಿ ಪಡೆಯುವ ಯೋಜನೆ ಇದಾಗಿದೆ. ಠೇವಣಿದಾರ ಠೇವಣಿ ಇರಿಸಿ,  ಬೇರೊಂದು ಬ್ಯಾಂಕಿನ ಉಳಿತಾಯ ಖಾತೆಗೆ ಮಾಸಿಕ ಬಡ್ಡಿ ಪಡೆಯಲು ಇಚ್ಛಿಸಿದರೆ, ಉಚಿತವಾಗಿ  ಆರ್‌ಟಿಜಿಎಸ್‌ ಮುಖಾಂತರ ಪ್ರತಿ ತಿಂಗಳೂ ಬಡ್ಡಿ ರವಾನಿಸಲಾಗುವುದು. ಹೀಗೆ ಮಾಸಿಕ ಬಡ್ಡಿ ವಿತರಿಸುವಾಗ, ಹಲವು ಬ್ಯಾಂಕುಗಳು ಮೂಲ ಬಡ್ಡಿಯಲ್ಲಿ ಸ್ವಲ್ಪ ಕಡಿತ ಮಾಡಿ ಕೊಡುತ್ತವೆ. ಆದರೆ ಈ ಬ್ಯಾಂಕಿನಲ್ಲಿ ಹಾಗೆ ಕಡಿತ ಮಾಡುವ ಪದ್ಧತಿ ಇರುವುದಿಲ್ಲ. 

* ಅಕ್ಷಯ ಪಿಂಚಣಿ ಯೋಜನೆ: ಇಂದಿನ ವಾತಾವರಣದಲ್ಲಿ ‘ಪಿಂಚಣಿ’ ಎನ್ನುವ ಪರಿಕಲ್ಪನೆ ಸರ್ಕಾರಿ ಸಂಸ್ಥೆಗಳಲ್ಲೂ ಮಾಯವಾಗುತ್ತಿದ್ದು, ಜೀವನದ ಸಂಜೆಯಲ್ಲಿ ಸುಖವಾಗಿ ಬಾಳಲು ಸ್ವಯಂಕೃತ ಪಿಂಚಣಿ ಯೋಜನೆ ಅಳವಡಿಸಿಕೊಳ್ಳಬೇಕಾಗಿದೆ. ಈ ವಿಚಾರ ಮನಗಂಡ ಬ್ಯಾಂಕ್‌, ತನ್ನ ಗ್ರಾಹಕರಿಗೆ ‘ಅಕ್ಷಯ ಪಿಂಚಣಿ ಠೇವಣಿ’ ಸೌಲಭ್ಯ ಪರಿಚಯಿಸಿದೆ.  ಗ್ರಾಹಕನೊಬ್ಬ ಕನಿಷ್ಠ ₹ 2500 ಆರ್‌.ಡಿ. 10 ವರ್ಷಗಳ ತನಕ ಮಾಡಿ ಮುಂದೆ, ನಿರಂತರವಾಗಿ ಪ್ರತಿ ತಿಂಗಳೂ ಪಿಂಚಣಿ ರೂಪದಲ್ಲಿ ಬಡ್ಡಿ ಪಡೆಯಬಹುದು.

* ಗ್ರಾಹಕರ ಸೇವೆಗಾಗಿ ಬ್ಯಾಂಕು ಬೆಳಿಗ್ಗೆ 9.00–12.30ರ ತನಕ ಹಾಗೂ ಸಂಜೆ 4.00–6.30 ತನಕ ತೆರೆದಿರುತ್ತದೆ. ಸಂಜೆ   6.30ರ ತನಕ ತೆರೆದಿರುವುದರಿಂದ, ಗ್ರಾಹಕರು ತಮ್ಮ ಆಫೀಸು ಕೆಲಸ ಮುಗಿಸಿ ಕೂಡಾ ಬ್ಯಾಂಕ್‌ ವ್ಯವಹಾರ ಮಾಡಲು ಅನುಕೂಲವಾಗಿದೆ.

ಬ್ಯಾಂಕು ಒಂದು ಸೇವಾ ಕ್ಷೇತ್ರ. ಇಲ್ಲಿ ಎಲ್ಲಾ ಯೋಜನೆಗಳ ಯಶಸ್ಸಿಗೆ ಗ್ರಾಹಕ ಸಿಬ್ಬಂದಿ ನಡುವಣ ಬಾಂಧವ್ಯ ಮುಖ್ಯವಾಗುತ್ತದೆ. ಸಿಬ್ಬಂದಿಯ ನಗುಮುಖ ಸೇವೆಯೇ ಬ್ಯಾಂಕು ಈ ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ.

ಸಾಮಾಜಿಕ ಕಾರ್ಯಗಳಿಗೆ  ದಾನ
ಕಿದ್ವಾಯಿ ಗ್ರಂಥಿ ಸಂಸ್ಥೆಗೆ ₹1 ಲಕ್ಷ , ಸಹಕಾರಿ ತರಬೇತಿ ಮಹಾವಿದ್ಯಾಲಯಕ್ಕೆ  ₹ 50,000,  ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಕ್ಕೆ   ₹2  ಲಕ್ಷ,  ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಯೋಧರ ಅವಲಂಬಿತರಿಗಾಗಿ ₹50,000 ಸಾವಿರ , ಒರಿಸ್ಸಾ ಚಂಡಮಾರುತ ಹಾಗೂ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪದ ಪುನರ್‌ ವಸತಿಗೆ ತಲಾ ₹50,000,   ಮೈಸೂರು ಜಿಲ್ಲೆ ಕೆ.ಆರ್‌. ನಗರ ತಾಲ್ಲೂಕಿನ ಚೀರನಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕಾಗಿ ₹60 ಸಾವಿರ, ಜಯದೇವ ಹೃದ್ರೋಗ ಆಸ್ಪತ್ರೆಗೆ ಬಡರೋಗಿಗಳ ಚಿಕಿತ್ಸೆಗೆ ನೆರವಾಗಲು ₹10 ಲಕ್ಷಗಳ ಧನ ಸಹಾಯ ಮಾಡಲಾಗಿದೆ. ಬ್ಯಾಂಕಿನ ಸದಸ್ಯರುಗಳು ಹೊರ ರೋಗಿಗಳಾಗಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಂಡಿದೆ.

ಬ್ಯಾಂಕಿನ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವೊಂದನ್ನು ಬೆಂಗಳೂರು ನಗರದ ಮಾಗಡಿ ರಸ್ತೆಯ ಚಲುವಪ್ಪ ಗಾರ್ಡನ್‌ನಲ್ಲಿ ಸ್ಥಾಪಿಸಲಾಗಿದೆ.   ಭೂಕಂಪದಲ್ಲಿ ನಲುಗಿದ ನೇಪಾಳಕ್ಕೆ ನೆರವಾಗಲು  ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ  ₹ 5 ಲಕ್ಷ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT