ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಟ್‌ಫೋನ್‌ ಹೇಗೆ ಕೆಲಸ ಮಾಡುತ್ತದೆ?

ಮಿನುಗು ಮಿಂಚು
Last Updated 24 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮೊಬೈಲ್‌ ಟವರ್‌ಗಳ ಬದಲು ಉಪಗ್ರಹಗಳ ಸಂಪರ್ಕದಿಂದ ಸ್ಯಾಟಲೈಟ್‌ ಫೋನ್‌ಗಳು ಕಾರ್ಯನಿರ್ವಹಿಸುತ್ತವೆ. ಭೂಮಿಯ ಮೇಲೆ ಇರುವಂತೆ ಕಂಡರೂ ಭೂಮಿಯನ್ನು ಪರಿಭ್ರಮಿಸುವ ಉಪಗ್ರಹಗಳಿಂದ ಇವುಗಳು ಸಂಪರ್ಕ ಸಾಧಿಸುತ್ತವೆ. ಭೂಮಿಯ ಮೇಲೆ 35,786 ಕಿ.ಮೀ. ಮೇಲ್ಭಾಗದಲ್ಲಿ ಈ ಉಪಗ್ರಹಗಳ ಭೂಸ್ಥಾಯಿ ಇರುತ್ತದೆ. ಇನ್ನು ಕೆಲವು ಉಪಗ್ರಹಗಳು 160–200 ಕಿ.ಮೀ. ದೂರದಲ್ಲಿಯೂ ಸ್ಥಾಯಿಗೊಳ್ಳುತ್ತವೆ.

ಸ್ಯಾಟ್‌ಫೋನ್‌ ಗ್ರಾಹಕ ಕರೆ ಮಾಡಿದಾಗ ಅದು ಉಪಗ್ರಹಕ್ಕೆ ಸಂಕೇತಗಳನ್ನು ಕಳುಹಿಸುತ್ತದೆ. ಅಲ್ಲಿಂದ ಉಪಗ್ರಹವು ಇನ್ನೊಂದು ಸ್ಯಾಟ್‌ಫೋನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಸಾಮಾನ್ಯ ಸ್ಥಿರ ಅಥವಾ ಮೊಬೈಲ್‌ ಸಂಪರ್ಕ ಸೇವಾ ಕಂಪೆನಿಗಳ ನೆರವನ್ನು ಪಡೆಯುವುದಿಲ್ಲ.

ಸ್ಯಾಟ್‌ಫೋನ್‌ಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಹಡಗುಗಳು, ಕಟ್ಟಡಗಳಲ್ಲಿ ಅವುಗಳ ಬಳಕೆ ವ್ಯಾಪಕವಾಗಿದೆ. ಸೆಲ್‌ಫೋನ್‌ನಂತೆ ಸ್ಯಾಟ್‌ಫೋನ್‌ಗಳು ಪ್ರವಾಹ, ನೆರೆ ಹಾವಳಿಯಿಂದ ಸ್ಥಗಿತಗೊಳ್ಳುವುದಿಲ್ಲ. ಪ್ರತಿಕೂಲ ಹವಾಮಾನ ಕೂಡ ಅವುಗಳ ಮೇಲೆ ಪರಿಣಾಮ ಬೀರಲಾರದು.

ಯಾವುದೇ ಟವರ್‌ನ ಪ್ಯಾಪ್ತಿಯಲ್ಲಿ ಇರಬೇಕೆಂಬ ಅನಿವಾರ್ಯವೂ ಇಲ್ಲ. ದೊಡ್ಡ ಮರಗಳು, ಕಟ್ಟಡಗಳು, ಬೆಟ್ಟಗಳು – ಇಂಥ ಅಡಚಣೆಗಳು ಉಪಗ್ರಹದಿಂದ ಸ್ಯಾಟ್‌ಫೋನ್‌ ಇರುವ ಮಾರ್ಗದಲ್ಲಿ ಇರದಿದ್ದರೆ ಆಯಿತು. ಆ್ಯಂಟೆನಾಗಳು ಹೆಚ್ಚಾಗಿ ಬಳಕೆಯಲ್ಲಿ ಇಲ್ಲದ ಪ್ರದೇಶಗಳಲ್ಲಿ ಸ್ಯಾಟ್‌ಫೋನ್‌ಗಳ ಉಪಯೋಗ ಸೂಕ್ತ. ಅದಕ್ಕೇ ಜನವಸತಿ ಪ್ರದೇಶಗಳಿಂದ ದೂರ ಇರುವ ತಾಣಗಳಲ್ಲಿ ಇವುಗಳ ಬಳಕೆ ಹೆಚ್ಚು.

ಇರಿಡಿಯಂನಂಥ ಉಪಗ್ರಹ ಸಂಪರ್ಕ ಕಂಪೆನಿಗಳು ಸ್ಯಾಟ್‌ಫೋನ್‌ ಸೇವೆಯನ್ನು ಒದಗಿಸುತ್ತವೆ. ಧ್ರುವ ಪ್ರದೇಶಗಳು ಹಾಗೂ ಸಾಗರದ ಸ್ಥಳಗಳಲ್ಲಿ ಇವುಗಳ ಸೇವೆ ಲಭ್ಯ. ಸಾಹಸಿಗಳು, ದುರಂತಗಳಿಂದ ಬದುಕುಳಿಯುವವರು, ನಾವಿಕರು ಹಾಗೂ ಹಡಗಿನಲ್ಲಿ ಸಾಗುವ ಪ್ರಯಾಣಿಕರು ನಾಗರಿಕ ಸಮಾಜದ ಜೊತೆ ಸಂಪರ್ಕ ಇಟ್ಟುಕೊಳ್ಳಲು ಸ್ಯಾಟ್‌ಫೋನ್‌ಗಳು ಸೂಕ್ತ. ಭಾರತದಂಥ ದೇಶದಲ್ಲಿ ಸ್ಯಾಟ್‌ಫೋನ್‌ ಇಟ್ಟುಕೊಳ್ಳುವುದು ಅಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT