ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂಮಿಯ ಉದಯ

ಫೋಟೋ ಮಾತು
Last Updated 24 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

1968ರ ಕ್ರಿಸ್‌ಮಸ್‌ ರಜೆಯ ಸಂದರ್ಭ. ಗಗನಯಾತ್ರಿ ವಿಲಿಯಂ ಆ್ಯಂಡರ್ಸ್‌ ಮೊದಲ ಮಾನವ ಚಂದ್ರಯಾನಕ್ಕೆಂದು ‘ಅಪೊಲೊ 8’ ನೌಕೆಯನ್ನು ಹತ್ತಿದರು. ಚಂದ್ರನ ವ್ಯಾಪ್ತಿ ಪ್ರದೇಶಿಸುತ್ತಿದ್ದಂತೆ ಭೂಮಿ ಅಲ್ಲಿಂದ ಬೇರೆಯದೇ ರೀತಿ ಕಂಡಿತು. ಅದು ‘ಭೂಮಿಯ ಉದಯ’ದ ಚಿತ್ರಿಕೆ ಕಟ್ಟಿಕೊಟ್ಟಿತು. ನೀಲಿ ಹಿನ್ನೆಲೆಯಲ್ಲಿ ಭೂಮಿ ಕಂಡ ರೀತಿ ಅವರಿಗೆ ಬೆರಗು ಮೂಡಿಸಿತು.

ಆ ಗಗನಯಾತ್ರೆಯ ಕಮಾಂಡರ್‌ ಫ್ರಾಂಕ್‌ ಬೋರ್ಮನ್‌ ತಕ್ಷಣವೇ ತಮ್ಮ ಕ್ಯಾಮೆರಾ ತೆಗೆದುಕೊಂಡು ಕಪ್ಪು–ಬಿಳುಪು ಫೋಟೊ ತೆಗೆದರು. ಆ್ಯಂಡರ್ಸ್‌ ಹಾಗೂ ಸಹ ಪೈಲಟ್‌ ಜೇಮ್ಸ್‌ ಲೊವೆಲ್‌ ಕಲರ್‌ ಫಿಲ್ಮ್‌ಗಾಗಿ ತಡಕಾಡಿದರು. ಆ್ಯಂಡರ್ಸ್‌ ಮೊದಲು ತಮ್ಮ ಕ್ಯಾಮೆರಾಗೆ ಫಿಲ್ಮ್‌ ತುಂಬಿಸಿ, ನೌಕೆಯ ಕಿಟಕಿಯಿಂದ ಒಂದು ಅದ್ಭುತ ಫೋಟೊ ತೆಗೆದರು.

ಚಂದ್ರನ ಮೇಲ್ಮೈ ಲಕ್ಷಣ ತಿಳಿಯಲೆಂದು ಗಗನಯಾತ್ರಿಗಳು ಹೊರಟಿದ್ದರಾದರೂ ಆಮೇಲೆ ಚಂದ್ರನಿಂದ ಭೂಮಿ ಹೇಗೆ ಕಾಣುತ್ತದೆ ಎಂದು ಅವರು ಅಧ್ಯಯನ ನಡೆಸಲು ಈ ಫೋಟೊ ಪ್ರೇರಣೆಯಾಯಿತು. ಕಾರ್ಯಾಚರಣೆಯ ಆಸಕ್ತಿಕರ ವಿಷಯವಾಗಿಯೂ ಅದು ಪರಿಣಮಿಸಿತು.

‘20ನೇ ಶತಮಾನದ ಶ್ರೇಷ್ಠ ಫೋಟೊಗಳಲ್ಲಿ ಒಂದು’ ಎನಿಸಿರುವ ಇದು ವಿಶ್ವವನ್ನೇ ಬದಲಿಸಿದ ಚಿತ್ರ ಎಂದು ‘ಟೈಮ್‌’ ಹಾಗೂ ‘ಲೈಫ್‌’ ಪತ್ರಿಕೆಗಳ ಸಂಪಾದಕರು ಬರೆದರು. ಅಮೆರಿಕದ ಅಂಚೆಚೀಟಿಯಲ್ಲೂ ಈ ಫೋಟೊ ಬಳಕೆಯಾಯಿತು. ಗಗನಯಾತ್ರಿಗಳು ಭೂಮಿ ತಲುಪಿದ ಆರು ತಿಂಗಳ ನಂತರ ಈ ಅಂಚೆಚೀಟಿ ಬಿಡುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT