ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆಯ ಹರಿಕಾರ ಅಂಬೇಡ್ಕರ್

Last Updated 26 ಸೆಪ್ಟೆಂಬರ್ 2016, 10:57 IST
ಅಕ್ಷರ ಗಾತ್ರ

ಚಾಮರಾಜನಗರ: ‘ಡಾ.ಬಿ.ಆರ್. ಅಂಬೇಡ್ಕರ್‌ ದೇಶದಲ್ಲಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಅತ್ಯುತ್ತಮ ಸಂವಿಧಾನ ರಚಿಸಿಕೊಟ್ಟ ಶ್ರೇಷ್ಠ ತಜ್ಞ’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್‌. ಮಹೇಶ್‌ ಬಣ್ಣಿಸಿದರು.

ನಗರದ ಜೆ.ಎಚ್. ಪಟೇಲ್‌ ಸಭಾಂಗಣದಲ್ಲಿ ಭಾನುವಾರ ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾನತೆಯ ಸಮಾಜಕ್ಕಾಗಿ ತನ್ನ ಬದುಕನ್ನೇ ಸಮರ್ಪಿಸಿಕೊಂಡ ಅಂಬೇಡ್ಕರ್ ಮಹಿಳೆಯರ ಶ್ರೇಯೋಭಿ ವೃದ್ಧಿ, ಕಾರ್ಮಿಕರ ಕಲ್ಯಾಣ, ದುಡಿಯುವ ವರ್ಗಗಳಿಗೆ ಉದ್ಯೋಗ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು ಎಂದು ತಿಳಿಸಿದರು.

‘1950ರ ಜ. 26ರಂದು ನಾವು ವೈರುಧ್ಯಗಳಿಂದ ಕೂಡಿದ ಬದುಕಿಗೆ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆ ಪಡೆದಿದ್ದರು. ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಮುಂದುವರಿದಿದೆ. ಈ ಅಸಮಾನತೆ ನಿರ್ಮೂಲನೆ ಮಾಡದಿದ್ದರೆ ನಾವು ಕಟ್ಟಿರುವ ರಾಜಕೀಯ ಸಮಾನತೆ ನಾಶವಾಗುತ್ತದೆ’ ಎಂದು ಅಂಬೇಡ್ಕರ್‌್ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಾವು ಜಾಗೃತರಾಗಬೇಕು ಎಂದರು.

ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ವಿಭಿನ್ನವಾಗಿದೆ. ಅವರು, ಸಮಾಜವನ್ನು ತಮ್ಮ ಕಲ್ಪನೆಯ ಸುಖಿ ರಾಜ್ಯವನ್ನಾಗಿ ಬದಲಾಯಿಸಿ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವಗಳನ್ನು ಒಟ್ಟಿಗೆ ಸಾಧಿಸುವ ಪ್ರಜಾಪ್ರಭುತ್ವ ಕಲ್ಪಿಸಿಕೊಂಡಿ ದ್ದರು ಎಂದು ತಿಳಿಸಿದರು.

ನಮ್ಮನ್ನು ಆಳುತ್ತಿರುವ ಸರ್ಕಾರಗಳ ಸಾಮ್ರಾಜ್ಯಶಾಹಿ ಧೋರಣೆ ಹಾಗೂ ಪ್ರಜಾಪ್ರಭುತ್ವಕ್ಕೆ ವಿರುದ್ಧ ಆಡಳಿತ ನಡೆಸುತ್ತಿರುವುದರಿಂದ ಪ್ರಜೆಗಳ ಆರ್ಥಿಕ ಸ್ಥಿತಿ ಬದಲಾಗುತ್ತಿಲ್ಲ. ಇದರಿಂದ ದುರ್ಬಲಗೊಳ್ಳುತ್ತಿರುವ ಪ್ರಜಾಪ್ರಭುತ ವನ್ನು ಸಬಲೀಕರಣಗೊಳಿಸಲು ಬಿವಿಎಸ್ ರಾಜ್ಯದಾದ್ಯಂತ ಹಮ್ಮಿಕೊಂಡಿ ರುವ ಜನಾಂದೋಲನ ಯಶ್ವಸಿಗೊಳಿ ಸಲು ನಾವೆಲ್ಲರೂ ಶ್ರಮಿಸಬೇಕು ಎಂದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ದೇಶದ ರಾಜಕೀಯ ಪಕ್ಷಗಳಿಗೆ ಸೈದ್ಧಾಂತಿಕ ಸ್ಪಷ್ಟತೆಯಿಲ್ಲ. ನಮ್ಮ ಸರ್ಕಾರ ಗಳು ವಿಭಿನ್ನವಾಗಿದ್ದು, ಬಡಜನರ ಮರೆತು ಕಾರ್ಪೊರೇಟ್ ಸಂಸ್ಥೆಗಳ ಮಾಲೀಕರಿಗೆ ಉಚಿತವಾಗಿ ನೆಲ, ಜಲ, ವಿದ್ಯುತ್ ನೀಡಿ ಅವರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಯಾವುದೇ ನಿರೀಕ್ಷೆಗಳನ್ನು ಇಟ್ಟು ಕೊಳ್ಳದೆ ನಾವೆಲ್ಲರೂ ಒಗ್ಗೂಡಿ ಹೋರಾಟ ನಡೆಸಿ, ನಾಡುಕಟ್ಟುವ ಕೆಲಸ ಮಾಡಬೇಕಿದೆ. ಭೂಮಿ, ನೀರಿಗಾಗಿ ಚಳವಳಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.

ಜಾತಿ ವ್ಯವಸ್ಥೆಯಿಂದ ಇಂದು ಶೋಷಣೆ, ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಇದರ ವಿರುದ್ಧ ಬಿವಿಎಸ್‌್ ವಿದ್ಯಾರ್ಥಿ ಸಂಘ ಮತ್ತು ಪಕ್ಷ ಜನರಲ್ಲಿ ಜಾಗೃತಿ ಮೂಡಿಸಲು ಹೋರಟಿದೆ. ಇವರ ಜನಾಂದೋಲನ ಯಶಸ್ವಿಯಾಗಲಿ. ಎಲ್ಲರೂ ಅವರೊಟ್ಟಿಗೆ ಕೈಜೋಡಿಸಿ ಸಹಕರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ‘ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ಉಳಿ ಸೋಣ’ ವಿಚಾರ ಕುರಿತು ವಿದ್ಯಾರ್ಥಿ ಸುಮೇಧ ಪ್ರಬಂಧ ಮಂಡಿಸಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ಪಿ. ದೇವರಾಜು, ವಕೀಲ ಶ್ರೀಧರ್‌ ಪ್ರಭು, ಚಾಮುಂಡೇಶ್ವರಿ ಕ್ಲಿನಿಕ್‌ ಸಹಾ ಯಕ ಪ್ರಾಧ್ಯಾಪಕ ಡಾ.ಎ.ಆರ್‌. ಬಾಬು, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ನೇತ್ರಾವತಿ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ರಾದ ಡಾ.ಎಚ್‌.ಎಸ್. ಪ್ರೇಮಲತಾ, ಮುಖಂಡರಾದ ಪರ್ವತ್‌ರಾಜ್‌, ಅಬ್ರಾರ್‌್ ಅಹಮ್ಮದ್‌, ಸೋಮಣ್ಣ ಉಪ್ಪಾರ್‌್, ಮಹದೇವಸ್ವಾಮಿ, ಸೋಮಣ್ಣೇಗೌಡ, ಪರಮೇಶ್ವರಪ್ಪ, ಸಿದ್ದ ಮಲ್ಲಪ್ಪ, ಶಿವಣ್ಣ, ಕೆ.ಎಂ. ನಾಗರಾಜು, ಸಿದ್ದರಾಜಪ್ಪ, ಎನ್‌.ಮಹೇಶ್, ಕಾಳಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT