ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಾಮಾ ಜ್ಯೂನಿಯರ್ಸ್: ಪುಟ್ಟರಾಜು, ಚಿತ್ರಾಲಿಗೆ ಪ್ರಥಮ ಸ್ಥಾನ?

Last Updated 26 ಸೆಪ್ಟೆಂಬರ್ 2016, 12:53 IST
ಅಕ್ಷರ ಗಾತ್ರ

ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ನ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಗದಗದ ಕುವರ ಪುಟ್ಟರಾಜು ಮತ್ತು ಮಂಗಳೂರು ಮೂಲದ ಚಿತ್ರಾಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಮಹೇಂದ್ರ ಮೊದಲ ರನ್ನರ್ ಅಪ್ ಮತ್ತು ಅಮೋಘ ಎರಡನೇ ರನ್ನರ್ ಅಪ್ ಆಗಿದ್ದು, ವಿಜೇತರ ಬಗ್ಗೆ ವಾಹಿನಿ ಈವರೆಗೆ ಅಧಿಕೃತ ಪ್ರಕಟಣೆ ನೀಡಿಲ್ಲ.

ಭಾನುವಾರ ಗದಗದ ವಿದ್ಯಾದಾನ ಸಮಿತಿ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಫೈನಲ್ ಸ್ಪರ್ಧೆ ನಡೆದಿತ್ತು. ಫೈನಲ್ ಸ್ಪರ್ಧೆಯ ಕಂತು ಅಕ್ಟೋಬರ್ 1 ಮತ್ತು 2 ರಂದು ಪ್ರಸಾರವಾಗಲಿದೆ.

ಅಚಿಂತ್ಯ, ತುಷಾರ್, ಪುಟ್ಟರಾಜು, ಅಮೋಘ, ಚಿತ್ರಾಲಿ, ಮಹೇಂದ್ರ, ರೇವತಿ ಮತ್ತು ತೇಜಸ್ವಿನಿ ಫೈನಲ್ ಹಂತದಲ್ಲಿ ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT