ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಕಾಶ್ಮೀರದ ಕನಸು ಕಾಣುವುದನ್ನು ನಿಲ್ಲಿಸಲಿ: ಸುಷ್ಮಾ ಸ್ವರಾಜ್

Last Updated 26 ಸೆಪ್ಟೆಂಬರ್ 2016, 16:20 IST
ಅಕ್ಷರ ಗಾತ್ರ
ADVERTISEMENT

ನ್ಯೂಯಾರ್ಕ್: ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನ ಅದರ ಕುರಿತು ಕನಸು ಕಾಣುವುದನ್ನು ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆಯ 71ನೇ ಮಹಾಧಿವೇಶನದಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಭಯೋತ್ಪಾದನೆ ವಿರುದ್ಧ ಗುಡುಗಿದ್ದಾರೆ.

ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಉದ್ದೇಶಿಸಿ ಸೋಮವಾರ ಭಾಷಣ ಮಾಡಿದ ಅವರು, ದೇಶದ ಉತ್ತಮ ಕಾರ್ಯ ಯೋಜನೆಗಳು ಸೇರಿದಂತೆ ಮತ್ತಷ್ಟು ಪ್ರಮುಖ ವಿಚಾರಗಳನ್ನು ವಿಶ್ವ ಸಂಸ್ಥೆಯ ಮುಂದಿರಿಸಿದ್ದಾರೆ.

ಭಾಷಣದ ಕೆಲವು ಅಂಶಗಳು;
* ಭಯೋತ್ಪಾದಕರು ಬಂದೂಕು ಕಾರ್ಖಾನೆಗಳನ್ನು ಅಥವಾ ಬ್ಯಾಂಕ್‌ಗಳನ್ನು ಹೊಂದಿಲ್ಲ. ಅವರಿಗೆ ಪಾಕಿಸ್ತಾನದಂತಹ ರಾಷ್ಟ್ರಗಳಿಂದ ಬೆಂಬಲ ದೊರೆಯುತ್ತಿದ್ದು, ಭಯೋತ್ಪಾದನ ಚಟುವಟಿಕೆಗಳನ್ನು ನಡೆಸಲು ಸಹಕಾರಿಯಾಗಿದೆ.

* ಭಯೋತ್ಪಾದನೆ ಮಾನವತೆಯ ವಿರುದ್ಧದ ಅತಿ ದೊಡ್ಡ ಅಪರಾಧವಾಗಿದೆ. ಯುದ್ಧ ಅಥವಾ ರಾಜಕಾರಣಗಳಿಂದ ಏನನ್ನೂ ಅಪೇಕ್ಷಿಸದ ಮುಗ್ಧ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ.

* ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುವ ದುಸ್ಸಾಹಸಕ್ಕೆ ಮುಂದಾಗಬಾರದೆಂದು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT