ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ಹೆಚ್ಚು ಕಾಲ ಬದುಕಿರುವ ಮೀನುಗಳು

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮೀನುಗಳ ಜೀವಿತಾವಧಿ ಕಡಿಮೆ. ಅದರಲ್ಲಿ ‘ಗೋಲ್ಡನ್‌ ಫಿಶ್’ ಪ್ರಭೇದದ ಮೀನು ಸ್ವಲ್ಪ ಹೆಚ್ಚು ಕಾಲ ಬದುಕಬಲ್ಲದು. ಇದೇ ಹಾದಿಯಲ್ಲಿ, ಇತ್ತೀಚೆಗಷ್ಟೇ ‘ಸ್ಪ್ಲಾಶ್’ ಎಂಬ ಹೆಸರಿನ ಗೋಲ್ಡ್ ಫಿಶ್ 38 ವರ್ಷ ಬದುಕಿ, ಅತಿ ಹೆಚ್ಚು ಕಾಲ ಬದುಕಿದ ಮೀನು ಎಂಬ ಪಟ್ಟ ತೆಗೆದುಕೊಂಡಿತ್ತು. ಆದರೆ ಆ ಪಟ್ಟವನ್ನು ಇನ್ನೆರಡು ಮೀನುಗಳು ತೆಗೆದುಕೊಂಡಿವೆ. ಅವೇ ಫ್ರೆಡ್ ಮತ್ತು ಜಾರ್ಜ್.

ಇವು ಕೂಡ ಗೋಲ್ಡ್‌ ಫಿಶ್‌ಗಳಾಗಿದ್ದು, ನಲವತ್ತು ವರ್ಷಕ್ಕೆ ಕಾಲಿಟ್ಟು ಈ ಹಿಂದಿನ ದಾಖಲೆಯನ್ನು ಮುರಿದಿವೆಯಂತೆ. ಈ ಫ್ರೆಡ್ ಮತ್ತು ಜಾರ್ಜ್ ಮೀನುಗಳ ಆಯಸ್ಸು ನಲವತ್ತು ವರ್ಷ ತುಂಬಿದೆ ಎಂದು ಅವುಗಳನ್ನು ಸಾಕಿರುವ ಕೀತ್ ಮತ್ತು ಮೇರಿ ಅಲೈಸ್ ಹೇಳಿಕೊಂಡಿದ್ದಾರೆ. ‘ಸ್ಪ್ಲಾಶ್’ ಮೀನಿನ ಸುದ್ದಿ ತಿಳಿದು, ತಾವು ಸಾಕಿರುವ ಮೀನುಗಳ ಕುರಿತು ಹೇಳಿಕೊಂಡಿದ್ದಾರೆ. ಇಂಗ್ಲೆಂಡ್‌ನ ವಾರ್ಸೆಸ್ಟರ್‌ನ ಈ ದಂಪತಿ ಅಲ್ಲಿನ ಸ್ಥಳೀಯ ಉತ್ಸವವೊಂದರಲ್ಲಿ 1975ರಲ್ಲಿ ಈ ಮೀನನ್ನು ಗೆದ್ದಿದ್ದರು. ಆಗಿನಿಂದ ಅವರ ಕುಟುಂಬದೊಂದಿಗೇ ಈ ಮೀನು ಕೂಡ ಇದೆ.

‘ಮೀನಿಗೆ ಸಹಜವಾಗಿ ಏನು ಆಹಾರ ಕೊಡುತ್ತಾರೋ ಅದನ್ನೇ ಕೊಡುತ್ತಿದ್ದೇವೆ. ಇದಕ್ಕೆಂದು ವಿಶೇಷವಾಗಿ ಏನೂ ಆಹಾರ ನೀಡಿಲ್ಲ. ಇಷ್ಟು ವಯಸ್ಸಾದರೂ ಅವು ಚಟುವಟಿಕೆಯಿಂದ ಕೂಡಿವೆ. ಒಮ್ಮೆಯೂ ಸುಸ್ತಾದಂತೆ ಕಾಣುವುದಿಲ್ಲ’ ಎಂದು ಮೀನುಗಳ ಗುಣಗಾನ ಮಾಡಿದ್ದಾರೆ ದಂಪತಿ.

‘ಅವು ನನ್ನ ಗೆಳೆಯರು ಎಂದು ಹೇಳಿದರೆ ನಿಮಗೆ ಅತಿ ಎನ್ನಿಸಬಹುದು. ಆದರೆ ಇದು ನಿಜ. ಅವು ಅತಿ ಹೆಚ್ಚು ಕಾಲ ಬದುಕಿರುವ ಮೀನು ಎಂಬ ಪಟ್ಟ ಗೆದ್ದಿರುವುದು ನನಗೆ ಖುಷಿ ಎನ್ನಿಸುತ್ತಿದೆ’ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ ಕೀತ್. ತುಂಬಾ ದಿನ ಅವನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದೂ ಪ್ರೀತಿ ತೋರಿದ್ದಾರೆ.

ಉತ್ಸವದಲ್ಲಿ ರೊಮಾಂಟಿಕ್ ಉಡುಗೊರೆ ಎಂದು ಈ ಮೀನುಗಳನ್ನು ಪಡೆದ ದಂಪತಿ, ಈ ಮೀನುಗಳು ಅಬ್ಬಬ್ಬಾ ಎಂದರೆ ಹತ್ತು ವರ್ಷ ಬದುಕಬಹುದು ಎಂದು  ಅಂದಾಜು ಮಾಡಿದ್ದರಂತೆ. ಆದರೆ ಅವರ ನಿರೀಕ್ಷೆ ಮೀರಿ ಈ ಮೀನುಗಳು ಬದುಕಿದ್ದು ಅಚ್ಚರಿಯೊಂದಿಗೆ ಸಂತಸವನ್ನೂ ನೀಡಿವೆ. ಈ ಮುನ್ನ, ಅಂದರೆ 2005ರಲ್ಲಿ 45ನೇ ವಯಸ್ಸಿನವರೆಗೂ ಬದುಕಿದ್ದ ಮೀನೊಂದು ಅತಿ ವಯಸ್ಸಾದ ಮೀನು ಎಂದು ದಾಖಲೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT