ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ರಸ್ಥಾನ ಕಾಯ್ದುಕೊಂಡ ಸಾನಿಯಾ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ:  ಸಾನಿಯಾ ಮಿರ್ಜಾ ಅವರು ಸೋಮವಾರ ವಿಶ್ವ ಟೆನಿಸ್‌ ಸಂಸ್ಥೆ ಬಿಡುಗಡೆ ಮಾಡಿರುವ ನೂತನ ಡಬಲ್ಸ್‌ ವಿಶ್ವ ಕ್ರಮಾಂಕ ಪಟ್ಟಿ ಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಭಾನುವಾರ ಮುಗಿದ ಪಾನ್‌ ಪೆಸಿಫಿಕ್‌ ಟೆನಿಸ್‌ ಟೂರ್ನಿಯಲ್ಲಿ ಜೆಕ್‌ ಗಣರಾಜ್ಯದ ಬಾರ್ಬೊರ ಸ್ಟ್ರೈಕೋವಾ ಜೊತೆಗೂಡಿ ಆಡಿದ್ದ ಸಾನಿಯಾ ಪ್ರಶಸ್ತಿ ಗೆದ್ದಿದ್ದರು.

ಭಾರತದ ಆಟಗಾರ್ತಿಯ ಖಾತೆ ಯಲ್ಲಿ ಒಟ್ಟು 9730 ಪಾಯಿಂಟ್ಸ್‌ ಇದ್ದು ಅವರು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ (9725) ಅವರಿಗಿಂತ ಐದು ಪಾಯಿಂಟ್ಸ್‌ ಮುಂದಿದ್ದಾರೆ.

ಸಾನಿಯಾ ಮತ್ತು ಸ್ಟ್ರೈಕೋವಾ ಮೂರು ಟೂರ್ನಿಗಳ ಪೈಕಿ ಎರಡರಲ್ಲಿ ಗೆದ್ದಿದ್ದಾರೆ.  ಇದು ಕೂಡ ಸಾನಿಯಾ ಅವರ ಅಗ್ರಪಟ್ಟ ಭದ್ರವಾಗಿರಲು ನೆರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT