ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ನಿರ್ದೇಶಕ ಮಂಡಳಿಗೆ ಶಿಫಾರಸು

ಸಂಕ್ಷಿಪ್ತ ಸುದ್ದಿ
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗಳಿಗೆ ಬ್ಯಾಂಕ್‌ ಮಂಡಳಿಯು 9  ಅಧಿಕಾರಿಗಳ ಹೆಸರುಗಳನ್ನು ಶಿಫಾರಸು ಮಾಡಿದೆ.

ಬ್ಯಾಂಕ್‌ಗಳಲ್ಲಿ 2016–17ನೆ ಸಾಲಿನಲ್ಲಿ  ಖಾಲಿಯಾಗುವ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗಳಿಗೆ ಈ ಅಧಿಕಾರಿಗಳ ಹೆಸರುಗಳನ್ನು ಸರ್ಕಾರ ಪರಿಗಣಿಸಬಹುದಾಗಿದೆ. ಬ್ಯಾಂಕ್‌ಗಳ ಉನ್ನತ ಮಟ್ಟದ ಹುದ್ದೆಗಳಿಗೆ ನೇಮಕಕ್ಕೆ ಅರ್ಹರನ್ನು ಶಿಫಾರಸು ಮಾಡಲು ಬ್ಯಾಂಕ್‌ ಮಂಡಳಿ ರಚಿಸಲಾಗಿದೆ.

ಇನ್ಫೊಸಿಸ್‌ ಪ್ರಶಸ್ತಿ
ನವದೆಹಲಿ (ಪಿಟಿಐ):
ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ಇನ್ಫೊಸಿಸ್‌,  ತನ್ನ ಮೊದಲ ‘ಇನ್ಫಿ ಮೇಕರ್‌ ಅವಾರ್ಡ್ಸ್‌’ ವಿಜೇತ 20 ಜನರ ಹೆಸರುಗಳನ್ನು ಪ್ರಕಟಿಸಿದೆ.

ಶಿಕ್ಷಣ, ಆರೋಗ್ಯ, ಇಂಧನ, ಸಂಗೀತ, ವಿನ್ಯಾಸ, ಕೃತಕ ಬುದ್ಧಿಮತ್ತೆ, ವಿದ್ಯುನ್ಮಾನ ಮತ್ತಿತರ ಕ್ಷೇತ್ರಗಳಿಂದ ಸಾಧಕರನ್ನು ಆಯ್ಕೆ ಮಾಡಲಾಗಿದೆ. ದಿನನಿತ್ಯದ ಸಮಸ್ಯೆಗಳಿಗೆ ಆಸಕ್ತಿದಾಯಕ ಮತ್ತು ಹೊಸ ಬಗೆಯ ಪರಿಹಾರ ಕಂಡು ಹಿಡಿದವರಿಗೆ ಈ ಪ್ರಶಸ್ತಿ ನೀಡಲಾಗುವುದು. ಇದು, ‘ಭಾರತದಲ್ಲಿಯೇ ತಯಾರಿಸಿ’ ಪರಿಕಲ್ಪನೆಗೆ ಉತ್ತೇಜನ ನೀಡುವ ಸಂಸ್ಥೆಯ ಬದ್ಧತೆಗೆ ಅನುಗುಣವಾಗಿದೆ ಎಂದು ಇನ್ಫೊಸಿಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಪೆಟ್ರೋಲ್‌ ಬಳಕೆ ಹೆಚ್ಚಳ ನಿರೀಕ್ಷೆ
ನವದೆಹಲಿ (ಪಿಟಿಐ):
2017–18ನೆ ಸಾಲಿನಲ್ಲಿ ಭಾರತದಲ್ಲಿನ ಪೆಟ್ರೋಲ್‌ ಬಳಕೆ ಪ್ರಮಾಣವು ಶೇ 6ರಷ್ಟು ಹೆಚ್ಚಳಗೊಳ್ಳಲಿದೆ ಎಂದು ಜಾಗತಿಕ ಮೌಲ್ಯಮಾಪನಾ ಸಂಸ್ಥೆ ಮೂಡಿಸ್‌ ಇನ್‌ವೆಸ್ಟರ್ಸ್‌ ಸರ್ವಿಸ್‌ ಹೇಳಿದೆ.

ಏಷ್ಯಾ ಪೆಸಿಫಿಕ್‌ನಲ್ಲಿ ಪ್ರತಿ ದಿನದ ಪೆಟ್ರೋಲ್‌ ಬಳಕೆ ಪ್ರಮಾಣವು 3.33 ಕೋಟಿ ಬ್ಯಾರೆಲ್‌ಗಳಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಏಷ್ಯಾದಲ್ಲಿ  ಚೀನಾ ಮತ್ತು ಭಾರತ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಾಗಿವೆ ಎಂದೂ ಮೂಡಿಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT