ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್‌ಗೆ ಕಾಂಗ್ರೆಸ್‌ ಪೈಪೋಟಿ

Last Updated 26 ಸೆಪ್ಟೆಂಬರ್ 2016, 19:49 IST
ಅಕ್ಷರ ಗಾತ್ರ

ಬೆಂಗಳೂರು: ಮೇಯರ್‌– ಉಪಮೇಯರ್‌ ಚುನಾವಣೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್ ಮಧ್ಯೆ ಮೈತ್ರಿ ಏರ್ಪಟ್ಟಿದ್ದರೂ, ಮೇಯರ್‌ ಗಾದಿಗೆ ಕಾಂಗ್ರೆಸ್‌ನಲ್ಲಿ ತುರುಸಿನ ಪೈಪೋಟಿ ನಡೆದಿದೆ.

ಮೇಯರ್‌ ಹುದ್ದೆ ಕಾಂಗ್ರೆಸ್‌ಗೂ, ಉಪಮೇಯರ್‌ ಹುದ್ದೆ ಜೆಡಿಎಸ್‌ಗೆ ಎಂದು ಎರಡೂ ಪಕ್ಷಗಳ ನಡುವೆ ಒಪ್ಪಂದ ಆಗಿದೆ.
ಮೇಯರ್‌ ಗಾದಿಗೆ ಪ್ರಕಾಶ್‌ ನಗರ ಸದಸ್ಯೆ ಜಿ.ಪದ್ಮಾವತಿ ಮತ್ತು  ಶಾಂತಿ ನಗರ  ಸದಸ್ಯೆ ಪಿ.ಸೌಮ್ಯ ಮಧ್ಯೆ ತೀವ್ರ ಸ್ಪರ್ಧೆ ನಡೆದಿದೆ.

ಉಪಮೇಯರ್‌ ಹುದ್ದೆಗೆ ಜೆಡಿಎಸ್‌ನ ರಾಧಾಕೃಷ್ಣ ವಾರ್ಡ್‌ನ ಆನಂದ್‌ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಚೆನ್ನೈಗೆ ತೆರಳಿರುವ ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮಂಗಳವಾರ ನಗರಕ್ಕೆ  ವಾಪಸ್‌ ಆಗಲಿದ್ದಾರೆ.  ಉಪಮೇಯರ್‌ ಹುದ್ದೆಗೆ ಯಾರನ್ನು ಕಣಕ್ಕೆ ಇಳಿಸಬೇಕು ಎಂದು ಬಿಬಿಎಂಪಿಯ ಜೆಡಿಎಸ್‌ ಸದಸ್ಯರ ಸಭೆ ನಡೆಸಿದ ಬಳಿಕ ಕುಮಾರಸ್ವಾಮಿ ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಮೂಲಗಳ ಪ್ರಕಾರ, ಪದ್ಮಾವತಿ  ಬೆಂಬಲಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ರಾಮಲಿಂಗಾ ರೆಡ್ಡಿ ಇದ್ದರೆ, ಸೌಮ್ಯ ಅವರಿಗೆ  ಸಚಿವ ಕೆ.ಜೆ.ಜಾರ್ಜ್‌ ಮತ್ತು ಶಾಂತಿನಗರ ಶಾಸಕ ಎನ್‌.ಎ.ಹ್ಯಾರಿಸ್‌ ಅವರ ಬೆಂಬಲವಿದೆ. ಈ ಬಾರಿ ಮೇಯರ್‌ ಹುದ್ದೆ ಹಿಂದುಳಿದ ವರ್ಗ (ಬಿ) ಮಹಿಳೆಯರಿಗೆ ಮತ್ತು ಉಪಮೇಯರ್‌ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಿದೆ.

ಮಂಗಳವಾರ ಅಭ್ಯರ್ಥಿ ಅಂತಿಮ: ‘ಬಿಬಿಎಂಪಿಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಯಥಾಸ್ಥಿತಿ ಮುಂದುವರಿಯಲಿದ್ದು, ಮಂಗಳವಾರ ಮೇಯರ್‌  ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜೆಡಿಎಸ್ ನಾಯಕ ಕುಮಾರಸ್ವಾಮಿ  ಜೊತೆ ಮಾತುಕತೆ ನಡೆಸಲಾಗಿದೆ. ಐದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ನವರು ಕೇಳಿದ್ದಾರೆ. ಇದು ಕೊಡು ಕೊಳ್ಳುವ ನೀತಿ’ ಎಂದು ಅವರು ಸಮರ್ಥಿಸಿಕೊಂಡರು. ‘ಸ್ಥಳೀಯ ನಿವಾಸಿಗಳಲ್ಲದವರನ್ನು ಮೇಯರ್‌ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬಿಜೆಪಿ ದೂರುತ್ತಿದೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ‘ಆಸ್ಕರ್‌ ಫರ್ನಾಂಡಿಸ್‌, ಅಲ್ಲಂ ವೀರಭದ್ರಪ್ಪ 40 ವರ್ಷದಿಂದ ಬೆಂಗಳೂರಿನಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT