ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎಸ್‌: ಸಲಹಾ ಶುಲ್ಕ

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಸದಸ್ಯರು ಇನ್ನು ಮುಂದೆ  ತಾವು ಪಡೆಯುವ ಸೌಲಭ್ಯಕ್ಕೆ ಪ್ರತಿಯಾಗಿ ಪಾವತಿಸುವ ಶುಲ್ಕದ ಜತೆಗೆ ಹೆಚ್ಚುವರಿವಾಗಿ ಶೇ 0.2ರಷ್ಟು ಸಲಹಾ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.

ಸದಸ್ಯರಿಗೆ ನೀಡುವ ಸಲಹೆಗಳಿಗೆ ವರ್ಷಕ್ಕೆ ಕನಿಷ್ಠ ₹100ರಿಂದ  ₹1000ವರೆಗೂ  ಶುಲ್ಕ ಸಂಗ್ರಹಿಸಲು ಭವಿಷ್ಯನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಸುತ್ತೋಲೆ ಹೊರಡಿಸಿದೆ.

ಹಣಕಾಸು ವಹಿವಾಟುಗಳ ಬಗ್ಗೆ ಸಲಹೆ ಪಡೆಯಲು ಒಪ್ಪಿಗೆ ಸೂಚಿಸಿ ಪಿಎಫ್‌ಆರ್‌ಡಿಎ ಜತೆ ಕರಾರು ಪತ್ರಕ್ಕೆ ಸಹಿ ಹಾಕುವ ಸದಸ್ಯರಿಗೆ ಮಾತ್ರ ಈ ಶುಲ್ಕ ಅನ್ವಯವಾಗಲಿದೆ.ಇದರೊಂದಿಗೆ ಪಿಂಚಣಿ ಹಣ ಹೂಡಿಕೆ ಮತ್ತು ಲಾಭದಾಯಕ ನಿರ್ವಹಣೆ ಕುರಿತು ಸಲಹೆ ನೀಡಲು ಪಿಎಫ್‌ಆರ್‌ಡಿಎ ಸಲಹೆಗಾರರ ಸಂಖ್ಯೆಯನ್ನೂ ಹೆಚ್ಚಿಸಿದೆ.

ಸದ್ಯದ ಪಿಎಫ್‌ಆರ್‌ಡಿಎ ನಿಯಮಾವಳಿ ಅನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆ ಸದಸ್ಯರು ವಾರ್ಷಿಕ ಕನಿಷ್ಠ ₹120 ಶುಲ್ಕ ಪಾವತಿಸುತ್ತಾರೆ. ಪ್ರತಿ  ಹಣಕಾಸು ವಹಿವಾಟಿಗೆ ₹20ರಂತೆ ವಾರ್ಷಿಕ ಗರಿಷ್ಠ ₹100 ಶುಲ್ಕ ಸಂಗ್ರಹಿಸಲಾಗುತ್ತಿದೆ. ಇದರೊಂದಿಗೆ ಇನ್ನು ಮುಂದೆ ಶೇ 0.2ರಷ್ಟು ಹೆಚ್ಚುವರಿ ಸಲಹಾ ಶುಲ್ಕ ಪಾವತಿಸಬೇಕಾಗುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT