ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ತಿಂಗಳ ಲೆಕ್ಕಪತ್ರ ಸಲ್ಲಿಕೆ ಕಡ್ಡಾಯ

Last Updated 27 ಸೆಪ್ಟೆಂಬರ್ 2016, 19:52 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಲೆಕ್ಕಪತ್ರ ಸಲ್ಲಿಕೆ ಮತ್ತು ಮರು ಪಾವತಿಗೆ ಸಂಬಂಧಿಸಿದಂತೆ ತೆರಿಗೆ ಸಚಿವಾಲಯವು ಇನ್ನೂ ಎರಡು ಕರಡು ನಿಯಮಗಳನ್ನು ಪ್ರಕಟಿಸಿದೆ.

ಈ ಹೊಸ  ನಿಯಮಗಳೂ ಸೇರಿದಂತೆ ಇದುವರೆಗೆ ಪ್ರಕಟಿಸಲಾಗಿರುವ  ಕರಡು ನಿಯಮಗಳಿಗೆ ಅಭಿಪ್ರಾಯ ಮತ್ತು ಆಕ್ಷೇಪ ದಾಖಲಿಸಲು ನಾಳೆಯವರೆಗೆ ಅವಕಾಶ ಕಲ್ಪಿಸಲಾಗಿದೆ.  ಇದೇ 30ರಂದು ಸಭೆ ಸೇರಲಿರುವ ಜಿಎಸ್‌ಟಿ ಮಂಡಳಿಯ ಎರಡನೆ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು.

ಮರುಪಾವತಿ ನಿಯಮಕ್ಕೆ ಸಂಬಂಧಿಸಿದಂತೆ, ಪ್ರತಿಯೊಬ್ಬ ನೋಂದಾಯಿತ ತೆರಿಗೆದಾರನು, ತಿಂಗಳ ಲೆಕ್ಕಪತ್ರವನ್ನು ನಿರ್ದಿಷ್ಟ ಅರ್ಜಿ ನಮೂನೆಯಲ್ಲಿ (ಜಿಎಸ್‌ಟಿಆರ್‌–3) ಸಲ್ಲಿಸಬೇಕು. ಹಣಕಾಸು ವರ್ಷವೊಂದರಲ್ಲಿ ತೆರಿಗೆಗೆ ಒಳಪಡುವ ಪ್ರತಿಯೊಬ್ಬ ವರ್ತಕನ ವಾರ್ಷಿಕ ವಹಿವಾಟು ₹ 1 ಕೋಟಿ ಮೀರಿದ್ದರೆ ವರ್ಷಕ್ಕೊಮ್ಮೆ ಲೆಕ್ಕಪತ್ರ ಪರಿಶೋಧನೆಯ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT