ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವಿಲಿಯರ್ಸ್‌ಗೆ ಶಸ್ತ್ರಚಿಕಿತ್ಸೆ

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಿಲಿಯರ್ಸ್‌ ಅವರು ಎಡಗೈ ಮಣಿಕಟ್ಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು ಮುಂದಿನ ಎರಡು ತಿಂಗಳ ಕಾಲ ಕ್ರಿಕೆಟ್‌ ಚಟುವಟಿಕೆಗಳಿಂದ ದೂರ ಉಳಿಯಲಿದ್ದಾರೆ.

‘ಡಿವಿಲಿಯರ್ಸ್‌ ಅವರು ಫಿಟ್‌ನೆಸ್‌ ಸಾಬೀತು ಮಾಡಲು ವಿಫಲರಾಗಿದ್ದಾರೆ. ಅಭ್ಯಾಸದ ವೇಳೆ ಕೆಲ ಎಸೆತಗಳನ್ನು ಬಾರಿಸುವಾಗ ಅವರ ಎಡಗೈ ಮಣಿಕಟ್ಟಿನಲ್ಲಿ ನೋವು ಉಲ್ಬಣಿಸಿದೆ. ಈ ಸಂಬಂಧ ತಂಡದ ಫಿಸಿಯೊ ನಮಗೆ ಮಾಹಿತಿ ನೀಡಿದ್ದಾರೆ. ಎಬಿ ಮುಂದಿನ ವಾರ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಬಳಿಕ ಕನಿಷ್ಠ ಎರಡು ತಿಂಗಳು ಅವರು ವಿಶ್ರಾಂತಿ ಪಡೆಯಬೇಕಿದೆ’ ಎಂದು ತಂಡದ ಅಧಿಕಾರಿ ಮಹಮದ್‌ ಮೂಸಾಜೀ ಮಾಹಿತಿ ನೀಡಿದ್ದಾರೆ.

‘ಡಿವಿಲಿಯರ್ಸ್‌ ಅನುಭವಿ ಆಟಗಾರ. ಅವರು ಏಕದಿನ ಮಾದರಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದರು. ಅವರು ಗಾಯಗೊಂಡಿರುವುದಿಂದ ತಂಡಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ. ಡಿವಿಲಿಯರ್ಸ್‌ ಅನುಪಸ್ಥಿತಿಯಲ್ಲಿ ಹೊಸಬರಿಗೆ ಅವಕಾಶ ನೀಡುತ್ತೇವೆ.

ಡಿಸೆಂಬರ್‌ನಲ್ಲಿ ನಡೆಯುವ ಶ್ರೀಲಂಕಾ ವಿರುದ್ಧದ ಸರಣಿ ವೇಳೆಗೆ ಅವರು ಗುಣ ಮುಖರಾಗುವ ಭರವಸೆ ಇದೆ’ ಎಂದಿದ್ದಾರೆ. ಡಿವಿಲಿಯರ್ಸ್‌ ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT