ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರವಾನಗಿ ತೊಡಕು ನಿವಾರಿಸಿ

Last Updated 28 ಸೆಪ್ಟೆಂಬರ್ 2016, 8:56 IST
ಅಕ್ಷರ ಗಾತ್ರ

ಮದ್ದೂರು: ಪಟ್ಟಣದ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಇರುವ ತೊಡುಕಗಳ ನಿವಾರಣೆಗೆ ಮುಂದಾಗಬೇಕೆಂದು ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿ ಘಟನೆ ನಡೆಯಿತು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಮಂಜುಳಾ ಮೃತ್ಯುಂಜಯ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಳ್ಳುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸದಸ್ಯರು, ಪಟ್ಟಣದಲ್ಲಿ ಬಿಎಂಐಸಿ ಅನುಮತಿ ಪಡೆಯದೇ ಯಾವುದೇ ಒಂದು ನಿರ್ಮಾಣ ಕಾಮಗಾರಿ ಮಾಡಲಾಗುತ್ತಿಲ್ಲ. ಪಟ್ಟಣದ ಜನರು ಪ್ರತಿಯೊಂದಕ್ಕೂ ಅನುಮತಿಗಾಗಿ ಬೆಂಗಳೂರಿಗೆ ಎಡತಾಕಬೇಕಾದ ಪರಿಸ್ಥಿತಿ ಒದಗಿದೆ. ಈ ಕೂಡಲೇ ಈ ಕುರಿತು ಒಮ್ಮತದ ನಿರ್ಣಯ ಕೈಗೊಂಡು ಪುರಸಭೆಯೇ ಪರವಾನಗಿ ನೀಡಲು ಅಗತ್ಯ ಕ್ರಮ ವಹಿಸಬೇಕು. ಇದರಿಂದ ಪುರಸಭೆಗೆ ಆದಾಯವೂ ಬರಲಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಕರಿಬಸವಯ್ಯ, ಈ ಸಂಬಂಧ ಇಲ್ಲಿನ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲಿ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.

ಪುರಸಭೆ ವ್ಯಾಪ್ತಿಯ ಕೆಲ ಅಂಗಡಿ ಮಳಿಗೆಗಳು ಖಾಲಿ ಇದ್ದು ಅವುಗಳಿಗೆ ವಿದ್ಯುತ್ ಸಂಪರ್ಕ ಮತ್ತು ಚುರುಕೆ ಹಾಕಿಸಿ ಮಳಿಗೆಗಳನ್ನು ಬಾಡಿಗೆಗೆ ವಿತರಿಸಲು ಅಗತ್ಯ ಕ್ರಮವಹಿಸುವ ಜತೆಗೆ ಪುರಸಭೆಯ ಆದಾಯ ಹೆಚ್ಚಿಸುವಂತೆ  ಕೆಲವು ಸದಸ್ಯರು ಸಲಹೆ ನೀಡಿದರು.

ಸದಸ್ಯ ಶೇಖರ್ ಮಾತನಾಡಿ ಪಟ್ಟಣದೆಲ್ಲೆಡೆ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು, ನಿಯಂತ್ರಣ ಬೇಕಿದೆ. ಅಲ್ಲದೇ ಬೀದಿ ದೀಪ ನಿರ್ವಹಣೆ ಕುರಿತು ಪುರಸಭೆ ಗಮನಹರಿಸಬೇಕೆಂದು ಸಭೆಯಲ್ಲಿ ಆಗ್ರಹಿಸಿದರು.

ಒಳಚರಂಡಿ ಕಾಮಗಾರಿ ವೇಳೆ ಉಂಟಾದ ಗುಂಡಿ ಮುಚ್ಚದಿರುವುದೂ ಸೇರಿದಂತೆ ವಿವಿಧ ವೈಫಲ್ಯಗಳನ್ನು ಸದಸ್ಯ ಮನ್ಸೂರ್‌ಖಾನ್‌ ಸಭೆಯಲ್ಲಿ  ಖಂಡಿಸಿದರು.
ಸಿದ್ಧಾರ್ಥ ನಗರದ ಪೌರಕಾರ್ಮಿಕರ ವಸತಿಗೃಹಗಳು ಶಿಥಿಲಗೊಂಡಿವೆ. ಮಳೆಗಾಲದಲ್ಲಿ ಅವು ಕುಸಿದು ಬೀಳುವ ಆತಂಕ ಎದುರಾಗಿವೆ. ಶಿಥಿಲ ಕಟ್ಟಡಗಳನ್ನು ಕೆಡವಿ ನೂತನ ವಸತಿ ನಿರ್ಮಾಣ ಮಾಡಲು ಸಭೆಯ ವೇಳೆ ತೀರ್ಮಾನಿಸಲಾಯಿತು.

2016-17ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ಅರ್ಹ ಫಲಾನುಭವಿ ಗಳನ್ನು ಆಯ್ಕೆ ಮಾಡಲು ಸಭೆ ಅಂಗೀಕಾರ ನೀಡಿತು.

ವಾಣಿಜ್ಯ ವ್ಯವಹಾರಗಳಿಗೆ ಆನ್‌ಲೈನ್‌ ಮೂಲಕ ಪರವಾನಗಿ ನೀಡುವುದನ್ನು ವಿರೋಧಿಸಿದ ಸದಸ್ಯರು ಹಿಂದಿನ ಪದ್ಧತಿ ಅನುಸರಿಸುವಂತೆ ಹಾಗೂ ಇ–ಸ್ವತ್ತು ಗೊಂದಲಗಳನ್ನು ನಿವಾರಿಸುವಂತೆ ಕೆಲವು ಸದಸ್ಯರು ಒತ್ತಾಯಿಸಿದರು.

ಉಪಾಧ್ಯಕ್ಷೆ ನಾಗರತ್ನಾ, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಸದಸ್ಯರಾದ ಎನ್.ರಘು, ಮಹೇಶ್, ಅಸ್ಲಂಖಾನ್, ಅಜಯ್ ಪಿ.ಗೌಡ, ಶಿವಣ್ಣ, ಮರಿದೇವರು, ಪ್ರಶಾಂತ್‌, ವಿಜಯಕುಮಾರ್, ಲತಾ, ರಾಧಾ, ಪಾರ್ವತಮ್ಮ, ರತ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT