ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳದ ರಾಶಿ ಗುಡijಕೆħ ಚಾರಣಿಗರ ದಂಡು

ಮಧುಗಿರಿ ತಾಲ್ಲೂಕು ಪ್ರವಾಸೋದ್ಯಮಕ್ಕೆ ಮತ್ತೊಂದು ಮುಕುಟ: ಕಣ್ಮನ ಸೆಳೆವ ಪ್ರಕೃತಿ ಸೊಬಗು
Last Updated 28 ಸೆಪ್ಟೆಂಬರ್ 2016, 10:57 IST
ಅಕ್ಷರ ಗಾತ್ರ

ಮಧುಗಿರಿ: ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಬಳಿಯಿರುವ ಜೋಳದ ರಾಶಿ ಗುಡ್ಡ ಪ್ರವಾಸಿ ತಾಣವಾಗುತ್ತಿದೆ. ತಾಲ್ಲೂಕು ಸೇರಿದಂತೆ ವಿವಿಧ ಜಿಲ್ಲೆಯ ಜನರೂ ಗುಡ್ಡಕ್ಕೆ ಚಾರಣ ನಡೆಸುತ್ತಿದ್ದು ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಸ್ವಲ್ಪ ಮಳೆಯಾಗಿರುವ ಪರಿಣಾಮ ಗುಡ್ಡದ ಸುತ್ತಲೂ ಹಸಿರು ಮೈದಳೆದಿದೆ. ಗುಡ್ಡಕ್ಕೆ ಚಾರಣ ಕೈಗೊಂಡವರು ಚಿತ್ರಗಳನ್ನು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಚಿತ್ರಗಳಲ್ಲಿ ಕಾಣುವ ಸೊಬಗಿನ ನೋಟವನ್ನು ಕಂಡು ಮತ್ತಷ್ಟು ಮಂದಿ ಇಲ್ಲಿಗೆ ಪ್ರವಾಸಕ್ಕೆ ಬರುತ್ತಿದ್ದಾರೆ.

ರಜಾ ದಿನಗಳಲ್ಲಿ ಜೋಳದ ರಾಶಿ ಗುಡ್ಡದಲ್ಲಿ ಹೆಚ್ಚು ಜನರು ಕಾಣುವರು. ಕೆಳ ಭಾಗದಿಂದ ಗುಡ್ಡ ನೋಡಿದರೆ ಜೋಳದ ರಾಶಿಯಂತೆ ಕಾಣುತ್ತದೆ. ಗುಡ್ಡದ ಯಾವುದೇ ಭಾಗಕ್ಕೆ ಕಣ್ಣು ಹಾಯಿಸಿದರೂ ಅಚ್ಚ ಹಸಿರು. ಮಳೆಗಾಲದಲ್ಲಿ ಗುಡ್ಡ ಮತ್ತಷ್ಟು ಸೊಬಗನ್ನು ತನ್ನಲ್ಲಿ ತುಂಬಿಕೊಳ್ಳುತ್ತದೆ. ತಾಲ್ಲೂಕಿನಲ್ಲಿಯೇ ಇದು ಸುಂದರವಾದ ತಾಣ ಎಂದು ಪ್ರಖ್ಯಾತಿ ಪಡೆಯುತ್ತಿದೆ.

ಒತ್ತುವರಿ: ಗುಡ್ಡದ ಸುತ್ತ ಶೇ 35 ರಷ್ಟು ಜಮೀನು ಒತ್ತುವರಿಯಾಗಿದ್ದು ಗುಡ್ಡದ ಸೌಂದರ್ಯ ನಾಶವಾಗುತ್ತಿದೆ. ರಸ್ತೆಯ ಅಭಿವೃದ್ಧಿಗೆ ಜೋಳದ ರಾಶಿಯ ಗುಡ್ಡದ ಮಣ್ಣನ್ನು ಜೆಸಿಬಿಯಿಂದ ತೆಗೆದಿರುವುದರಿಂದ ಸ್ವರೂಪವೇ ಬದಲಾಗಿದೆ.

ಒತ್ತುವರಿ ಗುಡ್ಡಕ್ಕೆ ಕುತ್ತು ತಂದಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಬೇಕು ಎಂದು ಪ್ರವಾಸಿಗರು ಹಾಗೂ ಸಾರ್ವಜನಿಕರು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT