, ಬಿಗ್ ಬಾಸ್-4ಗೆ ಪ್ರವೇಶ ಪಡೆಯಲಿದ್ದಾರೆ 'ಫೇಸ್‍ಬುಕ್ ಸೆಲೆಬ್ರಿಟಿ'ಗಳು! | ಪ್ರಜಾವಾಣಿ
ಅತಿಥಿಗಳ್ಯಾರು?

ಬಿಗ್ ಬಾಸ್-4ಗೆ ಪ್ರವೇಶ ಪಡೆಯಲಿದ್ದಾರೆ 'ಫೇಸ್‍ಬುಕ್ ಸೆಲೆಬ್ರಿಟಿ'ಗಳು!

ಈ ಆವೃತ್ತಿಗೂ ಕಿಚ್ಚ ಸುದೀಪ್ ನಿರೂಪಕರಾಗಿದ್ದು, ವಿವಿಧ ಕ್ಷೇತ್ರದಲ್ಲಿ 'ಹೆಸರುಗಳಿಸಿರುವ' 'ವಿವಾದ ಮೂಲಕ ಸುದ್ದಿಯಾಗಿದ್ದ' ವ್ಯಕ್ತಿಗಳನ್ನೇ ಬಿಗ್ ಬಾಸ್ ಮನೆಗೆ ಕರೆತರಲಾಗುವುದು.

ಬಿಗ್ ಬಾಸ್-4ಗೆ ಪ್ರವೇಶ ಪಡೆಯಲಿದ್ದಾರೆ 'ಫೇಸ್‍ಬುಕ್ ಸೆಲೆಬ್ರಿಟಿ'ಗಳು!

ಬೆಂಗಳೂರು: ಅಕ್ಟೋಬರ್ 9ರಂದು ಕಲರ್ಸ್ ವಾಹಿನಿಯಲ್ಲಿ ಆರಂಭವಾಗಲಿರುವ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 4ಗೆ ಭರದ ಸಿದ್ಧತೆ ನಡೆದು ಬರುತ್ತಿದೆ.

ಈ ಆವೃತ್ತಿಗೂ ಕಿಚ್ಚ ಸುದೀಪ್ ನಿರೂಪಕರಾಗಿದ್ದು, ವಿವಿಧ ಕ್ಷೇತ್ರದಲ್ಲಿ 'ಹೆಸರುಗಳಿಸಿರುವ' 'ವಿವಾದ ಮೂಲಕ ಸುದ್ದಿಯಾಗಿದ್ದ' ವ್ಯಕ್ತಿಗಳನ್ನೇ ಬಿಗ್ ಬಾಸ್ ಮನೆಗೆ ಕರೆತರಲಾಗುವುದು.

ಈಗಾಗಲೇ ಸುಧಾರಾಣಿ, ವನಿತಾ ವಾಸು, ನವೀನ್ ಕೃಷ್ಣಾ ಮೊದಲಾದ ಸಿನಿಮಾ ನಟರ ಹೆಸರು ಸ್ಪರ್ಧಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇವರ ಜತೆಗೇ ಚಾರುಲತಾ ಮತ್ತು ರೂಪಿಕಾ ಅವರನ್ನೂ ಬಿಗ್ ಬಾಸ್ ಮನೆಗೆ ಕರೆತರುವ ಕಸರತ್ತುಗಳು  ನಡೆಯುತ್ತಿವೆ.

ಟಿವಿ ನಿರೂಪಕಿಯಾಗಿದ್ದ ಶೀತಲ್ ಶೆಟ್ಟಿ, ಆರ್ ಜೆ ರ‍್ಯಾಪಿಡ್ ರಶ್ಮಿ, ಸ್ಮಿತಾ ದೀಕ್ಷಿತ್, ರಕ್ಷಿತಾ ಪ್ರೇಮ್  ಮೊದಲಾದವರ ಹೆಸರು ಕೂಡಾ ಈಗ ಕೇಳಿ ಬರುತ್ತಿದೆ.

ವಿಶೇಷವೆಂದರೆ ಈ ಬಾರಿ ಫೇಸ್‍ಬುಕ್ ಸೆಲೆಬ್ರಿಟಿಗಳಿಗೂ ಅವಕಾಶ ಕಲ್ಪಿಸಲು ಬಿಗ್ ಬಾಸ್ ತಂಡ ಕಾರ್ಯತಂತ್ರ ರೂಪಿಸಿದೆ.

ಬಿಗ್ ಬಾಸ್‍ನಲ್ಲಿ ವಿವಾದ ಮೂಲಕ ಸುದ್ದಿಯಾದ ಸ್ಟಾರ್ ಗಳಿಗೆ ವಿಶೇಷ ಸ್ಥಾನವಿದೆ. ಅಂಥವರ ಪಟ್ಟಿಯಲ್ಲಿ ಕೊಡ್ಲಿಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ಹೆಸರೂ ಕೂಡಾ ಕೇಳಿಬಂದಿತ್ತು .

ಇದೀಗ ಸಾಮಾಜಿಕ ತಾಣಗಳಲ್ಲಿ ಫೇಮಸ್ ಆಗಿರುವ ಕಿರಿಕ್ ಕೀರ್ತಿ ಕೂಡಾ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ.

Comments