ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಈಗ ಬಯಲು ಬಹಿರ್ದೆಸೆ ಮುಕ್ತ ನಗರ

ಪ್ರಮಾಣಪತ್ರ ಹಸ್ತಾಂತರಿಸಿದ ಕ್ಯುಸಿಐ
Last Updated 29 ಸೆಪ್ಟೆಂಬರ್ 2016, 8:08 IST
ಅಕ್ಷರ ಗಾತ್ರ

ಮಂಗಳೂರು: ‘ಬಯಲು ಬಹಿರ್ದೆಸೆ ಮುಕ್ತ ನಗರ’ ಎಂಬ ಕೀರ್ತಿಗೆ ಈಗ ಮಂಗಳೂರು ಪಾತ್ರವಾಗಿದೆ. ಕೇಂದ್ರ ಸರ್ಕಾರದ ಭಾರತೀಯ ಗುಣಮಟ್ಟ ಮಂ ಡಳಿ (ಕ್ಯುಸಿಐ) ಮಂಗಳೂರು ಮಹಾ ನಗರ ಪಾಲಿಕೆಗೆ ಬುಧವಾರ ಈ ಸಂ ಬಂಧ ಪ್ರಮಾಣಪತ್ರ ಪ್ರದಾನ ಮಾಡಿತು.

ಪಾಲಿಕೆಯ ಮಂಗಳಾ ಸಭಾಂಗಣ ದಲ್ಲಿ ನಡೆದ ಸಮಾರಂಭದಲ್ಲಿ ಕ್ಯುಸಿಐ ಯೋಜನಾ ನಿರ್ದೇಶಕ ಅಭಿನವ್‌ ಯಾದವ್‌ ಅವರು ಪಾಲಿಕೆ ಮೇಯರ್ ಹರಿನಾಥ್ ಅವರಿಗೆ ‘ಬಯಲು ಬಹಿ ರ್ದೆಸೆ ಮುಕ್ತ ನಗರ’ ಪ್ರಮಾಣಪತ್ರ ಪ್ರದಾ ನ ಮಾಡಿದರು. ಈ ಪ್ರಮಾಣಪತ್ರದ ಅವಧಿ ಆರು ತಿಂಗಳು. ಪುನಃ ಕ್ಯುಸಿಐ ಸಮೀಕ್ಷೆ ನಡೆಸಲಿದ್ದು, ಆಗ ದೊರೆಯುವ ಮಾಹಿತಿಗಳ ಆಧಾರದಲ್ಲಿ ಪ್ರಮಾಣಪತ್ರ ವನ್ನು ಮುಂದುವರಿಸುವ ಕುರಿತು ನಿರ್ಧಾರಕ್ಕೆ ಬರಲಾಗುತ್ತದೆ.

ಬಯಲು ಶೌಚ ಮುಕ್ತ ನಗರಗಳನ್ನು ಗುರುತಿಸಲು ಕ್ಯುಸಿಐ ಮೂಲಕ ದೇಶದ 75 ನಗರಗಳಲ್ಲಿ ಸಮೀಕ್ಷೆ ನಡೆಸಿತ್ತು. ಮಂಗಳೂರಿನ ಪ್ರಮುಖ ಜನವಸತಿ ಪ್ರದೇಶಗಳು, ರೈಲು ಮತ್ತು ಬಸ್‌ ನಿಲ್ದಾ ಣಗಳು, ಕೈಗಾರಿಕಾ ಪ್ರದೇಶ, ಶಾಲಾ, ಕಾಲೇಜು, ಮಾರುಕಟ್ಟೆ ಮತ್ತಿತರ ಜನ ನಿಬಿಡ ಪ್ರದೇಶಗಳಿಗೆ ಭೇಟಿ ನೀಡಿದ್ದ ಕ್ಯುಸಿಐ ತಂಡ, ಬಯಲು ಮಲ ವಿಸರ್ಜನೆ ಕುರಿತು ತಪಾಸಣೆ ನಡೆಸಿತ್ತು. ಪಾಲಿಕೆ ಆಡಳಿತ, ಸರ್ಕಾರೇತರ ಸಂಸ್ಥೆಗಳು, ಸ್ವಸ ಹಾಯ ಸಂಘಗಳು ಮತ್ತು ಸಾರ್ವಜನಿ ಕರಿಂದಲೂ ಮಾಹಿತಿ ಸಂಗ್ರಹಿಸಿತ್ತು.

ಪ್ರಮಾಣಪತ್ರ ಪ್ರದಾನ ಮಾಡಿ ಮಾತನಾಡಿದ ಅಭಿನವ್ ಯಾದವ್, ‘ನಾವು ಸಮೀಕ್ಷೆಯ ಭಾಗವಾಗಿ ಮಹಾ ನಗರ ಪಾಲಿಕೆ ಮೇಯರ್‌ ಮಾಡಿರುವ ಘೋಷಣೆ, ಸಾರ್ವಜನಿಕರ ಘೋಷಣೆ ಗಳನ್ನು ಪರಿಶೀಲಿಸಲಾಗಿದೆ. ಬಯಲು ಮಲವಿಸರ್ಜನೆ ಹೆಚ್ಚಿನ ಪ್ರಮಾಣದಲ್ಲಿ ನಡೆಯಬಹುದಾದ ಸ್ಥಳಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. ಆ ಬಳಿ ಕವೇ ಮಂಗಳೂರು ಬಯಲು ಮಲ ವಿಸರ್ಜನೆಯಿಂದ ಮುಕ್ತವಾಗಿದೆ ಎಂಬ ನಿರ್ಧಾರಕ್ಕೆ ಬರಲಾಗಿದೆ’ ಎಂದರು.

ಜನರಿಗೆ ಅಭಿನಂದನೆ: ಪ್ರಮಾಣ ಪತ್ರ ಸ್ವೀಕರಿಸಿ ಪ್ರತಿಕ್ರಿಯಿಸಿದ ಮೇಯರ್, ‘ಈ ಪ್ರಮಾಣಪತ್ರ ಪಡೆದಿರುವುದಕ್ಕೆ ನಗರದ ಜನತೆಗೆ ಅಭಿನಂದನೆ ಹೇಳು ತ್ತೇನೆ. ದೇಶದಲ್ಲಿ ಮಲ ಹೊರುವ ಪದ್ಧತಿ ನಿಷೇಧವಾಗಬೇಕು ಎಂದು ಮಾಜಿ ಸಚಿವ ಬಸವಲಿಂಗಪ್ಪ ಅವರು ಹೋರಾಟ ಆರಂಭಿಸಿದ್ದರು. ಮಂಗ ಳೂರು ನಗರಸಭೆಯ ಅಧ್ಯಕ್ಷರಾಗಿದ್ದ ಬ್ಲೇಸಿಯಸ್ ಡಿಸೋಜ ಅವರು ನಗರ ದಲ್ಲಿ ಅದನ್ನು ಮೊದಲ ಬಾರಿಗೆ ಜಾರಿಗೆ ತಂದಿದ್ದರು. ಶೌಚಾಲಯಗಳ ನಿರ್ಮಾ ಣದ ಮೂಲಕ ಈಗ ಬಯಲು ಮಲ ವಿಸರ್ಜನೆಯಿಂದ ಮುಕ್ತ ನಗರವಾಗು ತ್ತಿರುವುದು ಮತ್ತೊಂದು ದೊಡ್ಡ ಸಾಧ ನೆ’ ಎಂದು ಸಂತೋಷ ವ್ಯಕ್ತಪಡಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಹಿಂದೆ ನಿರ್ಮಲ ಗ್ರಾಮ ಯೋಜನೆ ಜಾರಿಗೆ ಬಂದಾಗ ದಕ್ಷಿಣ ಕನ್ನಡ ಜಿಲ್ಲೆಯು ಅದರ ಅನುಷ್ಠಾನದಲ್ಲಿ ಮೊದಲ ಸ್ಥಾನ ಗಳಿಸಿತ್ತು. ಈಗ ಬಯಲು ಬಹಿರ್ದೆಸೆ ಮುಕ್ತ ನಗರ ಎಂಬ ಕೀರ್ತಿಗೆ ಮಂಗಳೂರು ಪಾತ್ರವಾಗುತ್ತಿದೆ. ಜನರು ಬದ್ಧತೆ ತೋರಿಸಿದರೆ ಮಾತ್ರ ಸ್ವಚ್ಛ ನಗರದ ಗರಿ ಉಳಿಯುತ್ತದೆ. ಮಂಗಳೂ ರನ್ನು ದೇಶದ ಅತ್ಯಂತ ಸ್ವಚ್ಛ ನಗರ ವನ್ನಾಗಿ ಮಾಡಲು ಎಲ್ಲಾ ಜನರು ಪಣ ತೊಡಬೇಕು ಎಂದರು.

ವಿಧಾನ ಪರಿಷತ್‌ನ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ‘ಹಿಂದಿನ ದಿನಗಳಲ್ಲಿ ನಗರ ಪ್ರದೇಶದ ಬಡವರು ಮತ್ತು ಗುಡ್ಡಗಾಡು ಪ್ರದೇಶದ ಜನರು ಶೌಚಾಲಯ ಕಟ್ಟಿಸಿ ಕೊಳ್ಳುವುದು ಕಷ್ಟವಾಗಿತ್ತು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾ ಯಧನ ದೊರೆಯುತ್ತಿರುವುದರಿಂದ ಬಹುತೇಕ ಕುಟುಂಬಗಳು ಶೌಚಾಲಯ ಹೊಂದಿವೆ. ಈ ಕಾರಣಕ್ಕಾಗಿಯೇ ಬಯ ಲು ಮಲ ವಿಸರ್ಜನೆಯಿಂದ ಜನರು ದೂರ ಉಳಿಯುತ್ತಿದ್ದಾರೆ. ಮಂಗಳೂ ರಿನಲ್ಲಿ ಮತ್ತೆ ಬಯಲು ಮಲ ವಿಸರ್ಜನೆಗೆ ಅವಕಾಶ ದೊರೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

339 ಶೌಚಾಲಯ ಮಂಜೂರು: ಶೌಚಾಲಯ ನಿರ್ಮಾಣಕ್ಕೆ ನೆರವು ಕೋರಿದ್ದ 339 ಅರ್ಜಿಗಳು ತಾಂತ್ರಿಕ ಕಾರಣಕ್ಕಾಗಿ ಬಾಕಿ ಇದ್ದವು. ಕೆಲವೇ ದಿನಗಳ ಅವಧಿಯಲ್ಲಿ ಅವುಗಳನ್ನು ವಿಲೇವಾರಿ ಮಾಡಲಾಗಿದೆ. ನಗರದಲ್ಲಿ 34 ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ತಿಳಿಸಿದರು.  ಉಪ ಮೇಯರ್ ಸುಮಿತ್ರಾ ಕರಿಯ ಮತ್ತು ಆಯುಕ್ತ ಮೊಹಮ್ಮದ್ ನಜೀರ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT