ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘3–4 ತಿಂಗಳಲ್ಲಿ ಯೋಜನೆ ಆರಂಭ’

ಸ್ಮಾ ರ್ಟ್ ಸಿಟಿ– ₹40 ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ: 20 ವರ್ಷದ ಕಾಲಮಿತಿ
Last Updated 29 ಸೆಪ್ಟೆಂಬರ್ 2016, 8:11 IST
ಅಕ್ಷರ ಗಾತ್ರ

ಮಂಗಳೂರು:  ಸ್ಮಾರ್ಟ್‌ ಸಿಟಿ ಯೋಜನೆ ಯಡಿ ಮಂಗಳೂರು ನಗರವನ್ನು ಆಯ್ಕೆ ಮಾಡಲಾಗಿದ್ದು, 3–4 ತಿಂಗಳಲ್ಲಿ ಯೋಜನೆಯ ಉಸ್ತುವಾರಿ ನೋಡಿಕೊ ಳ್ಳುವ ವಿಶೇಷ ಉದ್ದೇಶ ವಾಹನ ( ಸ್ಪೆಶಲ್‌ ಪರ್ಪಸ್‌ ವೆಹಿಕಲ್‌) ಅಸ್ತಿತ್ವಕ್ಕೆ ಬರಲಿದೆ. ನಂತರ ಕಾಮಗಾರಿ ಆರಂಭ ವಾಗಲಿವೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಂಗಳೂರು ನಗರದ ಸಮಗ್ರ ಅಭಿವೃದ್ಧಿ ಗಾಗಿ ಒಟ್ಟು ₹40 ಸಾವಿರ ಕೋಟಿ ಅನು ದಾನ ಅಂದಾಜಿಸಲಾಗಿದೆ. ಇದಕ್ಕೆ 20 ವರ್ಷಗಳ ಕಾಲಮಿತಿ ನಿಗದಿಪಡಿಸಲಾ ಗಿದೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತಲಾ ₹500 ಕೋಟಿ ನೀಡ ಲಿವೆ. ಅಮೃತ್‌ ಹಾಗೂ ಎಡಿಬಿಯಿಂದ ₹1ಸಾವಿರ ಕೋಟಿ ಬರಲಿದ್ದು, ಪಾಲಿ ಕೆಯ ಯೋಜನೆಗಳಿಗೆ ₹1 ಸಾವಿರ ಕೋಟಿ ಅನುದಾನ ಲಭ್ಯವಾಗಲಿದೆ. ಬರುವ ಐದು ವರ್ಷದಲ್ಲಿ ಒಟ್ಟು 8 ಸಾವಿರ ಕೋಟಿ ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ವಿವರಿಸಿದರು.

5 ವರ್ಷದ ನಂತರ ಖಾಸಗಿ ಸಹ ಭಾಗಿತ್ವದಲ್ಲಿ (ಪಿಪಿಪಿ) ನಗರದ ಅಭಿ ವೃದ್ಧಿ ಮಾಡಲಾಗುವುದು. ಈ ಯೋಜ ನೆಯಡಿ ಜಾಗತಿಕ ಮಟ್ಟದ ಅಭಿವೃದ್ಧಿ ಮಾಡಬೇಕು. ಜತೆಗೆ ನಿರಂತರ ಆದಾಯ ವೃದ್ಧಿಗೆ ಪೂರಕವಾದ ಕಾಮಗಾರಿಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಗೆ ಅಮೃತ್‌ ಯೋಜನೆಯಡಿ ₹160 ಕೋಟಿ, ಎಡಿಬಿಯಿಂದ ಕುಡಿಯುವ ನೀರಿನ ಯೋಜನೆಗೆ ₹160 ಕೋಟಿ, ಒಳಚರಂಡಿಗೆ ₹120 ಕೋಟಿ, 13 ಮತ್ತು 14 ನೇ ಹಣಕಾಸು ಯೋಜನೆ ಯಡಿ ₹19 ಮತ್ತು ₹17 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಒಟ್ಟಾರೆ ಜಿಲ್ಲೆಗೆ ಕೇಂದ್ರ ಸರ್ಕಾರ ₹8,293 ಕೋಟಿ ಹಾಗೂ ಮಹಾನಗರ ಪಾಲಿಕೆಗೆ ₹929 ಕೋಟಿ ಅನುದಾನ ನೀಡಿದೆ. ಈ ಎಲ್ಲ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಪಡಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ ಎಂದರು.

ವಿಶೇಷ ಕೃಷಿ ವಲಯ ಶೀಘ್ರ: ಲೋಕಸಭೆ ಚುನಾವಣೆಯ ಸಂದ ರ್ಭದಲ್ಲಿ ವಿಶೇಷ ಕೃಷಿ ವಲಯ ಹಾಗೂ ಮಾಹಿತಿ ತಂತ್ರಜ್ಞಾನ ಪಾರ್ಕ್‌ ಅನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸ ಲಾಗಿತ್ತು. ಇದೀಗ ಸ್ಮಾರ್ಟ್‌ ಸಿಟಿ ಅಡಿ ಮಾಹಿತಿ ತಂತ್ರಜ್ಞಾನ ಪಾರ್ಕ್‌ ನಿರ್ಮಾ ಣಕ್ಕೆ ಆದ್ಯತೆ ಸಿಗಲಿದೆ.

ವಿಶೇಷ ಕೃಷಿ ವಲಯದ ಕುರಿತು ಕ್ಯಾಲಿಕಟ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಸಮಾವೇಶ ದಲ್ಲಿ ಪ್ರಧಾನಿ ಮೋದಿ ಅವರ ಜತೆ ಚರ್ಚಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದರು.

***
ಹೊಗೆ ಮುಕ್ತ ಗ್ರಾಮ ಬಳಪ

ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿರುವ ಬಳಪ ಹೊಗೆ ಮುಕ್ತ ಗ್ರಾಮವಾಗಿದೆ ಎಂದು ಸಂಸದ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು. ಗ್ರಾಮದಲ್ಲಿ ಶೇ 40 ರಷ್ಟು ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಬದುಕು, ಆರೋಗ್ಯ, ಶಿಕ್ಷಣ, ಸಂಸ್ಕಾರ ಹಾಗೂ ಕಾನೂನು ನೆರವಿಗೆ ಈ ಗ್ರಾಮದಲ್ಲಿ ಆದ್ಯತೆ ನೀಡಲಾಗಿದೆ.

ಈಗಾಗಲೇ ಸೌರ ಬೀದಿ ದೀಪ ಅಳವಡಿಕೆ, 2 ಆಸ್ಪತ್ರೆಗಳ ನವೀಕರಣ, ಶಾಲೆಗಳಲ್ಲಿ ಇ–ಕ್ಲಾಸ್‌ ಮತ್ತು ಮೆಗಾ ಕ್ಲಾಸ್‌ಗಳ ಅಭಿವೃದ್ಧಿ  ಬ್ಯಾಂಕ್‌ ಶಾಖೆ ಆರಂಭ ಹಾಗೂ ₹4 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ ಎಂದು ವಿವರಿಸಿದರು.


***
14 ನೇ ಹಣಕಾಸು ಯೋಜನೆಯಡಿ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ₹1 ಕೋಟಿ ಅನುದಾನ ನೀಡುವ ಯೋಜನೆಯನ್ನು ಪ್ರಧಾನಿ ರೂಪಿಸಿದ್ದಾರೆ.
-ನಳಿನ್‌ಕುಮಾರ್‌ ಕಟೀಲ್‌, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT