ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಹನ ಗುಣಮಟ್ಟ ಹೆಚ್ಚಿಸುವ 5ಬಾರ್ಸ್‌...

Last Updated 4 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮನೆ, ಕಚೇರಿಗಳ ಒಳಗೆ ಮೊಬೈಲ್‌ ಸಂಪರ್ಕವು ಸರಿಯಾಗಿ ಸಿಗದಿರುವುದು   ಬಳಕೆದಾರರ ಅತಿದೊಡ್ಡ ತಲೆನೋವಾಗಿದೆ. ಈ  ಗಂಭೀರ ಸ್ವರೂಪದ ಸಮಸ್ಯೆಗೆ   ತಂತ್ರಜ್ಞಾನ ಸ್ಟಾರ್ಟ್‌ಅಪ್‌  ‘5ಬಾರ್ಸ್‌ಇಂಡಿಯಾ ಡಾಟ್‌ ಕಾಂ’ (5barzindia.com)   ತನ್ನ ಪೇಟೆಂಟ್ ಉತ್ಪನ್ನಗಳ ಮೂಲಕ ಪರಿಹಾರ ಒದಗಿಸುತ್ತಿದೆ. 

ಈ ಮೂಲಕ ಸ್ಪಷ್ಟ ಮತ್ತು ಗರಿಷ್ಠ ಗುಣಮಟ್ಟದ ಮೊಬೈಲ್‌ ಸೇವೆ ಒದಗಿಸಲು ನೆರವಾಗುತ್ತಿದೆ.  ‘5ಬಾರ್ಸ್‌ಇಂಡಿಯಾ’,   ಅಮೆರಿಕದ ಸ್ಯಾಂಡಿಯಾಗೊ ಮೂಲದ 5 ಬಾರ್ಸ್‌ ಇಂಟರ್‌ನ್ಯಾಷನಲ್‌ ಇಂಕ್‌ನ ಅಂಗಸಂಸ್ಥೆಯಾಗಿದೆ.

ಮೊಬೈಲ್‌   ತರಂಗಾಂತರಗಳಿಗೆ  ಗೋಡೆಗಳು ಅಡ್ಡಿಯಾಗಿ ಪರಿಣಮಿಸಿರುತ್ತವೆ. ಹೀಗಾಗಿ  ಅಸ್ಪಷ್ಟವಾಗಿ ಕೇಳುವುದು, ಕರೆಗಳು ಕಡಿತಗೊಳ್ಳುವುದು ಸಾಮಾನ್ಯವಾಗಿರುತ್ತದೆ. ರಂಗಾಂತರಗಳು ಅಡೆತಡೆಗಳನ್ನು ದಾಟಿ ಹೋಗಿ ತಮ್ಮ ಪೂರ್ಣ ಸಾಮರ್ಥ್ಯದ ಜತೆ ಬಳಕೆದಾರರನ್ನು ತಲುಪುವಂತೆ ಮಾಡಲು ಸಂಸ್ಥೆಯ ಉತ್ಪನ್ನಗಳು ನೆರವಾಗುತ್ತಿವೆ.

ಸಂಸ್ಥೆಯ ವೈಫೈ ರೌಟರ್‌ಗಳು   ಇಡೀ ಮನೆ ಮತ್ತು ಕಚೇರಿ ಒಳಗೆ ತರಂಗಾಂತರಗಳ ಸುಗಮ ಹರಿವಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಈ ಸಂಬಂಧ ಎರಡು ಮಹತ್ವದ ಜಾಗತಿಕ ಹಕ್ಕುಸ್ವಾಮ್ಯ ಪಡೆದುಕೊಂಡಿರುವ ಸಂಸ್ಥೆಯೂ ಇನ್ನೂ  22 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಿದೆ.

ಈ ಉತ್ಪನ್ನವನ್ನು  ನೇರವಾಗಿ ಮಾರುಕಟ್ಟೆಗೆ ಪರಿಚಯಿಸುವುದರ ಬದಲಿಗೆ ಮೊಬೈಲ್ ಸೇವಾ ಸಂಸ್ಥೆಗಳಿಗೆ ಪೂರೈಸಲಾಗುತ್ತಿದೆ. ಪ್ರತಿ ತಿಂಗಳೂ ಗರಿಷ್ಠ ಪ್ರಮಾಣದಲ್ಲಿ ಮೊಬೈಲ್‌ ಬಿಲ್‌ ಪಾವತಿಸುವ ಗ್ರಾಹಕರಿಗೆ  ಗುಣಮಟ್ಟದ ಸೇವೆ ಒದಗಿಸಲು ಮೊಬೈಲ್ ಸೇವಾ ಸಂಸ್ಥೆಗಳು ಈ ಉತ್ಪನ್ನಗಳನ್ನು ಬಳಸಿಕೊಳ್ಳುತ್ತಿವೆ.

ಮೊಬೈಲ್‌ ಸೇವಾ ಸಂಸ್ಥೆಗಳ ಮೂಲಕ  10 ಸಾವಿರ ಮನೆಗಳಿಗೆ ರೌಟರ್‌ ಅಳವಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಮನೆ, ಕಚೇರಿಗಳಲ್ಲಿ ‘5 ಬಾರ್ಸ್‌’  ರೌಟರ್‌  ಸಾಧನ ಇದ್ದರೆ ಅದರಿಂದ ಮೊಬೈಲ್‌ ಕರೆಗಳು ಕಡಿತ ಆಗುವುದಿಲ್ಲ. ಅಸ್ಪಷ್ಟ ಮಾತು ಮತ್ತಿತರ ಸಮಸ್ಯೆಗಳೆಲ್ಲ ದೂರವಾಗುತ್ತವೆ.

‘5ಬಾರ್ಸ್‌’ ಸಂಕೇತಗಳ ನೆರವಿನಿಂದ  ಡೇಟಾ ಮತ್ತು ವಿಡಿಯೊಗಳ  ಗುಣಮಟ್ಟವೂ ಹೆಚ್ಚಲಿದೆ. ಅಸ್ಪಷ್ಟತೆ, ಮಧ್ಯೆ, ಮಧ್ಯೆ ಕರೆ ಕಡಿತದ ಸಮಸ್ಯೆಗಳೆಲ್ಲ ದೂರವಾಗುತ್ತವೆ. ಯುಟ್ಯೂಬ್‌ಗಳ  ವಿಡಿಯೊಗಳ  ವೀಕ್ಷಿಸುವ ಗುಣಮಟ್ಟವೂ ಹೆಚ್ಚಲಿದೆ.

ಇದು ಸಂಪೂರ್ಣ ಪರಿಸರ  ಸ್ನೇಹಿಯಾದ ಉತ್ಪನ್ನವಾಗಿದೆ. ಮೊಬೈಲ್‌ ಬ್ಯಾಟರಿ ಕ್ಷೀಣಿಸಿದಾಗ, ಸಂಕೇತಗಳನ್ನು ಸ್ವೀಕರಿಸಲು ಹೆಚ್ಚಿನ ಪ್ರಮಾಣದ ವಿಕಿರಣ ಹೊರಸೂಸುತ್ತದೆ.  ಈ ಸಮಸ್ಯೆಯನ್ನೂ ‘5ಬಾರ್ಸ್‌’ ದೂರ ಮಾಡುತ್ತದೆ  ಎಂದು  ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಮರ್ಥ ನಾಗಭೂಷಣಂ ಹೇಳುತ್ತಾರೆ.

‘ದಕ್ಷಿಣ ಕ್ಯಾಲಿಫೋರ್ನಿಯಾದ   ಸ್ಯಾಂಡಿಯಾಗೊದಲ್ಲಿ   ಸಂಶೋಧನೆ ನಡೆಯುತ್ತಿದೆ.  ಬೆಂಗಳೂರು ಬಳಿಯ ದೊಡ್ಡಬಳ್ಳಾಪುರದಲ್ಲಿ ಈ ಉತ್ಪನ್ನಗಳ ತಯಾರಿಕಾ ಘಟಕ ಇದೆ. ₹ 10 ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ’  ಎಂದು ಅವರು  ಹೇಳುತ್ತಾರೆ.

ಗ್ರಾಹಕರು ನೇರವಾಗಿ ಈ ಉತ್ಪನ್ನ ಪಡೆಯಲು ಸಾಧ್ಯವಿಲ್ಲ. ಮೊಬೈಲ್‌ ಸೇವಾ ಸಂಸ್ಥೆಗಳೇ ತಮ್ಮ ಆದ್ಯತೆಯ ಗ್ರಾಹಕರಿಗೆ  ಇದರ ಸೇವೆ ಕೊಡ ಮಾಡುತ್ತಿವೆ. ಸಣ್ಣ –ಪುಟ್ಟ ಕಚೇರಿಗಳಿಗೆ, ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಮೊಬೈಲ್‌ ಬಳಸುತ್ತಿದ್ದರೆ ಈ  ಸಾಧನವು ಹೆಚ್ಚು    ಉಪಯುಕ್ತ ಆಗಿರಲಿದೆ.

ಮುಂಬರುವ ವರ್ಷಗಳಲ್ಲಿ ಗ್ರಾಹಕರಿಂದ  ಗುಣಮಟ್ಟದ ಸೇವೆಗೆ ಒತ್ತಾಯ ಹೆಚ್ಚುತ್ತಿದ್ದಂತೆ ಮೊಬೈಲ್‌ ಸೇವಾ ಸಂಸ್ಥೆಗಳಿಗೆ ಇದನ್ನು ಒದಗಿಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಒಂದೆಡೆ ಮೊಬೈಲ್‌ ಸೇವಾ ಸಂಸ್ಥೆಗಳು ತಮ್ಮ ಸಂಪರ್ಕ ಜಾಲ ವಿಸ್ತರಣೆಗೆ ಹಣ ವೆಚ್ಚ ಮಾಡುತ್ತಿವೆ. ಇನ್ನೊಂದೆಡೆ ಸರ್ವರ್‌, ಕ್ಲೌಡ್‌ಗಳ ವಿಸ್ತರಣೆಗೂ ಗಮನ ನೀಡಲಾಗುತ್ತಿದೆ.  ಆದರೆ, ಮೊಬೈಲ್‌, ದತ್ತಾಂಶ ಮತ್ತು ವಿಡಿಯೊಗಳ ಗುಣಮಟ್ಟ ಹೆಚ್ಚಳವನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಸಮಸ್ಯೆಗೆ ‘5ಬಾರ್ಸ್‌ ಇಂಡಿಯಾ ಪರಿಹಾರ ಒದಗಿಸಲು ಹೊರಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT