ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪಲ್‌ ಕೈಗಡಿಯಾರಕ್ಕೆ ಆ್ಯಪ್ ನೆರವು

Last Updated 11 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಆ್ಯಪಲ್‌ ಕಂಪೆನಿ ಬಿಡುಗಡೆ ಮಾಡಿರುವ ಆ್ಯಪಲ್‌ ವಾಚ್‌ ಸ್ಮಾರ್ಟ್‌ವಾಚ್‌ ಆಗಿದೆ. ಈ ಕೈಗಡಿಯಾರಗಳ ಬಳಕೆಗೆಂದೇ ಹಲವು ಕಿರುತಂತ್ರಾಂಶಗಳು (ಆ್ಯಪ್‌) ಗಳು ಇವೆ. ಆ್ಯಪಲ್‌ ವಾಚ್‌ನಲ್ಲಿ ಅತಿ ವೇಗವಾಗಿ ಕೆಲಸ ನಿರ್ವಹಿಸುವ ಚಿಪ್‌ ಇರುವುದರಿಂದ, ಆ್ಯಪ್‌ಗಳು ಸುಲಭವಾಗಿ ಕಾರ್ಯ ನಿರ್ವಹಿಸಲಿವೆ.

ಗ್ಲಿಂಪ್ಸ್‌ ಆ್ಯಪ್‌
ಆ್ಯಪಲ್‌ ವಾಚ್‌ ಆ್ಯಪ್‌ ಒಂದಿದೆ,  ನೋಡಿದಾಕ್ಷಣ ಅದರ ಸರಳ ರಚನೆ ಯಿಂದಲೇ ಮನಸ್ಸಿಗೆ ಹಿಡಿಸುತ್ತದೆ.  ಅದುವೇ ಗ್ಲಿಂಪ್ಸ್‌ (Glimpse) ಆ್ಯಪ್‌.  ಪ್ರತಿದಿನ  ವಾಚ್‌ನ ಪರದೆಯ ಫೋಟೊವನ್ನು ಆನ್‌ಲೈನ್‌ನಿಂದ ತೆಗೆದು ಬದಲಿಸುತ್ತದೆ.

ನೀವು ಪ್ರತೀ ಬಾರಿ ಗಂಟೆ ಎಷ್ಟೆಂದು ನೋಡಿದಾಗಲೂ, ಗ್ಲಿಂಪ್ಸ್‌ ನೆರವಿನಿಂದ ಬೇರೆ ಬೇರೆ ಫೋಟೊಗಳನ್ನು ಪರದೆಯಲ್ಲಿ ಕಾಣುತ್ತೀರಿ. ನಿಮ್ಮ ವಾಚ್‌ನ ಪುಟಾಣಿ ಪರದೆಯಲ್ಲಿ ಸತತವಾಗಿ ಹೊಸ ಸುದ್ದಿ, ಸಾಮಾಜಿಕ ಮಾಧ್ಯಮದಲ್ಲಿ ನಡೆಯುವ ವಿದ್ಯಮಾನಗಳನ್ನೂ ಇದು ತೋರಿಸುತ್ತಿರುತ್ತದೆ. ಗ್ಲಿಂಪ್ಸ್‌ ಆ್ಯಪ್ ನೆರವಿನಿಂದ ಸಿಎನ್‌ಎನ್‌, ನ್ಯಾಷನಲ್‌ ಜಿಯಾಗ್ರಫಿಕ್‌ ಮತ್ತು ಟೈಮ್ಸ್‌ ನಿಯತಕಾಲಿಕೆಗಳ ಜತೆ ಸಂಪರ್ಕ ಕಲ್ಪಿಸಿಕೊಂಡು ಸತತ ಮಾಹಿತಿ ಪಡೆಯಬಹುದು. ಪಿಂಟೆರೆಸ್ಟ್‌ ಮತ್ತು ಟ್ವಿಟರ್‌ ಖಾತೆಗಳಿಗೂ ಸಂಪರ್ಕ ಕೊಡಬಹುದಾದ ಆಯ್ಕೆಗಳೂ ಇವೆ.

ಸಮಯ, ವಾತಾವರಣಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನೂ ಪಡೆಯಬಹುದು. ಆ ದಿನ ಮಾಡಲೇ ಬೇಕಾದ ಕೆಲಸಗಳ ಟಿಪ್ಪಣಿ ಬರೆದಿಡಬಹುದು. ಖರೀದಿಸಬೇಕಾದ ಸರಕುಗಳ ಟಿಪ್ಪಣಿ, ತುರ್ತು ಪೂರೈಸಲೇಬೇಕಾದ ಕೆಲಸಗಳ ಟಿಪ್ಪಣಿ ಮಾಡುವುದು ಇದರಿಂದ ಸಾಧ್ಯವಿದೆ.

ಥಿಂಗ್ಸ್‌, ಐಫೋನ್‌ನಲ್ಲಿ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ. ಐಫೋನ್‌ನಲ್ಲಿ ನೀವು ನೆನಪಿಡಬೇಕಾದ ಕೆಲಸ, ಅದಕ್ಕೊಂದು ಹೆಸರು, ಇತರ ಮಾಹಿತಿಗಳನ್ನು ಐಫೋನ್‌ನಲ್ಲಿ ಬರೆದಿಟ್ಟರೆ, ಆ್ಯಪ್‌ನ ಸಹಾಯದಿಂದ ಕೈಗಡಿಯಾರದಲ್ಲಿಯೇ  ಮಾಹಿತಿ ಪಡೆಯಬಹುದು. ಧ್ವನಿ ಮೂಲಕವೂ ಮಾಹಿತಿಯನ್ನು ಸೇರಿಸುವ ಸೌಲಭ್ಯವಿದೆ. ಧ್ವನಿ ಗುರುತಿಸುವ ಸೌಲಭ್ಯ ಉತ್ತಮವಾಗಿದ್ದು, ಗದ್ದಲವಿರುವ ಸ್ಥಳದಿಂದ ಧ್ವನಿ ಮುದ್ರಿಸಿದರೂ ಸ್ಪಷ್ಟವಾಗಿ ಕೇಳುತ್ತದೆ. 

ಬಾಬೆಲ್‌ (Babel)
ಇದು ಭಾಷೆ ಕಲಿಯುವ ಆ್ಯಪ್‌.  ಇದು ಆ್ಯಪಲ್‌ ವಾಚ್‌ನಲ್ಲಿ ಲಭ್ಯ. ನಿಮಗೆ ಭಾಷೆ ಕಲಿಸುವ ಉತ್ತಮ ಉಪಾಯಗಳು ಇದರ ಬಳಿ ಇವೆ. ನೀವು ಓಡಾಡುವ ಸ್ಥಳಗಳನ್ನು ಗುರುತಿಸಿ, ಸಂದರ್ಭಕ್ಕೆ ತಕ್ಕ ಪದ, ವಾಕ್ಯಗಳನ್ನು ಕೈಗಡಿಯಾರದ ಪರದೆಯ ಮೇಲೆ ತೋರಿಸುತ್ತದೆ. ಈ ಆ್ಯಪ್‌ ರಸಪ್ರಶ್ನೆ ಆಟದ ರೀತಿ ಕಾರ್ಯ ನಿರ್ವಹಿಸುತ್ತದೆ. ಇದೊಂದು ಉಚಿತ ಆ್ಯಪ್‌ ಆಗಿದ್ದು, ಇದರಿಂದ ನಿಮ್ಮ ಭಾಷೆ ಸುಲಲಿತವಾಗಲು ಸಹಾಯವಾಗುತ್ತದೆ. ಪದಗಳನ್ನು ನೆನಪಿಟ್ಟುಕೊಳ್ಳಲೂ ಸಹಕಾರಿಯಾಗಿದೆ.

ವ್ಯೂವ್‌ ರೇಂಜರ್‌
ಬಿಲ್ಟ್‌ ಇನ್‌ ಜಿಪಿಎಸ್‌,  ಆ್ಯಪಲ್‌ ವಾಚ್ ಸೀರಿಸ್‌ 2 ರ ವಿಶಿಷ್ಟ ಸೌಲಭ್ಯ ಹೊಂದಿದೆ. ವ್ಯೂವ್‌ ರೇಂಜರ್‌ (ViewRanger) ಆ್ಯಪ್‌ ಪ್ರಥಮ ಬಾರಿಗೆ ಸಂವೇದಿ ಗುಣ ಹೊಂದಿರುವ ಆ್ಯಪ್‌ ಆಗಿದೆ. ಈ ಆ್ಯಪ್ ಹಳ್ಳಿಗಾಡು ಸುತ್ತಾವಾಗ, ಕಾಡು ಮೇಡು ಅಲೆಯುವಾಗ ನೀವು  ನಡೆದಾಡಿದ ದಾರಿಯ ಗುರುತನ್ನು ತೋರಿಸುವ ಜನಪ್ರಿಯ ಆ್ಯಪ್‌. ಈ ಆ್ಯಪ್‌ ಭೂಪ್ರದೇಶ, ದಿಕ್ಕುಗಳ ಕುರಿತು ಮಾಹಿತಿಯನ್ನು ತೋರಿಸುತ್ತದೆ, ನೀವು ಹಿಂತಿರುಗಿ ಬರುವಾಗ ದಾರಿತಪ್ಪದಂತೆ ನಿಮ್ಮನ್ನು ಎಚ್ಚರಿಸುತ್ತದೆ.

ವ್ಯೂವ್‌ ರೇಂಜರ್‌  ಆ್ಯಪಲ್‌ ವಾಚ್‌ನಲ್ಲಿ ನಿಖರವಾಗಿ ಸ್ಥಳ ಗುರುತಿಸಲಿದೆ. ನೀವು ಯಾವ ಸಂಪರ್ಕ ವ್ಯವಸ್ಥೆಯೂ ಇಲ್ಲದಂತಹ ಕಾಡು –ಮೇಡು ಪ್ರವೇಶಿಸುವವರೆಗೂ ಮೊಬೈಲ್‌ನ ಸಂಕೇತ ಇಲ್ಲದಿದ್ದರೂ ದಿಕ್ಕುಗಳನ್ನು ತೋರಿಸುತ್ತದೆ. ನೀವು ಈ ಆ್ಯಪ್‌ ನೆರವಿನಿಂದ ಮಾರ್ಗವನ್ನು ಮೊದಲೇ ಗೊತ್ತು ಪಡಿಸಿದರೆ, ಮೊಬೈಲ್‌ ಸಿಗ್ನಲ್‌ ಇಲ್ಲದೆ ಇದ್ದರೂ, ಮೊಬೈಲ್‌ ಸ್ವಿಚ್‌ ಆಫ್‌ ಆದರೂ, ಕಾಡು–ಮರುಭೂಮಿಯಂತಹ ಪ್ರದೇಶದಲ್ಲಿ ನಾವು ಚಲಿಸುತ್ತಿರುವ ಮಾರ್ಗದ ಮಾಹಿತಿಯನ್ನು ತೋರಿಸುತ್ತದೆ.  

ಫಿಲ್ಡ್‌ ಡೇ
ಆ್ಯಪಲ್ ವಾಚ್‌ನಲ್ಲಿ ಇದೀಗ  ಆಟವಾಡಲು ‘ಫಿಲ್ಡ್‌ ಡೇ’ (Field Day) ‌ ಇದೆ. ನಿಮ್ಮ ಪುಟ್ಟ ವಾಚ್‌ ಪರದೆಯ ಮೇಲೆಯೇ ಆಟ ಆಡಬಹುದು. ಈ  ರಂಜನೀಯ ಆಟದಲ್ಲಿ ಬಳಕೆಯಾಗುವ ವ್ಯಂಗ್ಯ ಚಿತ್ರಗಳನ್ನು ನಮಗೆ ಬೇಕೆಂದ ಶೈಲಿಗೆ ಹೊಂದಿಸಿಕೊಳ್ಳಬಹುದು. ಆರಂಭದಲ್ಲಿ ಬಳಕೆ ಸ್ವಲ್ಪ ಕಷ್ಟ ಎನಿಸಿದರೂ, ನಂತರ ಬಹಳ ಸಹಜವೆಂಬಂತೆ ತೋರುತ್ತದೆ. 

ಆನ್‌ಲೈನ್‌ ಖರೀದಿಯು ಭವಿಷ್ಯದಲ್ಲಿ ಬೇಡಿಕೆಯ ಉದ್ಯಮವಾಗಿ ಬೆಳೆಯಲಿದೆ. ಆನ್‌ಲೈನ್‌ ಖರೀದಿಗಾಗಿಯೇ ‘ಫ್ಯಾನ್ಸಿ’ಆಪ್‌ ಸಿದ್ಧವಾಗಿದೆ. ಕೈಗಡಿಯಾರದ ಮೂಲಕವೇ ಸರಕು ಖರೀದಿಸಲು ಈ ಆ್ಯಾಪ್‌ ನೆರವಾಗಲಿದೆ.

ಈ ಆ್ಯಪ್‌ನಲ್ಲಿ ಅಗಾಧ ವೈವಿಧ್ಯದ  ಬಟ್ಟೆ ಮತ್ತು ಇತರ ಉತ್ಪನ್ನಗಳನ್ನು ಕಾಣಬಹುದು. ಈ ಆ್ಯಪ್‌ನಲ್ಲಿ ಕೆಲವೊಂದು ವಸ್ತುಗಳ ಬೆಲೆ ಗಗನಮುಖಿ ಎನಿಸುತ್ತವೆ.  ಶಾಪಿಂಗ್‌ ಅನುಭವ ಪಡೆಯಲು ಇದು ನೆರವಾಗಲಿದೆ.

ಕ್ವಿಕ್‌ ಕಾಲ್ (Quick Call)
‌ಟಿಂಡರ್‌ (Tinder) ಆನ್‌ಲೈನ್ ಡೇಟಿಂಗ್‌ಗೆ ಹೆಸರುವಾಸಿಯಾದ ಆ್ಯಪ್‌ ಆಗಿದೆ. ಈ ಆ್ಯಪ್‌ ನಿಮಗೆ ಸಂಗಾತಿ ಹುಡುಕಲು  ಹೆಚ್ಚು ಪ್ರಯೋಜನಕ್ಕೆ ಬರದು. ಬದಲಿಗೆ ನಿಮ್ಮ ಸಂಗ್ರಹದಲ್ಲಿನ ಛಾಯಾಚಿತ್ರಗಳಿಗೆ ನಿಮ್ಮ ಸ್ನೇಹಿತರಿಂದ  ಮೆಚ್ಚುಗೆ ಪಡೆಯಲು ನೆರವಾಗಲಿದೆ.

ವೆರ್ನೆ (Verne)
‘ದ ಹಿಮಾಲಯಾಸ್’ ಇದು ಹೊಸದಾದ ಶೈಕ್ಷಣಿಕ ಆ್ಯಪ್‌ ಆಗಿದ್ದು, ಆಂಡ್ರಾಯ್ಡ್‌ನಲ್ಲಿ ಉಚಿತವಾಗಿ ದೊರಕಲಿದೆ. ಗೂಗಲ್‌ನಿಂದ 3ಡಿ ಮ್ಯಾಪಿಂಗ್‌ ಡೇಟಾ ತೆಗೆದುಕೊಂಡು ಬೆಟ್ಟ, ಗುಡ್ಡಗಳ ಮಾಹಿತಿ ಪಡೆಯಬಹುದು.
(ನ್ಯೂಯಾರ್ಕ್‌ ಟೈಮ್ಸ್‌ ನ್ಯೂಸ್‌ ಸರ್ವಿಸ್‌)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT