ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಂಗಾಂತರ:ನೀರಸ ಹರಾಜು

Last Updated 11 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮೊಬೈಲ್‌ ತರಂಗಾಂತರಗಳ ಅತಿದೊಡ್ಡ ಹರಾಜು ಪ್ರಕ್ರಿಯೆಗೆ ಈ ಬಾರಿ  ಮೊಬೈಲ್‌ ಸೇವಾ ಸಂಸ್ಥೆಗಳಿಗೆ ನಿರುತ್ಸಾಹದ ಪ್ರತಿಕ್ರಿಯೆ ಕಂಡು ಬಂದಿದೆ. ಹರಾಜಿನಲ್ಲಿ ಭಾಗವಹಿಸಿದ್ದ ಸಂಸ್ಥೆಗಳು ಕಡಿಮೆ ಮೊತ್ತಕ್ಕೆ ಹರಾಜು ಕೂಗಿವೆ. ಸರ್ಕಾರದ  ನಿರೀಕ್ಷೆ ಹುಸಿಯಾಗಿದೆ.

ದುಬಾರಿ ‘4ಜಿ’  ಬ್ಯಾಂಡ್‌ ಸೇರಿದಂತೆ ಶೇ 60ರಷ್ಟು ತರಂಗಾಂತರಗಳ ಹರಾಜು ನಡೆದಿಲ್ಲ. ಮಾರಾಟವಾಗದ ತರಂಗಾಂತರಗಳ ದರ ಇಳಿಸಿ ಮತ್ತೊಮ್ಮೆ ಹರಾಜು ನಡೆಸುವ ಸಾಧ್ಯತೆಯನ್ನು ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ತಳ್ಳಿ ಹಾಕಿದ್ದಾರೆ.

‘700 ಎಂಎಚ್‌ಜೆಡ್‌ನ ತರಂಗಾಂತರ  ಖರೀದಿಗೆ ನೀರಸ ಪ್ರತಿಕ್ರಿಯೆ ಬರಲು ಪ್ರಮುಖ ಕಾರಣ ಅದರ ಅವಾಸ್ತವಿಕ ಬೆಲೆ. ಈ ಬಗ್ಗೆ ಸರ್ಕಾರ   ಗಮನಹರಿಸಲಿದೆ ಎಂದು ನಂಬಿದ್ದೇವೆ’ ಎಂದು  ಭಾರತೀಯ ಮೊಬೈಲ್‌ ಸೇವಾಸಂಸ್ಥೆಗಳ ಸಂಘದ ಮಹಾನಿರ್ದೇಶಕ ರಂಜನ್‌ ಎಸ್‌.ಮ್ಯಾಥ್ಯೂ ಹೇಳಿದ್ದಾರೆ.

***
ನಮ್ಮ ತರಂಗಾಂತರ ಸೇವೆಯನ್ನು ಇನ್ನಷ್ಟು ವಿಸ್ತರಿಸಿದ್ದೇವೆ.   ಸಾಮರ್ಥ್ಯವನ್ನೂ ಹೆಚ್ಚಿಸಿದ್ದೇವೆ. ದೇಶದ ಮೂಲೆಮೂಲೆಗೆ ಗುಣಮಟ್ಟದ ಸೇವೆ ದೊರೆಯುವಂತಾಗಬೇಕು ಎಂಬುದು ಇದರ ಹಿಂದಿರುವ ಉದ್ದೇಶ. ರಿಲಯನ್ಸ್ ಜಿಯೊ ಜಾಗತಿಕ ಡಿಜಿಟಲ್‌ ನಾಯಕತ್ವ ವಹಿಸಿಕೊಳ್ಳಲು ಮುಂದಾಗಿದೆ.
–ಮನೋಜ್‌ ಸಿನ್ಹಾ, ದೂರಸಂಪರ್ಕ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT