ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಆ್ಯಪ್‌ಗಳ ಸುಗ್ಗಿ

Last Updated 11 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕಂಪೆನಿಗಳು ಗ್ರಾಹಕರನ್ನು ತಮ್ಮತ್ತ ಸೆಳೆಯಲು ತಂತ್ರಜ್ಞಾನದ ಮೊರೆ ಹೋಗುತ್ತಿವೆ. ಉತ್ಪನ್ನಗಳು ಗ್ರಾಹಕರ ಬೆರಳ ತುದಿಯಲೇ ಲಭ್ಯವಾಗುವಂತೆ ಮಾಡಲು ಅಂತರ್ಜಾಲ ತಾಣಗಳು, ಕಿರುತಂತ್ರಾಂಶಗಳ (ಆ್ಯಪ್‌) ಮೊರೆ ಹೋಗುತ್ತಿವೆ.

ಆದರೆ, ಆ್ಯಪ್‌ ಮೂಲಕವೇ ಕಾರ್ಯನಿರ್ವಹಿಸುವ ಸಾಮಾಜಿಕ ಜಾಲತಾಣಗಳು ನೂತನ ಗುಣವೈಶಿಷ್ಟ್ಯಗಳಿರುವ ಅಪ್ಲಿಕೇಷನ್‌ಗಳನ್ನು ಪರಿಚಯಿಸುತ್ತಿವೆ. ಇದೀಗ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್, ವಾಟ್ಸ್‌ಆ್ಯಪ್ ಕ್ಯಾಮೆರಾ ಐ, ಒಯೊ ಕಂಪೆನಿಯೂ ನಿಕ್ಕಿಬೋಟ್ ಮತ್ತು ಫ್ಯೂಚರ್ ಗ್ರೂಪ್‌  ಫ್ಯೂಚರ್‌ಪೇ ಎಂಬ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿವೆ.

ಫೇಸ್‌ಬುಕ್‌ನ ಮಾರ್ಕೆಟ್‌ಪ್ಲೇಸ್
ಜಗತ್ತಿನಲ್ಲೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ತನ್ನ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಸರಕುಗಳನ್ನು ಕೊಳ್ಳಲು ಹಾಗೂ ಮಾರಾಟ ಮಾಡುವ ಅನುಕೂಲತೆ ಕಲ್ಪಿಸಲು ಮುಂದಾಗಿದ್ದು ಮಾರ್ಕೆಟ್‌ಪ್ಲೇಸ್ ಫ್ಲಾಟ್‌ಫಾರಂ   ಪರಿಚಯಿಸುತ್ತಿದೆ. ಮೊಬೈಲ್ ಆ್ಯಪ್‌ ಮತ್ತು ಡೆಸ್ಕ್‌ಟಾಪ್ ಮೂಲಕ ಫೇಸ್‌ಬುಕ್ ಬಳಕೆದಾರರು ಇದನ್ನು ಬಳಕೆ ಮಾಡಬಹುದು.

ಈ ಮಾರ್ಕೆಟ್‌ಫ್ಲೇಸ್ ಫ್ಲಾಟ್‌ಫಾರಂನಲ್ಲಿ ಗ್ರಾಹಕರು ಒಎಲ್‌ಎಕ್ಸ್ ಮಾದರಿಯಲ್ಲಿ ತಮ್ಮ ವಸ್ತುಗಳನ್ನು ಮಾರಾಟ ಮಾಡಬಹುದು ಹಾಗೂ ಇ-ಕಾಮರ್ಸ್ ರೀತಿಯಲ್ಲಿ  ಸರಕುಗಳನ್ನು ಕೊಂಡುಕೊಳ್ಳ ಬಹುದಾಗಿದೆ ಎಂದು ಫೇಸ್‌ಬುಕ್‌ನ ಪ್ರಾಡಕ್ಟ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕರಾದ ಮೇರಿ ಕು ತಿಳಿಸುತ್ತಾರೆ.

ಬಳಕೆದಾರರು ತಮ್ಮ ಫೇಸ್‌ಬುಕ್ ಪುಟದಲ್ಲಿರುವ ಮಾರ್ಕೆಟ್‌ಪ್ಲೇಸ್ ಬಟನ್ ಅನ್ನು ಕ್ಲಿಕ್ ಮಾಡಿ ಸುಲಭವಾಗಿ ವ್ಯವಹಾರ ನಡೆಸಬಹುದು. ಇದು ಬಳಕೆದಾರರಿಗೆ  ಸಂಪೂರ್ಣ ಉಚಿತವಾಗಿ ಲಭ್ಯವಿದೆ. ಜಾಗತಿಕವಾಗಿ ಆನ್‌ಲೈನ್ ಶಾಪಿಂಗ್‌ನಲ್ಲಿ ಮುಂಚಣಿಯಲ್ಲಿರುವ ಇಬೇ ಮತ್ತು ಕ್ರೇಜಿಲಿಸ್ಟ್ ಕಂಪೆನಿಗಳಿಗೆ ಪೈಪೋಟಿ ನೀಡಲು ಫೇಸ್‌ಬುಕ್ ಮಾರ್ಕೆಟ್‌ಫ್ಲೇಸ್ ರೂಪಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವ್ಯಾಟ್ಸಆ್ಯಪ್‌ನ ಕ್ಯಾಮೆರಾ ಐ
ವ್ಯಾಟ್ಸಆ್ಯಪ್ ತನ್ನ ಗ್ರಾಹಕರಿಗೆ ನೂತನ ಕ್ಯಾಮೆರಾ ಐ ಎಂಬ ಅಪ್ಲಿಕೇಷನ್ ಪರಿಚಯಿಸುತ್ತಿದೆ. ಈ ಕ್ಯಾವೆರಾ ಐ ಬಳಕೆಯ ಆ್ಯಪ್‌ ಅಲ್ಲ. ಬದಲಿಗೆ ವ್ಯಾಟ್ಸಆ್ಯಪ್ ನಲ್ಲಿ ವಿಡಿಯೊ ಮತ್ತು ಫೋಟೊಗಳನ್ನು ವಿನಿಮಯ ಮಾಡಿಕೊಳ್ಳುವವರಿಗೆ ಇಮೋಜಿ ಮತ್ತು ಟೈಟಲ್ (ಶಿರ್ಷಿಕೆ) ಬಳಸಲು ಅನುಕೂಲ ಮಾಡಿಕೊಡುವ ವೈಶಿಷ್ಟ್ಯ ಅಷ್ಟೇ! ಇದನ್ನು ವಾಟ್ಸಆ್ಯಪ್ ಸಂಸ್ಥೆ ಕ್ಯಾಮೆರಾ ಐ ಎಂದು ಕರೆದಿದೆ.

ವಾಟ್ಸ್‌ಆ್ಯಪ್ ಬಳಕೆದಾರರು ಇನ್ನು ಮುಂದೆ ತಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಕುಂಟುಂಬ ವರ್ಗದವರಿಗೆ ಕಳುಹಿಸುವ ಫೋಟೊ ಮತ್ತು ವಿಡಿಯೊಗಳ ಮೇಲೆ ಟೈಟಲ್ ಹಾಕಿ ವಿನ್ಯಾಸ ಮಾಡಬಹುದು. ಹಾಗೆಯೇ ಇದರಲ್ಲಿ ಇಮೋಜಿಗಳನ್ನು ಬಳಸುವ ಸೌಕರ್ಯವನ್ನೂ ಕಲ್ಪಿಸಲಾಗಿದೆ. ಗ್ರಾಹಕರು ಬೇರೆ ಮೇಸಿಜಿಂಗ್ ಆ್ಯಪ್‌ಗಳನ್ನು ಬಳಸದಿರುವಂತೆ ಮಾಡಲು ವಾಟ್ಸ್‌ಆ್ಯಪ್ ಈ ಕ್ಯಾಮೆರಾ ಐ ತಂತ್ರವನ್ನು ಅನುಸರಿಸಿದೆ ಎಂದು ತಂತ್ರಜ್ಞಾನ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ನಿಕಿ ಬೋಟ್
ಹೋಟೆಲ್ ಬುಕ್ಕಿಂಗ್ ವಹಿವಾಟು ನಡೆಸುವ ಓಯೊ ಕಂಪೆನಿ ಇದೀಗ ನಿಕಿ.ಐ ಕಂಪೆನಿಯ ಸಹಭಾಗಿತ್ವದಲ್ಲಿ ನೂತನ ನಿಕಿ ಬೋಟ್ (Niki bot) ಎಂಬ ಬುಕ್ಕಿಂಗ್ ಅಪ್ಲಿಕೇಷನ್ ಪರಿಚಯಿಸುತ್ತಿದೆ. ಮಲೇಷ್ಯಾ ಮೂಲದ ನಿಕಿ.ಐ ಕಂಪೆನಿಯೂ ಓಯೊ ಜತೆ ಪಾಲುದಾರಿಕೆಯನ್ನು ಹೊಂದಿದೆ. ಈ ಎರಡೂ ಕಂಪೆನಿಗಳು ಗ್ರಾಹಕರಿಗಾಗಿ ನೂತನ ನಿಕ್ಕಿ ಬೋಟ್ ಎಂಬ ಬುಕ್ಕಿಂಗ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದು ಗ್ರಾಹಕರು ಕೆಲವೇ ದಿನಗಳಲ್ಲಿ ಇದನ್ನು ಬಳಸಬಹುದಾಗಿದೆ.

ದೇಶದ 200 ನಗರಗಳಲ್ಲಿ   ಓಯೊ ಕಾರ್ಯನಿರ್ವಹಿಸುತ್ತಿದೆ. ಇನ್ನು ಮುಂದೆ 6,500 ಹೋಟೆಲ್‌ಗಳಲ್ಲಿ ಸುಮಾರು 70 ಸಾವಿರ ರೂಮ್‌ಗಳನ್ನು  ಬುಕ್ಕಿಂಗ್ ಮಾಡಲು ಈ ನಿಕಿ ಬೋಟ್ ಆ್ಯಪ್‌ ನೆರವಾಗಲಿದೆ ಎಂದು ಕಂಪೆನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ಓಯೊ ಅಂತರ್ಜಾಲ ತಾಣ, ಆ್ಯಪ್‌ ಮಾತ್ರವಲ್ಲದೆ,  ನಿಕಿ ಬೋಟ್ ಆ್ಯಪ್‌ ಮೂಲಕವು ಗ್ರಾಹಕರು ಕೊಠಡಿಗಳನ್ನು ಕಾಯ್ದಿರಿಸಬಹುದು.

ಫ್ಯೂಚರ್ ಗ್ರೂಪ್‌ನ ಫ್ಯೂಚರ್‌ಪೇ
ಮುಂಬೈ ಮೂಲದ ಫ್ಯೂಚರ್ ಗ್ರೂಪ್ ಕಂಪೆನಿ ತನ್ನ ಆನ್‌ಲೈನ್ ಗ್ರಾಹಕರಿಗಾಗಿ ಡಿಜಿಟಲ್ ವ್ಯಾಲೆಟ್ ಫ್ಯೂಚರ್‌ಪೇ ಎಂಬ ಆ್ಯಪ್‌ ಅನ್ನು ಪರಿಚಯಿಸುತ್ತಿದೆ.  ಗ್ರಾಹಕರು  ಬಿಗ್ ಬಜಾರ್, ಇಜೋನ್, ಹೋಮ್‌ಟೌನ್ ಮತ್ತು ಫ್ಯೂಚರ್ ಗ್ರೂಪ್‌ನ ಮಳಿಗೆಗಳಲ್ಲಿ ಸುಲಭವಾಗಿ ಖರೀದಿ ವಹಿವಾಟು ನಡೆಸಬಹುದು ಎಂದು ಕಂಪೆನಿಯ ಸಿಇಒ ಕಿಶೋರ್ ಬಿಯಾನಿ ತಿಳಿಸಿದ್ದಾರೆ.

ಗ್ರಾಹಕರು ಆಂಡ್ರಾಯ್ಡ್‌ ಮತ್ತು ಐಒಎಸ್ ಫ್ಲಾಟ್‌ಫಾರಂನಲ್ಲಿ ಲಭ್ಯವಿರುವ ಫ್ಯೂಚರ್‌ಪೇ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು ವಸ್ತುಗಳನ್ನು ಖರೀದಿಸಬಹುದು. ಇದರ ಮತ್ತೊಂದು ವಿಶೇಷತೆ ಎಂದರೆ ಸರಕುಗಳನ್ನು ಸಾಲದ ರೂಪದಲ್ಲಿ ಪಡೆದು, ತಿಂಗಳ ಕಂತುಗಳ ಮೂಲಕ ಹಣವನ್ನು ಪಾವತಿ ಮಾಡಬಹುದು ಎನ್ನುತ್ತಾರೆ ಕಿಶೋರ್ ಬಿಯಾನಿ. ಇಲ್ಲಿ ಒಂದು ರೂಪಾಯಿ ಸರಕಿನಿಂದ ಹಿಡಿದು ₹ 3 ಲಕ್ಷ ವರೆಗಿನ ವಸ್ತುಗಳನ್ನು ಕೊಳ್ಳಬಹುದು ಎನ್ನುತ್ತಾರೆ ಅವರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT