ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರುವೆಯ ಜಗದೊಳು...

Last Updated 13 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಕೀಟ ಪ್ರಪಂಚವೇ ವಿಶಿಷ್ಟ, ಯಾರಿಂದಲೂ ಅರಿಯಲು ಆಗದ ಲೋಕ. ಅದರಲ್ಲಿಯೂ ಇರುವೆಯ ಜೀವನ ಚಕ್ರ ತುಂಬಾ ಕುತೂಹಲಗಳಿಂದ ಕೂಡಿದೆ. ಅದರ ಬಗ್ಗೆ ಸಂಗ್ರಹಿಸಿರುವ ಕೆಲವು ಮಾಹಿತಿ ಇಲ್ಲಿದೆ...

*ಜಗತ್ತಿನಲ್ಲಿ ಮನುಷ್ಯರಿಗಿಂತ ಇರುವೆಗಳ ಸಂಖ್ಯೆಯೇ ಹೆಚ್ಚಿದೆ. ಇದು ಹೇಗೆಂದರೆ ಒಂದು ತಕ್ಕಡಿಯಲ್ಲಿ ಜಗತ್ತಿನ ಎಲ್ಲ ಮನುಷ್ಯರನ್ನು ಮತ್ತು ಇರುವೆಗಳನ್ನು ಒಟ್ಟಿಗೇ ತೂಗಿದರೆ ಮನುಷ್ಯರು ಇರುವೆಗಳನ್ನು ತಲೆ ತಗ್ಗಿಸಿ ನೋಡಬೇಕಂತೆ. ಪ್ರತಿಯೊಬ್ಬ ಮನುಷ್ಯನಿತೆ 10 ಲಕ್ಷ ಇರುವೆಗಳಿವೆ.

*ಇರುವೆಗಳಿಗೆ ಕಿವಿ ಇಲ್ಲ. ಆದರೆ ಅದರ ಕಾಲೇ ಕಿವಿಗಳು ಇದ್ದಂತೆ. ಶಬ್ದಗಳ ಕಂಪನಗಳನ್ನು ತನ್ನ ಕಾಲಿನ ಮೂಲಕ ಅರಿತು ಎಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುತ್ತವೆ.

*ಇರುವೆಗಳಿಗೆ ಎರಡು ಹೊಟ್ಟೆಗಳಿವೆ. ಒಂದರಲ್ಲಿ ತಮಗೆ ಬೇಕಿರುವಷ್ಟು ಆಹಾರ ಸಂಗ್ರಹ ಮಾಡಿಟ್ಟುಕೊಂಡರೆ ಇನ್ನೊಂದರಲ್ಲಿ ಉಳಿದ ಇರುವೆಗಳಿಗೆ ಹಂಚಲು ಆಹಾರ ಸಂಗ್ರಹಿಸಿ ಇಟ್ಟುಕೊಳ್ಳುತ್ತವೆ.


*ಸಿಹಿ ಪದಾರ್ಥಗಳನ್ನು ಎಲ್ಲಿಯೇ ಅಡಗಿಸಿ ಇಟ್ಟರೂ ಇರುವೆಗಳ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಇವುಗಳಿಗೆ ಸಿಹಿ ತುಂಬಾ ಇಷ್ಟ. ತಮ್ಮ ವಿಶೇಷ ವಾಸನಾಗ್ರಂಥಿಯಿಂದ ಇವು ಸಿಹಿ ಪದಾರ್ಥಗಳನ್ನು ಹುಡುಕು ಬರುತ್ತವೆ. ಇವುಗಳ ಮೂಗು ತುಂಬ ಸೂಕ್ಷ್ಮ. ತಮ್ಮ ಆಹಾರ ಎಷ್ಟು ದೂರವಿದ್ದರು ಅದನ್ನು ಗ್ರಹಿಸಿ ಹುಡುಕಲು ಹೋಗುತ್ತವೆ.

*ಇರುವೆಗಳು ತನ್ನ ತೂಕಕ್ಕಿಂತ 50 ಪಟ್ಟಿನಷ್ಟು ಜಾಸ್ತಿ ಭಾರ ಎತ್ತುವ ಸಾಮರ್ಥ ಹೊಂದಿವೆ.

*ಗಂಡು ಇರುವೆಗಳು ಮಿಲನಕ್ಕೆ ಮಾತ್ರ ಸೀಮಿತ. ರಾಣಿ ಇರುವೆಯೊಂದಿಗಿನ ಮಿಲನ ಮಾಡಿದ ನಂತರ ಇವು ಸಾಯುತ್ತವೆ. ಆದರೆ ರಾಣಿ ಇರುವೆಗಳು ತುಂಬಾ ವರ್ಷ ಬದುಕುತ್ತವೆ.  ತಮ್ಮ ಜೀವಿತಾವಧಿಯಲ್ಲಿ  ಲಕ್ಷಾಂತರ ಮರಿಗಳಿಗೆ ಜನ್ಮ ನೀಡುತ್ತವೆ.

ಇರುವೆಗಳು ಒಂದು ಸಲ ಹೊಡೆದಾಡಲು ಶುರುವಿಟ್ಟುಕೊಂಡರೆ  ಒಂದು ಅಥವಾ ಎರಡೂ ಇರುವೆಗಳು ಸಾಯುವವರೆಗೂ ಮುಂದುವರಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT