ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಪ್‌ ಕಾಂಪೋಸ್ಟಿಂಗ್‌

ಎಣಿಕೆ ಗಳಿಕೆ-24
Last Updated 17 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮನೆಯಲ್ಲಿಯೇ ಮಾಡಿ ಗೊಬ್ಬರ
*ಪೈಪ್ ಒಳಗೆ ಕಸ ಹಾಕುವ ಮೊದಲು 1 ಕೆ.ಜಿ ಬೆಲ್ಲ ಮತ್ತು ಸೆಗಣಿ ನೀರನ್ನು ಹಾಕಬೇಕು. ಇದರಿಂದ ಜೈವಿಕ ಹುಳುಗಳು ಉತ್ಪತ್ತಿಯಾಗುತ್ತವೆ ಹಾಗೂ ತ್ಯಾಜ್ಯ ಬೇಗನೆ ಕೊಳೆತು ಗೊಬ್ಬರವಾಗಲು ಅನುಕೂಲ ಆಗುತ್ತದೆ. ನಂತರ ಮನೆಯಲ್ಲಿ ದಿನ ನಿತ್ಯ ಉತ್ಪತ್ತಿಯಾಗುವ ಬೇಡವಾದ ಜೈವಿಕ/ಹಸಿ ಕಸವನ್ನು ಹಾಕಬೇಕು. ಪ್ರತಿದಿನ ರಾತ್ರಿ ಕಡ್ಡಾಯವಾಗಿ ಒಂದು ಹಿಡಿ ಮಣ್ಣನ್ನು ಹಾಕಬೇಕು

* ಭೂಮಿಯಲ್ಲಿ ಕರಗದ ಯಾವುದೇ ವಸ್ತುಗಳನ್ನು ಪೈಪ್ ಒಳಗೆ ಹಾಕಬಾರದು. ವಾರಕ್ಕೊಮ್ಮೆ ಅರ್ಧ ಮಗ್ ನೀರು ಮತ್ತು ಒಂದು ಹಿಡಿ ಮಣ್ಣನ್ನು ಪೈಪ್‌ ಒಳಗೆ ಹಾಕಬೇಕು. ಪೈಪ್ ಮೇಲ್ಭಾಗವನ್ನು ಮರದ ತುಂಡು ಅಥವಾ ಹೆಂಚಿನಿಂದ ಮುಚ್ಚಬೇಕು

* ಮನೆಯಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಸುಮಾರು ಎರಡು ತಿಂಗಳಲ್ಲಿ ಒಂದು ಪೈಪ್ ತ್ಯಾಜ್ಯ ಭರ್ತಿಯಾಗುತ್ತದೆ. ಬಳಿಕ ಅಳವಡಿಸಲಾಗಿರುವ ಇನ್ನೊಂದು ಪೈಪ್‌ನಲ್ಲಿ ತ್ಯಾಜ್ಯ ಸುರಿಯಲು ಆರಂಭಿಸಬೇಕು. ಮೊದಲ ಪೈಪನ್ನು ಎರಡು ತಿಂಗಳು ಬಿಟ್ಟು ತೆಗೆದಾಗ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರ ಸಿಗುತ್ತದೆ

* ಈ ರೀತಿ ಕಾಂಪೋಸ್ಟಿಂಗ್ ಮೂಲಕ ಹಸಿ ಕಸವನ್ನು (ಅನ್ನ, ಮೀನು, ತರಕಾರಿ ಇತ್ಯಾದಿ) ಮನೆಯಲ್ಲಿಯೇ ಸುಲಭವಾಗಿ ಗೊಬ್ಬರ ಮಾಡಬಹುದು

* ಪೈಪ್ ಕಾಂಪೋಸ್ಟ್ ಉಪಯೋಗ- ತ್ಯಾಜ್ಯದ ಮೂಲದಲ್ಲಿಯೇ ನಿರ್ವಹಣೆ ಸಾಧ್ಯ. ಕಡಿಮೆ ಜಾಗ, ಕಡಿಮೆ ಖರ್ಚು, ಸರಳ ರೀತಿಯಲ್ಲಿ ಕಸ ನಿರ್ವಹಣೆ ಸಾಧ್ಯ. ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಬಳಸಬಹುದು. ಆರೋಗ್ಯಪೂರ್ಣ ಪರಿಸರ ನಿರ್ಮಾಣ ಸಾಧ್ಯ, ಪರಿಸರ ಮಾಲಿನ್ಯ ತಪ್ಪುತ್ತದೆ

* ಇಷ್ಟೇ ಅಲ್ಲದೇ ಸಾವಯವ ಗೊಬ್ಬರ ಬಳಕೆಯಿಂದ ಗಿಡಗಳಿಗೆ ಬರುವ ನುಸಿ ರೋಗವನ್ನು ಸಹ ತಡೆಗಟ್ಟಬಹುದಾಗಿದೆ.

ಎಚ್ಚರಿಕೆ
ನೀರು ನಿಲ್ಲುವ ಜಾಗದಲ್ಲಿ ಪೈಪ್ ನೆಡಬಾರದು. ಪೈಪ್‌ಗಳನ್ನು ಆದಷ್ಟು ಒಣವಾಗಿಟ್ಟುಕೊಳ್ಳಬೇಕು. ಸಾರು, ಗಂಜಿ ಇತ್ಯಾದಿ ದ್ರವ ಪದಾರ್ಥಗಳನ್ನು ಹಾಕಬಾರದು. ಪೈಪ್ ಒಳಗೆ ತೇವ ಹೆಚ್ಚಾದಾಗ ಮರದ ಪುಡಿ, ಒಣಎಲೆ ಪುಡಿ, ಬೂದಿ ಹಾಕಬಹುದು. ವಾರಕ್ಕೊಮ್ಮೆ ಒಂದು ಲೋಟ ಮಜ್ಜಿಗೆ ಹಾಕಿದರೆ ಉತ್ತಮ

* 6 ಇಂಚು ದಪ್ಪ 6 ಅಡಿ ಎತ್ತರದ ಸಿಮೆಂಟ್, ಮಣ್ಣಿನ ಅಥವಾ ಪಿವಿಸಿ ಪೈಪ್ ಅನ್ನು ಒಂದರಿಂದ ಒಂದೂವರೆ ಅಡಿ ಹೊಂಡ ಮಾಡಿ ಲಂಬವಾಗಿ ನೆಡಬೇಕು* 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT