ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಶಿಣದಲ್ಲಿದೆ ಆರೋಗ್ಯ

Last Updated 18 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಸುವಾಸನೆ ಭರಿತವಾದ ಅರಿಶಿಣವಿಲ್ಲದೆ ಅಡುಗೆ ಅಪೂರ್ಣವೆನ್ನಿಸುತ್ತದೆ. ಇದು ಆಹಾರ ಬಳಕೆಗೆ ಮಾತ್ರವಲ್ಲದೆ ಆರೋಗ್ಯ, ಸೌಂದರ್ಯವರ್ಧಕವಾಗಿಯೂ ಉಪಯೋಗಿಸಲಾಗುತ್ತದೆ. ಧಾರ್ಮಿಕ ವಿಧಿ–ವಿಧಾನಗಳೂ ಅರಿಶಿಣದ ಬಳಕೆಯಿಲ್ಲದೆ ನಡೆಯದು. ಬಹೂಪಯೋಗಿಯಾಗಿರುವ ಅರಿಶಿಣದ ಮಾಹಿತಿ ಇಲ್ಲಿದೆ.

ಬಹುಪಯೋಗಿ ಅರಿಶಿಣ
* ಸಾಂಬಾರು ಪುಡಿ ತಯಾರಿಸಲು, ಬಟ್ಟೆ ಕಾರ್ಖಾನೆಗಳಲ್ಲಿ ಬಣ್ಣ ಹಾಕಲು ಬಳಸಲಾಗುತ್ತದೆ.

* ಶೀತ, ಹಲ್ಲುನೋವು, ಗಾಯ, ಚರ್ಮದ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತದೆ.

* ಬಾಣಂತಿಯರು ಸ್ನಾನ ಮಾಡುವ ಮೊದಲು ಮೈಗೆ ಹಚ್ಚಿ ಸ್ನಾನ ಮಾಡಿಸುತ್ತಾರೆ.

* ಸೌಂದರ್ಯವರ್ಧಕವಾಗಿಯೂ ಇದನ್ನು ಬಳಸಲಾಗುತ್ತದೆ.

* ಮಂಗಳಕಾರ್ಯಗಳಿಗೂ ಇದರ ಬಳಕೆ ಮಾಡಲಾಗುತ್ತದೆ.

* ಕ್ರಿಮಿನಾಶಕ ಗುಣ ಹೊಂದಿರುವ ಅರಿಶಿಣದಿಂದ ಕ್ಯಾನ್ಸರನ್ನು ಗುಣಪಡಿಸಬಹುದೇ ಎಂದೂ ಸಂಶೋಧನೆಗಳು ನಡೆದಿವೆ.

* ಊರಿಯೂತ, ಹೃದಯ ಸಂಬಂಧಿ ಕಾಯಿಲೆ ನಿಯಂತ್ರಿಸಲು ಇದು ಸಹಾಯಕ.

* ಮುಖದ ಮೇಲಿನ ಬೇಡದ ಕೂದಲಿದ್ದರೆ ಪ್ರತಿದಿನ ಅರಿಶಿಣ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಉದುರುತ್ತದೆ.

ಬೆಳೆಯುವುದು ಹೇಗೆ?
ಹಲವು ಬಗೆಯ ಮಣ್ಣುಗಳಲ್ಲಿ ಅರಿಶಿಣವನ್ನು ಬೆಳೆಯಬಹುದು. ಆದರೆ ನೀರು ಚೆನ್ನಾಗಿ ಬಸಿದುಹೋಗುವಂತಹ ಸಾವಯವಯುಕ್ತ ಮರಳು ಮಿಶ್ರಿತ ಗೋಡು ಮತ್ತು ಕಪ್ಪು ಗೋಡು ಮಣ್ಣು ಉಪಯುಕ್ತ. ಇದನ್ನು ಬೆಳೆಯಲು ಗಾಳಿಯಲ್ಲಿ ಹೆಚ್ಚು ತೇವಾಂಶವಿರುವ ಉಷ್ಣಭರಿತ ವಾತಾವರಣ ಇರಬೇಕು.

ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಇದನ್ನು ಮಳೆ ಆಶ್ರಯದಲ್ಲಿ ಬೆಳೆಯಲಾಗುತ್ತದೆ. ನೀರಾವರಿ ಪ್ರದೇಶಗಳಲ್ಲಿಯೂ ಬೆಳೆಯಬಹುದು. ಸುಮಾರು ಏಳರಿಂದ ಒಂಬತ್ತು ತಿಂಗಳಿನಲ್ಲಿ ಅರಿಶಿಣ ಕೊಯ್ಲಿಗೆ ಬರುತ್ತದೆ. ಕೊಯ್ಲಿಗೆ ನಾಲ್ಕರಿಂದ ಐದು ದಿವಸಕ್ಕೆ ಮೊದಲು ಒಣಗಿದ ಎಲೆ ಮತ್ತು ಕಾಂಡದ ಭಾಗಗಳು ತೆಗೆದು ನೀರು ಹರಿಸಬೇಕು. ನಂತರ ಗಡ್ಡೆಗಳಿಗೆ ಹಾನಿಯಾಗದಂತೆ ಅವುಗಳನ್ನು ಅಗೆದು ತೆಗೆಯಬೇಕು.

ಅಂಕಿ–ಅಂಶ
* 2000 ವರ್ಷಗಳಿಂದಲೂ ಆಹಾರಪದಾರ್ಥದಲ್ಲಿ ಮತ್ತು ಔಷಧದ ರೂಪದಲ್ಲಿ ಇದರ ಬಳಕೆಯಾಗುತ್ತಲಿದೆ.

* ಒಂದು ಎಕರೆ ಅರಿಶಿಣ ಬೆಳೆಯಲು  ಅಂದಾಜು  20 ಕ್ವಿಂಟಲ್‌ ಬೀಜ ಬೇಕಾಗುತ್ತದೆ.

* ಪ್ರಪಂಚದಲ್ಲಿ ಬಳಕೆಯಾಗುವ ಅರಿಶಿಣದಲ್ಲಿ ಶೇ. 80 ಭಾರತದಲ್ಲಿಯೇ ಉತ್ಪಾದನೆಯಾಗುತ್ತದೆ.

* ಸಮುದ್ರಮಟ್ಟದಿಂದ 1500 ಮೀ. ಎತ್ತರದ ಪ್ರದೇಶ, 1500–2200ಮಿ.ಮೀ ಮಳೆ ಬೀಳುವ ಪ್ರದೇಶದಲ್ಲಿ  ಉತ್ತಮವಾಗಿ ಕೃಷಿ ಮಾಡಬಹುದು.

* ವರ್ಷಕ್ಕೆ ಸುಮಾರು 40 ಸಾವಿರ ಟನ್‌ ಅರಿಶಿಣವನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ.

ಅರಿಶಿಣದ ವಿಧಗಳು
* ಸೇಲಂ– ತಮಿಳುನಾಡು
* ಅಲೆಪ್ಪಿ–ಕೇರಳ
* ಸಾಂಗ್ಲಿ–ಮಹರಾಷ್ಟ್ರ
* ಸುಗಂಧಮ್–ಆಂಧ್ರಪ್ರದೇಶ

ಅರಿಶಿಣದ ವಿಶೇಷ
ಅರಿಶಿಣದಲ್ಲಿ ಕರ್ಕ್ಯುಮಿನ್‌ ಎಂಬ ರಾಸಾಯನಿಕ ವಸ್ತುವಿದೆ. ಈ ರಾಸಾಯನಿಕ ಸಾಕಷ್ಟು ರೋಗ ನಿವಾರಣೆಗೆ ರಾಮಬಾಣವಾಗಿದೆ.

ವಿವಿಧ ಭಾಷೆಗಳಲ್ಲಿ
* ಇಂಗ್ಲಿಷ್‌ : ಟರ್ಮರಿಕ್‌
* ಹಿಂದಿ : ಹಳದಿ
* ತೆಲುಗು:  ಪಸುಪು 
* ಬೆಂಗಾಲಿ: ಹಲುದಾ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT