ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ವರ್ಡ್‌ಗಳ ಸುರಕ್ಷತೆಗೆ ಆ್ಯಪ್‌ ನೆರವು

Last Updated 18 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಬಯಲಿಗೆ ಬಂದ  ಮಾಹಿತಿ ಪ್ರಕಾರ 2014 ರಲ್ಲಿ   ಯಾಹೂ ಸಂಸ್ಥೆಯ  50 ಕೋಟಿ ಬಳಕೆದಾರರ ಖಾತೆಯ ಪಾಸ್‌ವರ್ಡ್‌ಗಳು (ರಹಸ್ಯ ಸಂಖ್ಯೆ) ಕಳುವಾಗಿದ್ದವು.

ಡಿಜಿಟಲ್‌ ಯುಗದಲ್ಲಿ ಜೀವಿಸುತ್ತಿರುವ ನಮಗೆ ಈ ಸುದ್ದಿ ಎಚ್ಚರಿಕೆಯ ಗಂಟೆಯಾಗಿದೆ. ಪಾಸ್‌ವರ್ಡ್‌ಗಳನ್ನು ಜೋಪಾನ ಮಾಡುವಲ್ಲಿ ಎಲ್ಲರೂ ಜಾಣ್ಮೆ ತೋರಬೇಕಾಗಿದೆ.ನಮ್ಮ ಸ್ಮಾರ್ಟ್‌ಫೋನ್‌ಗಳ ಬಗೆಗೂ ಅಷ್ಟೇ ಕಾಳಜಿ ವಹಿಸಬೇಕಿದೆ. ಯಾಕೆಂದರೆ, ಸ್ಮಾರ್ಟ್‌ಫೋನ್‌ ಇಂದು ಎಲ್ಲ ಮಾಹಿತಿಯ ಸ್ಟೋರ್‌ರೂಂ ಆಗಿಬಿಟ್ಟಿದೆ.

ನಮ್ಮ ಎಲ್ಲ ವೈಯಕ್ತಿಕ ಮಾಹಿತಿಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ದಾಖಲಿಸುತ್ತಿದ್ದೇವೆ. ಹೀಗಾಗಿ, ಅದಕ್ಕೊಂದು ಗಟ್ಟಿ ಪಾಸ್‌ವರ್ಡ್‌ ಕೊಡಿ. ಆದರೆ ಒಂದೇ ಪಾಸ್‌ವರ್ಡ್‌ಅನ್ನು ಬೇರೆ ಬೇರೆ ಸೇವೆಗಳಿಗೆ ಬಳಸಬೇಡಿ. ಫೇಸ್‌ಬುಕ್‌, ಜಿಮೇಲ್‌, ಯಾಹೂ,  ಹೀಗೆ ಅದೆಷ್ಟೊ ಅಂತರ್ಜಾಲ ತಾಣಗಳು ಲಭ್ಯ ಇವೆ.

ಎಲ್ಲದರ ಅಗತ್ಯವೂ ಇದೆ. ಆದರೆ, ಪ್ರತಿಯೊಂದಕ್ಕೂ ಭಿನ್ನ ಪಾಸ್‌ವರ್ಡ್‌ ಕೊಟ್ಟರೆ ನೆನಪಿಡುವುದು ಹೇಗೆ? ಈ ಯೋಚನೆ ಬರುವುದು ಸಹಜ. ಅದೃಷ್ಟವಶಾತ್‌, ಈಗ ಪಾಸ್‌ವರ್ಡ್‌ ತುಂಬಿಡಲೆಂದೇ  ಆ್ಯಪ್‌ಗಳಿವೆ. ಆಗ ಎಲ್ಲ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಗೋಜಿಲ್ಲ.

ಡ್ಯಾಷ್‌ಲೇನ್‌ (Dashlane) ಈ ಆ್ಯಪ್‌ ಅನ್ನು ಐಒಎಸ್‌ ಮತ್ತು ಆಂಡ್ರಾಯ್ಡ್‌ ಮೊಬೈಲ್‌ಗಳಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪಾಸ್‌ವರ್ಡ್‌ ಸುರಕ್ಷತೆಗೆ ಇದೊಂದು ಅದ್ಭುತ ಆ್ಯಪ್‌! ಈ ಆ್ಯಪ್‌ ಅವಶ್ಯಕವಾಗಿ ನಿಮ್ಮ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳಲು ಡಿಜಿಟಲ್‌ ಭದ್ರಪೆಟ್ಟಿಗೆಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಆ್ಯಪ್‌ಗೆ ಮೊದಲು ಒಂದು ಗಟ್ಟಿ ಪಾಸ್‌ವರ್ಡ್‌ ಕೊಡಬೇಕು. ನೀವು ಕೊಟ್ಟ ಪಾಸ್‌ವರ್ಡ್‌ ಮೂಲಕ ಆ್ಯಪ್‌ನ ಬಾಗಿಲು ತೆರೆದರೆ, ಅಲ್ಲಿ ಕೂಡಿಟ್ಟ ಇತರ ಎಲ್ಲ ಪಾಸ್‌ವರ್ಡ್‌ಗಳು ನಿಮಗೆ ಲಭ್ಯ.

ಅಂದರೆ, ‘123456’ ಅಂತಹ  ಪಾಸ್‌ವರ್ಡ್‌ ಕೊಟ್ಟರೆ, ಅದನ್ನು ಹ್ಯಾಕರ್ಸ್‌ಗಳು ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಅದರ ಬದಲು ಸಂಕೀರ್ಣ ಪಾಸ್‌ವರ್ಡ್ ಕೊಡುವ ಮೂಲಕ ಹ್ಯಾಕಿಂಗ್‌ ತಡೆಗಟ್ಟಬಹುದು. ನೀವು ಕೊಡುವ ಪಾಸ್‌ವರ್ಡ್ ಗಟ್ಟಿಯಾಗಿದೆಯೇ,  ಇದ್ದರೆ ಎಷ್ಟರ ಮಟ್ಟಿಗೆ ಅದು ಗಟ್ಟಿ, ಸಂಖ್ಯೆ, ಇನ್ನಿತರ ಸಂಜ್ಞೆಗಳನ್ನು ಪಾಸ್‌ವರ್ಡ್‌ಗೆ ಸೇರಿಸುವ ಅಗತ್ಯ ಇದೆಯೇ ? ಎಂದು ಡ್ಯಾಷ್‌ಲೇನ್‌ ಆ್ಯಪ್‌ ಬಳಕೆದಾರನಿಗೆ ತಿಳಿಸುತ್ತದೆ. ನೀವು ನೀಡುವ ಪಾಸ್‌ವರ್ಡ್‌ಗೂ ಬೇರೆ ವ್ಯಕ್ತಿಯ ಪಾಸ್‌ವರ್ಡ್‌ಗೂ  ಹೋಲಿಕೆ ಕಂಡು ಬಂದಲ್ಲಿ ಕೂಡಲೇ ತಿಳಿಸುತ್ತದೆ.

ಡ್ಯಾಷ್‌ಲೇನ್‌ ತನ್ನೊಳಗೆ ಜಾಲತಾಣವನ್ನು ಒಳಗೊಂಡಿದೆ. ಅದರಲ್ಲಿ ಬೇಕೆಂದರೆ, ಖರೀದಿ, ಬ್ಯಾಂಕ್‌ ವ್ಯವಹಾರ ನಡೆಸಬಹುದು. ಈ ಆ್ಯಪ್‌ ಮೂಲಕ ಸುರಕ್ಷಿತವಾಗಿ ಪಾಸ್‌ವರ್ಡ್‌ನ ಹಂಚಿಕೆ ಮಾಡಬಹುದು. ಮತ್ತಷ್ಟು ಉನ್ನತೀಕರಿಸಿದ ಮಾದರಿಯೂ ಇದೆ. ಇದರಲ್ಲಿ ಕ್ಲೌಡ್‌ ಆಧಾರಿದ ಪಾಸ್‌ವರ್ಡ್‌ ಮಾಹಿತಿ ಇರುತ್ತದೆ, ಮತ್ತೊಂದು ಸಾಧನದೊಂದಿಗೆ ಪಾಸ್‌ವರ್ಡ್‌ ಹಂಚಿಕೊಂಡಲ್ಲಿ ಸುರಕ್ಷಿತವಾಗಿರುತ್ತದೆ. ಇದರ ಬೆಲೆ 40 ಡಾಲರ್‌.

ಡ್ಯಾಷ್‌ಲೇನ್‌ ಆ್ಯಪ್‌ ದುಬಾರಿ ಮತ್ತು ವ್ಯವಹಾರಸ್ಥರಿಗೆ ಸರಿಹೊಂದುತ್ತದೆ, ಸಾಮಾನ್ಯ ಕೆಲಸಗಳಿಗೆ ಅಲ್ಲ ಎನಿಸಿದರೆ, ಕೀಪರ್ (Keeper) ಆ್ಯಪ್‌ ಬಳಸಬಹುದು. ಇದು ಐಒಎಸ್ ಮತ್ತು ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಉಚಿತ. ಈ ಆ್ಯಪ್‌ ಸಹ ಡ್ಯಾಷ್‌ಲೇನ್‌ನಂತೆ ಪಾಸ್‌ವರ್ಡ್‌ಗಳನ್ನು ತಂತಾನೆ ಸೃಷ್ಟಿಸುತ್ತದೆ ಮತ್ತು ಅವುಗಳನ್ನು ಸುರಕ್ಷಿತವಾಗಿಡುತ್ತದೆ.

ಆದರೆ, ಕೀಪರ್ ಆ್ಯಪ್‌ನಲ್ಲಿ ನೀವು ವೈಯಕ್ತಿಕ ಕೆಲಸಕ್ಕೆ ಮತ್ತು ಕಚೇರಿ ಕೆಲಸಗಳಿಗೆಂದು ಪ್ರತ್ಯೇಕವಾಗಿ ಪಾಸ್‌ವರ್ಡ್‌ಗಳನ್ನು ಇಡಲು ಸಾಧ್ಯವಿದೆ. ಇದರ ಜೊತೆಗೆ ಆ್ಯಪಲ್‌ನ ಸ್ಮಾರ್ಟ್‌ವಾಚ್‌ಗೆ ಈ ಕೀಪರ್‌ ಆ್ಯಪ್‌ನ ಸಂಪರ್ಕ ಕಲ್ಪಿಸಬಹುದು. ಹೀಗೆ ಸಂಪರ್ಕ ಕಲ್ಪಿಸುವುದರಿಂದ ಮೊಬೈಲ್‌ ಕಳವು ಆದರೆ ವಾಚ್‌ ಮೂಲಕ ಮೊಬೈಲ್‌ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

ಡ್ಯಾಷ್‌ಲೇನ್‌ ಆ್ಯಪ್‌ನಲ್ಲಿ ತಂತಾನೆ ಪಾಸ್‌ವರ್ಡ್‌ ಕೊಡುವ ಸೌಲಭ್ಯ ಇದೆ, ಆದರೆ ಕೀಪ್‌ರ್‌ನಲ್ಲಿ ಆ ಸೌಲಭ್ಯ ಇಲ್ಲ. ಆ ಬಗೆಯ ಸೌಲಭ್ಯ ಕೀಪರ್‌ನಲ್ಲಿ ಬೇಕೆಂದು 10 ಡಾಲರ್‌ ತೆತ್ತು ಪಡೆಯಬೇಕು. ಇನ್ನೂ ಹೆಚ್ಚಿನ ಸೌಲಭ್ಯವಿರುವ ಆ್ಯಪ್‌ಗಳೂ ಇವೆ. ಅವುಗಳಲ್ಲಿ ‘1ಪಾಸ್‌ವರ್ಡ್‌’ (1Password) ಉತ್ತಮವಾದ ಆ್ಯಪ್‌ ಆಗಿದೆ. ಆಂಡ್ರಾಯ್ಡ್‌ ಮತ್ತು ಐಒಸಿಯಲ್ಲಿ  ಸಿಗಲಿದೆ.  ಲಾಸ್ಟ್‌ಪಾಸ್‌ (LastPass), ಐಒಎಸ್‌ ಮತ್ತು ಆಂಡ್ರಾಯ್ಡ್‌ನಲ್ಲಿ ಲಭ್ಯವಿರುವ ಜನಪ್ರಿಯ ಆ್ಯಪ್‌. ಈ ಆ್ಯಪ್‌ನಿಂದ ಕ್ರೆಡಿಟ್‌ ಕಾರ್ಡ್ ನಂತಹ ಸಂಖ್ಯೆಗಳನ್ನು ಸುರಕ್ಷಿವಾಗಿ ಇಡಬಹುದು.

ನೀವೇನಾದರು ಆಂಡ್ರಾಯ್ಡ್‌ನ ಬಳಕೆದಾರರಾಗಿದ್ದರೆ, ಕೀಪಾಸ್‌ಡ್ರಾಯ್ಡ್‌ (KeePassDroid) ಅನ್ನು ಒಮ್ಮೆ ಬಳಸಿ. ಇದರಲ್ಲಿ ಪಾಸ್‌ವರ್ಡ್‌ನ ನಿರ್ವಹಣೆ ಉಚಿತವಿದ್ದು, ಸರಳವಾಗಿದೆ. ಗುಂಟೈ (Guntai) ಇದು ಐಒಎಸ್‌ನಲ್ಲಿರುವ ಹೊಸ ಆಟ (ಗೇಮ್‌). ಈ ಆಟದಲ್ಲಿ ನೀವು ಆಕಾಶದಲ್ಲಿ ದಂಡಿಯಾಗಿ ಹಾರುವ ನೂರಾರು ಪಕ್ಷಿಗಳನ್ನು ನಿಯಂತ್ರಿಸಬಹುದು. ಸುಂದರ ಗ್ರಾಫಿಕ್ಸ್‌, ಆಟದ ಸರಳತೆ ಎಲ್ಲರಿಗೂ ಇಷ್ಟವಾಗಲಿದೆ.

ಇದರ ಬೆಲೆ 4 ಡಾಲರ್. ಮೀಟ್‌ಅಪ್‌ (Meetup) ಎಂಬ ಸಾಮಾಜಿಕ ಜಾಲತಾಣದ ಆ್ಯಪ್‌ ಇದೆ. ಇದು ಬಳಕೆದಾರನು ವಿವಿಧ ವ್ಯಕ್ತಿಗಳನ್ನು ಆ್ಯಪ್‌ ಮೂಲಕ ಭೇಟಿಯಾಗಿ, ಸಂವಹನ ನಡೆಸಲು ಉತ್ತೇಜಿಸುತ್ತದೆ. ನಿಮ್ಮ ಆಸಕ್ತಿಗಳ ಆಧಾರದ ಮೇಲೆ ಯಾವ ಬಗೆಯ ಜನರನ್ನು ನೀವು ಸಂಪರ್ಕಿಸಬಹುದೆಂದು ಈ ಆ್ಯಪ್‌ ಶಿಫಾರಸ್ಸು ಮಾಡುತ್ತದೆ. ಇದು ಐಒಎಸ್‌ ಮತ್ತು ಆ್ಯಂಡ್ರಾಯ್ಡ್‌ನಲ್ಲಿ ಉಚಿತ.

(ಕಿಟ್‌ ಈಟನ್‌ ನ್ಯೂ ಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT