ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಫೈನ್ಸ್‌ ನಲ್ಲಿ ವಿದ್ಯಾರ್ಥಿಗಳ ಮೇಲೆ ಅಡ್ಡಾದಿಡ್ಡಿ ಹರಿದ ಪೊಲೀಸರ ವ್ಯಾನ್‌

Last Updated 19 ಅಕ್ಟೋಬರ್ 2016, 11:15 IST
ಅಕ್ಷರ ಗಾತ್ರ
ADVERTISEMENT

ಮನಿಲಾ: ಫಿಲಿಫೈನ್ಸ್‌ ರಾಜಧಾನಿ ಮನಿಲಾದಲ್ಲಿ ಅಮೆರಿಕ ರಾಯಭಾರಿ ಕಚೇರಿ ಮುಂದೆ ವಿದ್ಯಾರ್ಥಿಗಳು  ಪ್ರತಿಭಟನೆ ನಡೆಸುತ್ತಿದ್ದಾಗ   ಫಿಲಿಫೈನ್ಸ್‌ ಪೊಲೀಸರಿದ್ದ ವ್ಯಾನ್‌ ವಿದ್ಯಾರ್ಥಿಗಳ ಮೇಲೆ ಅಡ್ಡಾದಿಡ್ಡಿ ಹರಿದ ಪರಿಣಾಮ ಮೂವರು ಮೃತಪಟ್ಟು ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. 

ವಿದ್ಯಾರ್ಥಿಗಳ ಮೇಲೆ ವ್ಯಾನ್‌ ಹರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅಮೆರಿಕದ ವೀಸಾ ನೀತಿಯನ್ನು ವಿರೋಧಿಸಿ ಫಿಲಿಫೈನ್ಸ್‌ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ಜರುಗಿದೆ.

ಪೊಲೀಸರು ಉದ್ದೇಶ ಪೂರ್ವಕವಾಗಿಯೇ ಪ್ರತಿಭಟನೆ ವೇಳೆ ವ್ಯಾನ್‌ ಹರಿಸಿದ್ದಾರೆ ಎಂದು  ವಿದ್ಯಾರ್ಥಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT