ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ನಲ್ಲಿ ವೇಗದ ಓದಿಗೆ ಎಎಂಪಿ

ತಂತ್ರೋಪನಿಷತ್ತು
Last Updated 19 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮೊಬೈಲ್‌ ಡಿವೈಸ್‌ಗಳ ಮೂಲಕ ಸುದ್ದಿ, ಲೇಖನಗಳನ್ನು ವೇಗವಾಗಿ ಹಾಗೂ ಸರಳವಾಗಿ ಓದಲು ‘ಎಎಂಪಿ’ (Accelerated Mobile Pages) ಸಹಾಯಕ. ಕನ್ನಡದಲ್ಲಿ ಸರಳವಾಗಿ ಇದನ್ನು ‘ವೇಗವರ್ಧಿತ ಮೊಬೈಲ್‌ ಪುಟ’ ಎಂದು ಕರೆಯಬಹುದು.

ಲೇಖನದ ಮೂಲ ವೆಬ್‌ಸೈಟ್‌ಗೆ ಹೋಗದೆ, ಬ್ರೌಸರ್‌ ಮೂಲಕ ಬೇಕೆಂದ ಸುದ್ದಿ, ಲೇಖನಗಳನ್ನು ಎಎಂಪಿ ಮೂಲಕ ಬೇಗ ಓದಬಹುದು. ಸುದ್ದಿ ಅಥವಾ ಲೇಖನಗಳ ಆನ್‌ಲೈನ್‌ ಆವೃತ್ತಿಯನ್ನು ಮೊಬೈಲ್‌ ಮೂಲಕ ಸರಳವಾಗಿ ಓದಲು ಹಾಗೂ ಶೇರ್‌ ಮಾಡಲು ಎಎಂಪಿ ಒಂದು ಹೊಸ ಮಾರ್ಗ. ಇನ್‌ಸ್ಟಂಟ್‌ ಸುದ್ದಿ, ಲೇಖನಗಳನ್ನು ಬ್ರೌಸರ್‌ ಮೂಲಕ ಬೇಗ ತೆರೆಯಬಹುದು. ಇನ್‌ಸ್ಟಂಟ್‌ ಲೇಖನಗಳ ಓದಿಗೆ ಎಎಂಪಿ ವ್ಯವಸ್ಥೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.

ಉದಾಹರಣೆಗೆ, ನೀವು ನಿಮ್ಮ ಸ್ಮಾರ್ಟ್‌ಫೋನ್‌ ಮೂಲಕ ಕ್ರೋಮ್‌ ಬ್ರೌಸರ್‌ ತೆರೆದು ಸರ್ಚ್‌ ಲೈನ್‌ನಲ್ಲಿ prajavani ಎಂದು ಕ್ಲಿಕ್ಕಿಸಿದರೆ ‘ಪ್ರಜಾವಾಣಿ’ಯ ಆನ್‌ಲೈನ್‌ ಆವೃತ್ತಿಯ ಇನ್‌ಸ್ಟಂಟ್‌ ಸುದ್ದಿ, ಲೇಖನಗಳ ಎಎಂಪಿ ಪುಟಗಳು ಕಾಣಿಸಿಕೊಳ್ಳುತ್ತವೆ. ನೀವು ಕ್ಲಿಕ್‌ ಮಾಡಿದ ಸುದ್ದಿಯ ಪುಟ ಮಾತ್ರ ಬ್ರೌಸರ್‌ನಲ್ಲಿ ತೆರೆದುಕೊಳ್ಳುತ್ತದೆ.

ಸಾಮಾನ್ಯವಾಗಿ ಬ್ರೌಸರ್‌ ಮೂಲಕ www.prajavani.netಗೆ ಹೋಗಿ ‘ಪ್ರಜಾವಾಣಿ’ ವೆಬ್‌ಸೈಟ್‌ ತೆರೆದು ಸುದ್ದಿ ಓದುವುದಕ್ಕಿಂತ ಬೇಗನೆ ಎಎಂಪಿ ಮೂಲಕ ಸುದ್ದಿ ಓದಬಹುದು. ಇಲ್ಲಿ ಮೂಲ ವೆಬ್‌ಸೈಟ್‌ನ ಮೊಬೈಲ್‌ ಆವೃತ್ತಿಯ ಮೂಲಕ ಪುಟ ತೆರೆದುಕೊಳ್ಳುವುದರಿಂದ ಬ್ರೌಸರ್‌ನಲ್ಲಿ ಪುಟ ಲೋಡ್‌ ಆಗುವುದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳದು.

ಫೇಸ್‌ಬುಕ್‌ ಆ್ಯಪ್‌ ಮೂಲಕವೂ ಇನ್‌ಸ್ಟಂಟ್‌ ಲೇಖನಗಳನ್ನು ತೆರೆಯಬಹುದು. ಫೇಸ್‌ಬುಕ್‌ ಆ್ಯಪ್‌ನಲ್ಲಿ  ಫ್ಲ್ಯಾಷ್‌ ಐಕಾನ್‌ ಬಂದಿರುವ ಸುದ್ದಿ, ಲೇಖನಗಳು ಇನ್‌ಸ್ಟಂಟ್‌ ಆಗಿರುತ್ತವೆ. ಈ ಲೇಖನಗಳೂ ಎಎಂಪಿ ವ್ಯವಸ್ಥೆಯ ಮೂಲಕವೇ ತೆರೆದುಕೊಳ್ಳುತ್ತವೆ.

ಉದಾಹರಣೆಗೆ, ನೀವು ಫೇಸ್‌ಬುಕ್‌ ಆ್ಯಪ್‌ ಮೂಲಕ ‘ಪ್ರಜಾವಾಣಿ’ ಪುಟಕ್ಕೆ ಹೋದರೆ ಅಲ್ಲಿ ಫ್ಲ್ಯಾಷ್‌ ಐಕಾನ್‌ ಬಂದಿರುವ ಲೇಖನಗಳ ಕೊಂಡಿ ಎಎಂಪಿ ಮೂಲಕ ತೆರೆದುಕೊಳ್ಳುತ್ತದೆ. ಈ ಪುಟದ ಮೇಲೆ ಬಲಭಾಗದಲ್ಲಿರುವ SHARE ಕ್ಲಿಕ್ಕಿಸುವ ಮೂಲಕ ಈ ಪುಟವನ್ನು ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌,ಇ-ಮೇಲ್‌ ಮೂಲಕ ಹಂಚಿಕೊಳ್ಳಬಹುದು. ಇದೇ ಲಿಂಕ್‌ ಅನ್ನು ಬ್ರೌಸರ್‌ ಮೂಲಕವೂ ತೆರೆಯುವ ಆಯ್ಕೆ ಇಲ್ಲಿರುತ್ತದೆ.

ಇನ್‌ಸ್ಟಂಟ್‌ ಲೇಖನಗಳು ಬೇಗನೆ ತೆರೆದುಕೊಳ್ಳುವುದರಿಂದ ಡೇಟಾ ಕೂಡ ಹೆಚ್ಚು ವ್ಯಯವಾಗದು. ಸಮಯ, ಡೇಟಾ ಎರಡನ್ನೂ ಉಳಿಸುವ ಇನ್‌ಸ್ಟಂಟ್‌ ಲೇಖನಗಳ ಓದೂ ಇತ್ತೀಚೆಗೆ ಹೆಚ್ಚಾಗುತ್ತಿದೆ. ಒಮ್ಮೆ ನೀವೂ ಇನ್‌ಸ್ಟಂಟ್‌ ಲೇಖನ ಓದಿ ನೋಡಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT