ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್‌ಸಿಜಿ ಆಸ್ಪತ್ರೆಯಿಂದ ‘ಸೆಲ್ಫ್‌ ವಿಡಿಯೊ’ ಸ್ಪರ್ಧೆ

Last Updated 20 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸರ್‌ ಪೀಡಿತರ ಮನೋಸ್ಥೈರ್ಯ ಹೆಚ್ಚಿಸಲು ಕ್ಯಾನ್ಸರ್‌ನಿಂದ ಗುಣಮುಖರಾದವರ ಅನುಭವಗಳನ್ನು ಹೇಳಿಕೊಳ್ಳುವ ‘ಸೆಲ್ಫ್‌ ವಿಡಿಯೊ’ ರಚಿಸುವ  ಸ್ಪರ್ಧೆಯ ಮೂರನೇ ಆವೃತ್ತಿಗೆ ಹೆಚ್‌ಸಿಜಿ  ಕ್ಯಾನ್ಸರ್ ಆಸ್ಪತ್ರೆ ಚಾಲನೆ ನೀಡಿದೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್‌ಸಿಜಿ ಸಿಇಒ ಡಾ. ಬಿ.ಎಸ್. ಅಜಯ್‌ಕುಮಾರ್‌, ‘ಕ್ಯಾನ್ಸರ್‌ನಿಂದ ಗೆದ್ದು ಬಂದವರು 1 ನಿಮಿಷದ ವಿಡಿಯೊ ಮಾಡಿ ಅದನ್ನು‘ಸೆಲ್ಫ್‌ವಿ’ ಹೆಸರಲ್ಲಿ ಫೆಸ್‌ಬುಕ್‌ನಲ್ಲಿ facebook.com/hcghospitals ಮತ್ತು www.selfv.inನಲ್ಲಿ ಅಪ್‌ಲೋಡ್ ಮಾಡಬಹುದು’ ಎಂದು ವಿವರಿಸಿದರು.

‘ಇಲ್ಲಿ ಅಪ್‌ಲೋಡ್ ಮಾಡುವ ವಿಡಿಯೊಗಳನ್ನು ಪರಿಶೀಲಿಸಿ ಅವುಗಳನ್ನು 2016ರ ಸೆಲ್ಫ್‌ವಿ ಗ್ರ್ಯಾಂಡ್ ಫೈನಲ್‌ಗೆ ಆಯ್ಕೆ ಮಾಡಲಾಗುತ್ತದೆ. ನವೆಂಬರ್ ಅಂತ್ಯದವರೆಗೆ ವಿಡಿಯೊಗಳನ್ನು ಅಪ್‌ಲೋಡ್ ಮಾಡಲು ಅವಕಾಶವಿದೆ’ ಎಂದರು.

‘ಸೆಲ್ಫ್‌ವಿ ಅಂತಿಮ ಘಟ್ಟ ತಲುಪುವವರಿಗೆ ಬಹುಮಾನವಾಗಿ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕ್, ವಿದೇಶ ಪ್ರವಾಸ, ಎಲ್‌ಇಡಿ ಟಿವಿ ಮತ್ತು ಡಿಸೈನರ್ ಬಟ್ಟೆಗಳು ಹಾಗೂ ಸ್ಮಾರ್ಟ್ ಫೋನ್‌ ನೀಡಲಾಗುವುದು’ ಎಂದು ತಿಳಿಸಿದರು.

‘ಹೆಚ್‌ಸಿಜಿ ಹಾಗೂ ಪಿಂಕ್ ಹೋಪ್ ಸಪೋರ್ಟ್ ಗ್ರೂಪ್, ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ರೋಗಿಗಳಲ್ಲಿ ಅರಿವು ಮೂಡಿಸುವುದು ಹಾಗೂ ಇತರೆ ಕ್ಯಾನ್ಸರ್‌ನಿಂದ ಬದುಕುಳಿದಿರುವವರು ತಮ್ಮ ಕಥೆಗಳನ್ನು ಹಂಚಿಕೊಳ್ಳುವುದನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT