ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಾಶಯದಲ್ಲಿ ಅಡೆತಡೆ

Last Updated 21 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಜನನಾಂಗದ ಸಹಜ ಕಾರ್ಯವೈಖರಿಗೆ ತಡೆ ಉಂಟು ಮಾಡುವ ಬೆಳವಣಿಗೆ, ಗರ್ಭಾಶಯದಲ್ಲಿ ಅನಗತ್ಯ ಗಂಟುಗಳು ಕಂಡು ಬರುವುದು ಕ್ರಮೇಣ ರೋಗಕ್ಕೂ ಕಾರಣವಾಗಬಹುದು. ಸಂಭೋಗದ ಸಮಯದಲ್ಲಿ ವಿಪರೀತ ನೋವು, ಋತುಸ್ರಾವದಲ್ಲಿ ವಿಪರೀತ ಸುಸ್ತು– ಸಂಕಟ, ಬಂಜೆತನ, ಪದೇಪದೆ ಗರ್ಭಪಾತವಾಗುವುದು, ಅವಧಿ ಪೂರ್ವ ಪ್ರಸವದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಜನನಾಂಗದ ಸಮಸ್ಯೆಗಳನ್ನು ಜನ್ಮಜಾತ ಮತ್ತು ಕಾಲಾನುಕ್ರಮದಲ್ಲಿ ಕಾಣಿಸಿಕೊಂಡ ಸಮಸ್ಯೆಗಳು ಎಂದು ವಿಂಗಡಿಸಬಹುದು. ಸಮಸ್ಯೆಗಳನ್ನು ಈಗ ಅಲ್ಟ್ರಾಸೌಂಡ್ ಮತ್ತು ಎಂಆರ್‌ಐ ಪರೀಕ್ಷೆಗಳ ನೆರವಿನಿಂದ ನಿಖರವಾಗಿ ಪತ್ತೆ ಮಾಡಬಹುದಾಗಿದೆ. ಗರ್ಭಾಶಯದ ಒಳಪದರ ಜಾರುವ ಸಮಸ್ಯೆಗೆ ‘ಅಡೆನೊಮ್ಯುಸಿಸ್‌’ ಎನ್ನುತ್ತಾರೆ. ಬಂಜೆತನದ ಸಮಸ್ಯೆಯಿಂದ ಬಳಲುವ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿರಬಹುದು ಎಂದು ವೈದ್ಯರು ಶಂಕಿಸುತ್ತಾರೆ.

ತುಸು ವಯಸ್ಸಾದ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತೆ. ಋತುಸ್ರಾವದ ಸಂದರ್ಭ ವಿಪರೀತ ಸಂಕಟ ಮತ್ತು ಸಂಭೋಗದ ವೇಳೆ ವಿಪರೀತ ನೋವು– ಉರಿಯನ್ನು ‘ಅಡೆನೊಮ್ಯುಸಿಸ್‌’ನಿಂದ ಬಳಲುತ್ತಿರುವ ಮಹಿಳೆಯರು ಅನುಭವಿಸುತ್ತಾರೆ. ಸಂಭೋಗ ಯಶಸ್ವಿಯಾಗಲು ಸಂತೃಪ್ತಿಯೂ ಮುಖ್ಯ. ಇದು ಸಾಧ್ಯವಾಗದೆ, ಮಗು ಪಡೆಯುವ ಅವಕಾಶದಿಂದ ದಂಪತಿ ಪರಿತಪಿಸಬೇಕಾಗುತ್ತದೆ.

ಗರ್ಭಾಶಯದೊಳಗೆ ಬೆಳೆಯುವ ಪೊರೆಯಂಥ ಚರ್ಮವೊಂದು ಕೆಲವೊಮ್ಮೆ ಗರ್ಭಾಶಯದ ಹೊರಗೆ ಬೆಳೆಯುತ್ತದೆ. ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ವಿಪರೀತ ಸಂಕಟ ಅನುಭವಿಸಲು ಇದೂ ಒಂದು ಕಾರಣ. ಇನ್ನು ಕೆಲ ಮಹಿಳೆಯರಲ್ಲಿ ಜನನಾಂಗ ಮತ್ತು ಗರ್ಭಾಶಯದಲ್ಲಿ ಹುಣ್ಣುಗಳು ಬೆಳೆದಿರುತ್ತವೆ. ಋತುಸ್ರಾವದ ಅವಧಿ ದೀರ್ಘವಾಗಲು ಮತ್ತು ರಕ್ತಹೀನತೆ– ಸುಸ್ತಿಗೆ ಇದು ಕಾರಣವಾಗುತ್ತದೆ. ನಿರ್ದಿಷ್ಟ ಕಾರಣ ಪತ್ತೆಯಾದ ನಂತರ ಮಾತ್ರ ವೈದ್ಯರು ಸೂಕ್ತ ಚಿಕಿತ್ಸೆಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಯೋನಿಯೊಳಗೆ ಹಿಸ್ಟರೋಸ್ಕೋಪ್ ಎಂಬ ತೆಳು ಟ್ಯೂಬ್‌ ಸೇರಿಸುವ ವೈದ್ಯರು ಗರ್ಭಾಶಯದ ಸಮಸ್ಯೆ ಅರಿತುಕೊಳ್ಳಲು ಯತ್ನಿಸುತ್ತಾರೆ. ಜನನಾಂಗ ಮತ್ತು ಗರ್ಭಾಶಯದ ಹುಣ್ಣುಗಳ ಚಿಕಿತ್ಸೆಗೆ ಸಾಮಾನ್ಯವಾಗಿ ‘ಹಿಸ್ಟೊಸ್ಕೋಪಿಕ್ ರಿಸೆಕ್ಷನ್’ ರೋಗಪತ್ತೆ ಮತ್ತು ಚಿಕಿತ್ಸಾ ಪದ್ಧತಿ ಬಳಕೆಯಾಗುತ್ತದೆ.

ಗರ್ಭಾಶಯದ ಆಳದಲ್ಲಿ ಸಮಸ್ಯೆ ಇದ್ದಾಗ ಲ್ಯಾಪ್ರೊಸ್ಕೋಪಿಕ್ ಎಲೆಕ್ಟ್ರಾಕೊಜ್ಯುಲೇಶನ್ ರೋಗಪತ್ತೆ ಮತ್ತು ಚಿಕಿತ್ಸಾ ಪದ್ಧತಿಯನ್ನು ವೈದ್ಯರು ಅರಿಸಿಕೊಳ್ಳುತ್ತಾರೆ. ಈ ವಿಧಾನದಲ್ಲಿ ಏಕಮುಖಿ ಸೂಜಿಯನ್ನು ಸೂಕ್ಷ್ಮವಾಗಿ ಗರ್ಭಾಶಯದೊಳಗೆ ಸರಿಸಲಾಗುತ್ತದೆ.

ಗರ್ಭಾಶಯದೊಳಗಿನ ಜೀವಕೋಶಗಳ ಅಸಮರ್ಪಕ ಕಾರ್ಯವೈಖರಿ ಮತ್ತು ಗರ್ಭಾಶಯ ಸಂಕುಚಿತತೆ ಸಮಸ್ಯೆಗೆ ಚಿಕಿತ್ಸೆ ನೀಡಲು ವಿಧಾನ ಅವಕಾಶ ಕಲ್ಪಿಸುತ್ತದೆ. ಈ ಚಿಕಿತ್ಸಾ ವಿಧಾನಗಳು ಎಲ್ಲರಿಗೂ ಸೂಕ್ತವಲ್ಲ. ಯೋನಿ ತುಟಿಗಳ ಛೇದನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಚಿಕಿತ್ಸೆ ನೀಡಲು ಈ ವಿಧಾನ ಯೋಗ್ಯವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT