ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸುಗಳು ಸಾಲಿನ ರೂಪು ತಳೆದು...

ಚಿತ್ರಪಟ ಕಥನ
Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘ಬಿಡಿಎ’ (‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ’) ಎಂದಕೂಡಲೇ ಜನಸಾಮಾನ್ಯರ ಕಣ್ಣುಗಳಲ್ಲಿ ಸ್ವಂತ ನಿವೇಶನದ ಬೆಳಕೊಂದು ಸುಳಿದುಹೋಗುತ್ತದೆ. ಮಹಾನಗರ ನಾಲ್ಕೂ ದಿಕ್ಕಿಗೂ ಬೆಳೆದು, ‘ಬಿಡಿಎ ನಿವೇಶನ’ ಎನ್ನುವುದೀಗ ಮೊದಲಿನ ವರ್ಚಸ್ಸು ಕಳೆದುಕೊಂಡಿದೆ.

ಆದರೆ, 1982ರ (ಜುಲೈ 12) ಈ ಛಾಯಾಚಿತ್ರ ನೋಡಿ. ನಿವೇಶನಗಳಿಗಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ‘ಬಿಡಿಎ’ ಕಚೇರಿ ಎದುರು ಕನಸುಗಳೇ ಸಾಲುಗಟ್ಟಿದಂತೆ ಜನ ಸಾಲುಗಟ್ಟಿದ್ದಾರೆ.

ಈಗ ಆನ್‌ಲೈನ್‌, ಮೊಬೈಲ್‌, ಎಂದೆಲ್ಲ ತಂತ್ರಜ್ಞಾನ ಮುಂದುವರಿದಿರುವಾಗ ಇಂಥ ಸಾಲುಗಳನ್ನು ಕಾಣುವುದು ಅಪರೂಪ. ಬದಲಾದ ಕಾಲಘಟ್ಟವೊಂದನ್ನು ಸೂಚಿಸುವಂತಿರುವ ಈ ಚಿತ್ರಪಟ, ಬೆಂಗಳೂರಿನ ಬೆಳವಣಿಗೆಯಲ್ಲಾದ ಪಲ್ಲಟವನ್ನೂ ಜನರ ಕನಸುಗಳಲ್ಲಾದ ಜಿಗಿತವನ್ನೂ ಹಾಗೂ ಕನಸುಗಳ ಹಂಚಿಕೆಯ ಸಂಸ್ಥೆಯೊಂದರ ಗತವೈಭವವನ್ನೂ ಹೇಳುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT